ಶಿವಮೊಗ್ಗ :- ಮೈಸೂರು ಎಜುಕೇಷನ್ ಅಕಾಡೆಮಿ ಟ್ರಸ್ಟ್‌ವತಿಯಿಂದ ಎಸ್.ಎಸ್.ಎಲ್.ಸಿ. ಮಕ್ಕಳಿಗಾಗಿ ಡಿ. 13ರಂದು ಬೆಳಿಗ್ಗೆ 9.30ರಿಂದ ಸಂಜೆ 5 ಗಂಟೆಯವರೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪರೀಕ್ಷೆ ಒಂದು ಹಬ್ಬ-ಸಂಭ್ರಮಿಸಿ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಎಜುಕೇಷನ್ ಅಕಾಡೆಮಿ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಮೈಸೂರು ಎಜುಕೇಷನ್ ಅಕಾಡೆಮಿ ಟ್ರಸ್ಟ್‌ನಲ್ಲಿ ಈಗ ಹೊಸ ಆಡಳಿತ ಬಂದಿದ್ದು, ಗಂಗೋತ್ರಿ ಸ್ವತಂತ್ರ ಪದವಿಪೂರ್ವ ಕಾಲೇಜನ್ನು ವಹಿಸಿಕೊಂಡಿದ್ದೇವೆ. ಅದರ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದು, ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುವ ಹಿನ್ನಲೆಯಲ್ಲಿ ಈ ಕಾಲೇಜಿನ ನಿರ್ವಹಣೆಯನ್ನು ವಹಿಸಿಕೊಳ್ಳಲಾಗಿದೆ. ಬಡ ಮತ್ತು ಮಧ್ಯಮವರ್ಗದವರಿಗಾಗಿ ವಿಶೇಷ ಆಸಕ್ತಿ ವಹಿಸಲಿದ್ದು, ಎಲ್ಲರೂ ಶಿಕ್ಷಣ ಪಡೆಯಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಇದೀಗ ಕಾಲೇಜಿನಲ್ಲಿ ಉತ್ತಮ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ. ಗ್ರಂಥಾಲಯ, ಹಾಸ್ಟೆಲ್, ಬಸ್ ಸೌಲಭ್ಯ, ಉತ್ತಮ ಪ್ರಯೋಗಾಲಯ, ಎಸಿ ಸ್ಮಾರ್ಟ್‌ಕ್ಲಾಸ್ ಮುಂತಾದ ಆಧುನಿಕ ಸೌಲಭ್ಯಗಳನ್ನು ಗಂಗೋತ್ರಿ ಪಿಯು ಕಾಲೇಜ್ ಹೊಂದಿದ್ದು, ಕಳೆದ ಹಲವು ವರ್ಷಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. ಈ ಕಾಲೇಜನ್ನು ಮತ್ತಷ್ಟು ಉನ್ನತ ಮಟ್ಟಕ್ಕೇರಿಸಿ ಶಿವಮೊಗ್ಗದಲ್ಲಿ ಪಿಯು ಕಾಲೇಜಿಗೆ ಸಂಬಂಧಪಟ್ಟಂತೆ ಒಳ್ಳೆಯ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಲು ಎಲ್ಲಾ ಸೇರಿ ಪ್ರಯತ್ನಿಸುತ್ತಿದ್ದೇವೆ. ಪಿಯು ತರಗತಿಗಳ ಜೊತೆಗೆ ನೀಟ್, ಜೆಇಇ, ಸಿಇಟಿ, ಪರೀಕ್ಷೆಗೆ ತಯಾರಿಯನ್ನು ಕೂಡ ಮಾಡಲಾಗುವುದು. ವಿದ್ಯಾರ್ಥಿಗಳು ಇದಕ್ಕಾಗಿ ಬೇರೆಕಡೆ ಟ್ಯೂಷನ್‌ಗೆ ಹೋಗುವ ಅವಶ್ಯಕತೆ ಇಲ್ಲ ಎಂದರು.
ಪರೀಕ್ಷೆ ಒಂದು ಹಬ್ಬ ಮೈಸೂರು ಎಜುಕೇಷನ್ ಅಕಾಡೆಮಿ ಟ್ರಸ್ಟ್ ಎಸ್.ಎಸ್.ಎಲ್.ಸಿ. ಮಕ್ಕಳನ್ನು ಉದ್ದೇಶವಾಗಿಟ್ಟುಕೊಂಡು ಅವರು ಹೇಗೆ ಪರೀಕ್ಷೆಗೆ ತಯಾರಿಯಾಗಬೇಕು. ತಮಗಿರುವ ಗೊಂದಲಗಳನ್ನು ಹೇಗೆ ನಿವಾರಿಸಿಕೊಳ್ಳಬೇಕು. ಮುಂತಾದ ವಿಷಯಗಳಿಗೆ ಸಂಬಂಧಪಟ್ಟಂತೆ ಪರೀಕ್ಷೆ ಒಂದು ಹಬ್ಬ ಅದನ್ನು ಸಂಭ್ರಮಿಸಿ ಎಂಬ ಹಿನ್ನಲೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
ಈ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ಸಿಇಓ ಎನ್. ಹೇಮಂತ್, ಶಾಲಾ ಮತ್ತು ಸಾಕ್ಷಾರತಾ ಇಲಾಖೆಯ ಉಪನಿರ್ದೇಶಕ ಎಸ್.ಆರ್. ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಅನುದಾನ ರಹಿತ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್, ಮ್ಯಾಮ್ಕೋಸ್ ಎಂ.ಡಿ. ಶ್ರೀಕಾಂತ್ ಬರವೆ ಭಾಗವಹಿಸುವರು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರಿನ ವ್ಯಕ್ತಿತ್ವ ವಿಕಸನ ಗುರು ಆರ್.ಎ. ಚೇತನ್‌ರಾಮ್ ಹಾಗೂ ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ ಭಾಗವಹಿಸಲಿದ್ದು, ಪರೀಕ್ಷೆಗಳ ಸವಾಲು ಕುರಿತು, ಪರೀಕ್ಷೆಯಲ್ಲಿ ವಿಷಯ ನೆನಪಿಟ್ಟುಕೊಳ್ಳುವುದು ಹೇಗೆ ? ಎಂಬುದರ ಬಗ್ಗೆ ಉಪನ್ಯಾಸ ನೀಡುವರು. ಸಂಜೆ ೪ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಲಾ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜಿ.ವಿ. ಹರಿಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಪ್ರಾಂಶುಪಾಲ ರೇಣುಕಾರಾಧ್ಯ, ಆಡಳಿತಾಧಿಕಾರಿ ರೂಪಾ ಪುಣ್ಯಕೋಟಿ, ಸಂಸ್ಥೆಯ ಉಪಾಧ್ಯಕ್ಷರಾದ ಎನ್.ವಿ. ಮಂಜುನಾಥ್, ಬಿ.ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಜಗದೀಶ್, ಜಂಟಿ ಕಾರ್ಯದರ್ಶಿ ಡಾ.ಹೆಚ್.ಇ. ಇಫ್ರಾನ್ ಅಹ್ಮದ್, ಕೆ. ರಾಕೇಶ್‌ಗೌಡ, ನಿರ್ದೇಶಕ ಚಂದನ್, ಎಂ.ಪಿ. ದಿನೇಶ್ ಪಟೇಲ್, ಪಿ.ಎಸ್. ಗಿರೀಶ್‌ರಾವ್, ಡಿ. ಪರಮೇಶ್ವರಪ್ಪ ಸೇರಿದಂತೆ ಹಲವರಿದ್ದರು.