google.com, pub-9939191130407836, DIRECT, f08c47fec0942fa0

Category: ಸುದ್ದಿ

ನಾಳೆ ನಾನು ಮತ್ತು ಗುಂಡ -2 ತೆರೆಗೆ : ನಾಯಕ ನಟ ರಾಕೇಶ್ ಅಡಿಗ ವಿವರಣೆ

ಶಿವಮೊಗ್ಗ :- ಪೋಯಂ ಪಿಕ್ಚರ್‍ಸ್ ಬ್ಯಾನರ್ ಅಡಿಯಲ್ಲಿ ರಘುಹಾಸನ್ ನಿರ್ದೇಶಿಸಿ, ನಿರ್ಮಿಸಿದ ಹುಡುಗ ಮತ್ತು ಶ್ವಾನದ ನಡುವಿನ ಬಾಂಧವ್ಯದ ಹೃದಯಸ್ಪರ್ಶಿ ಹಾಗೂ ಭಾವನಾತ್ಮಕ ಕಥೆ ಹೇಳುವ ನಾನು ಮತ್ತು ಗುಂಡ-2 ಚಿತ್ರವು ಸೆ. 5ರ ನಾಳೆ ರಾಜದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕನಟ…

ರಾಷ್ಟ್ರ ಭಕ್ತ ಬಳಗದ ನಾಯಕ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ನಾಳೆ ಧರ್ಮಸ್ಥಳಕ್ಕೆ ಧರ್ಮ ರಕ್ಷಾ ಜಾಥ

ಶಿವಮೊಗ್ಗ :- ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಮಾಜಿ ಉಪಮುಖ್ಯಮಂತ್ರಿ, ಹಾಗೂ ರಾಷ್ಟ್ರಭಕ್ತ ಬಳಗದ ನಾಯಕರಾದ ಕೆ ಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ನಾಳೆ ಆಯೋಜಿಸಿರುವ ಧರ್ಮ ರಕ್ಷಾ ಜಥಕೆ ಈಗಾಗಲೇ 150ಕ್ಕೂ ಹೆಚ್ಚು ವಾಹನಗಳು ಸಿದ್ಧಗೊಂಡಿದ್ದು ಸುಮಾರು 700 ರಿಂದ 800 ರಾಷ್ಟ್ರ,…

ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಶೇ. 50ರಷ್ಟು ರಿಯಾಯ್ತಿ : ಸೆ. 12 ಕೊನೇ ದಿನ…

ಶಿವಮೊಗ್ಗ :- ಸಂಚಾರಿ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ನ್ಯಾಯಾಲಯದ ಮತ್ತು ಸರ್ಕಾರದ ಆದೇಶದನ್ವಯ ದಂಡ ಕಟ್ಟಲು ವಿನಾಯಿತಿ ಪ್ರಕಟವಾಗಿದ್ದು, ಸೆ. 12ರ ಒಳಗೆ ದಂಡ ಕಟ್ಟುವವರಿಗೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದೆ. ಇದರ ಅನ್ವಯ ನಗರದ ಬಹುತೇಕ ವೃತ್ತಗಳಲ್ಲಿ ಸಾರ್ವಜನಿಕರು…

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ನಿಂದ ವಜ್ರ, ಪ್ಲಾಟಿನಂ, ಚಿನ್ನ, ಬೆಳ್ಳಿ ಆಭರಣಗಳ ಪ್ರದರ್ಶನ-ಮಾರಾಟ

ಶಿವಮೊಗ್ಗ :- ಭಾರತದ ಅತ್ಯಂತ ಪ್ರತಿಷ್ಠಿತ ಆಭರಣ ಕಂಪನಿಗಳಲ್ಲಿ ಒಂದಾದ ಬೆಂಗಳೂರಿನ ಹೆಸರಾಂತ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ನಗರದ ರಾಯಲ್ ಆರ್ಕೆಡ್‌ನಲ್ಲಿ ಇಂದಿನಿಂದ ವಜ್ರ, ಪ್ಲಾಟಿನಂ, ಚಿನ್ನ, ಬೆಳ್ಳಿ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ನಾಲ್ಕು…

ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಕರಣವನ್ನು ಎನ್‌ಐಎಗೆ ವಹಿಸಲು ಕೆ.ಎಸ್. ಈಶ್ವರಪ್ಪ ಒತ್ತಾಯ

ಶಿವಮೊಗ್ಗ :- ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳದ ಇಡೀ ಪ್ರಕರಣವನ್ನು ರಾಷ್ಟ್ರೀಯ ತನಿಖಾದಳ (ಎನ್‌ಐಎ) ಕ್ಕೆ ವಹಿಸಬೇಕು ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು. ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದ್ದ ಅನುಮಾನಗಳು, ಗೊಂದಲಗಳು ಈಗ…

ಶಿವಮೊಗ್ಗ ಹಿಂದೂ ಸಂಘಟನಾ ಮಹಾ ಮಂಡಳಿಯಿಂದ 81ನೇ ವರ್ಷದ ವಿಜೃಂಭಣೆಯ ಗಣೇಶೋತ್ಸವಕ್ಕೆ ಸಿದ್ಧತೆ

ಶಿವಮೊಗ್ಗ :- ಶಿವಮೊಗ್ಗ ನಗರದ ಹಿಂದೂ ಸಂಘಟನಾ ಮಹಾ ಮಂಡಳಿಯಿಂದ ಈ ಬಾರಿ 81ನೇ ವರ್ಷದ ಗಣೇಶೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಶಿವಮೊಗ್ಗದ ಅತಿ ದೊಡ್ಡ ಗಣಪತಿ ಉತ್ಸವ ಇದಾಗಿದ್ದು, ಈ ಬಾರಿ 11 ದಿನಗಳ ಕಾಲ ಗಣಪತಿಯನ್ನು ಪ್ರತಿಷ್ಠಾಪಿಸ ಲಾಗುತ್ತಿದೆ.…

ಸೂಡ ನಿವೇಶನ ಪಡೆದು ಮನೆ ಕಟ್ಟದಿದ್ದವರಿಗೆ ನೋಟೀಸ್ : ಶಿವಮೊಗ್ಗ ಸೂಡಾ ಅಧ್ಯಕ್ಷರ ಎಚ್ಚರಿಕೆ

ಶಿವಮೊಗ್ಗ :- ನಗರದಲ್ಲಿ ನಿರ್ಮಿಸಿರುವ ಅನಧಿಕೃತ ಬಡಾವಣೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಸೂಡ ನಿವೇಶನ ಪಡೆದು ಮನೆ ಕಟ್ಟದಿದ್ದವರಿಗೆ ನೋಟೀಸ್ ನೀಡಲಾಗುವುದು ಎಂದು ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಸರ್ಕಾರದ ಸೂಚನೆಯಂತೆ ನಗರದ…

ಇತಿಹಾಸ ಪ್ರಸಿದ್ಧ ತೋಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಕುಂಬೋತ್ಸವ ಭವ್ಯ ಮೆರವಣಿಗೆಗೆ ಸಿದ್ಧತೆ

ಶಿಕಾರಿಪುರ :- ತಾಲೂಕಿನ ಇತಿಹಾಸ ಪ್ರಸಿದ್ದ ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಆ. 23ರ ಶನಿವಾರ ಬೆಳಿಗ್ಗೆ 10ಕ್ಕೆ ಕುಂಬೋತ್ಸವ,ಮಹಾ ರುದ್ರಾಬಿಷೇಕ ಸಹಿತ ವಿಶೇಷ ಪೂಜೆ ಸ್ವಾಮಿಯ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ. ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ನಾಡಿನಾದ್ಯಂತ ಲಕ್ಷಾಂತರ…

ನಾಳೆ ನಾಡಿದ್ದು, ಶಿವಮೊಗ್ಗ ನಗರದ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ ಗೊತ್ತಾ…?

ಶಿವಮೊಗ್ಗ :- ಶಿವಮೊಗ್ಗ ನಗರದ ಭರಮಪ್ಪ ನಗರದಲ್ಲಿ ಆ. 22ರ ನಾಳೆ ವಿದ್ಯುತ್ ಕಾಮಗಾರಿ ಹಮ್ಮಿಕೊಂಡಿದ್ದು ಅಶೋಕ ರಸ್ತೆ, ಎಸ್ ಪಿಎಂ ರಸ್ತೆ, ವಿನಾಯಕ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ…

ಶಿವಮೊಗ್ಗದಲ್ಲಿ ಲಾಡ್ಜ್-ಹೋಂ ಸ್ಟೇಗಳಿಗೆ ಪೊಲೀಸರ ದಿಢೀರ್ ಭೇಟಿ : ಪರಿಶೀಲನೆ, ಸಲಹೆ ಸೂಚನೆ

ಶಿವಮೊಗ್ಗ :- ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಿಕಾರಿಯಪ್ಪ ಎಸ್. ರಮೇಶ್ ಕುಮಾರ್, ರವರ ಮಾರ್ಗದರ್ಶನದಲ್ಲಿ, ಜಿಲ್ಲೆಯ ವಿವಿಧ ಪೊಲೀಸ್ ಉಪ ವಿಭಾಗಗಳ ಪೊಲೀಸ್ ಉಪಾಧೀಕ್ಷಕರವರ ಮೇಲ್ವಿಚಾರಣೆಯಲ್ಲಿ, ಶಿವಮೊಗ್ಗ ಜಿಲ್ಲೆಯದ್ಯಂತ ಪೊಲೀಸ್ ನಿರೀಕ್ಷಕರು ಹಾಗೂ ಪೊಲೀಸ್ ಉಪ…