google.com, pub-9939191130407836, DIRECT, f08c47fec0942fa0

ಶಿವಮೊಗ್ಗ:- ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ಉ ಮುಖ್ಯಮಂತ್ರಿಗಳ ಕುರ್ಚಿ ಕದನದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಈ ರಾಜ್ಯದ ರೈತರ ಬಡವರ ಹಾಗೂ ಶೋಷಿತ ವರ್ಗದವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲದಂತಾಗಿದೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಇದರಿಂದಾಗಿ ಸರ್ಕಾರ ಸಂಪೂರ್ಣ ಸತ್ತು ಹೋಗಿದೆ ಎಂದು ಕಿಡಿಕಾರಿದರು.

ಬೆಳಗಾವಿ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಲೇ ನಾವುಗಳು ಸರ್ಕಾರಕ್ಕೆ ಅಧಿವೇಶನವನ್ನು ಮುಂದುವರಿ ಮೊದಲು ನಿಮ್ಮ ಅಧಿಕಾರ ಹಸ್ತಾಂತರ ಮತ್ತು ಕುರ್ಚಿ ಕದನವನ್ನ ಬಗೆಹರಿಸಿಕೊಳ್ಳಿ ನಂತರವೇ ಅಧಿವೇಶನವನ್ನ ನಡೆಸಿ ಎಂಬ ಆದರೆ ಇಂದು ನಮ್ಮ ಸಲಹೆಯನ್ನ ಪರಿಗಣಿಸದೆ ಅಧಿವೇಶನವನ್ನು ನಡೆಸುತ್ತಿದ್ದು ಪ್ರತಿನಿತ್ಯ ಬೆಳಗಾದರೆ ಕುರ್ಚಿ ಕದನದ ಬಗ್ಗೆ ಚರ್ಚೆಯಾಗುತ್ತಿದೆ. ಮಂತ್ರಿಗಳು ಸಾಧನದಲ್ಲಿ ಪಾಲ್ಗೊಳ್ಳುತ್ತಿಲ್ಲ ಇದರಿಂದಾಗಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಸಮರ್ಪಕವಾದ ಚರ್ಚೆಯಾಗುತ್ತಿಲ್ಲ ಎಂದು ಹೇಳಿದರು
ಸಿ .ಎಮ್ – ಡಿ ಸಿ ಎಂ ಒಗ್ಗಟ್ಟಿನ ಮಂತ್ರ ಜಪಿಸುತ್ತಾ ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತ ಕಾಲಕಳೆಯುತ್ತಿದ್ದಾರೆ. ಇದರಿಂದ ಕಬ್ಬು ಬೆಳೆಗಾರರ ಸಮಸ್ಯೆಯನ್ನ ಇದುವರೆಗೂ ಬಗೆಹರಿಸಿಲ್ಲ ಮೆಕ್ಕೆಜೋಳ ಸಮಸ್ಯೆ ಕೂಡ ಹಾಗೆ ಇದೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ ಎಂ ಎಸ್ ಪಿ ದರವನ್ನ ನಿಗದಿ ಮಾಡಿದೆ ಆದರೆ ರಾಜ್ಯ ಸರ್ಕಾರ ಇದುವರೆಗೂ ಖರೀದಿ ಕೇಂದ್ರಗಳನ್ನ ಆರಂಭಿಸಿಲ್ಲ ಇದರಿಂದಾಗಿ ರೈತ ಕಡಿಮೆ ದರಕ್ಕೆ ತನ್ನ ಮೆಕ್ಕೆಜೋಳವನ್ನು ಮಾರಾಟ ಮಾಡಿದ್ದಾನೆ ರೈತನಿಗೆ ಆರ್ಥಿಕ ನಷ್ಟ ಉಂಟಾಗಿದೆ ಇದಕ್ಕೆ ರಾಜ್ಯ ಸರ್ಕಾರವೇ ನೇರವಾಗಿ ಎಂದು ಆರೋಪಿಸಿದರು.

ಬೆಳೆ ಪರಿಹಾರ ಸಮರ್ಪಕವಾಗಿ ವಿತರಣೆಯಾಗಿಲ್ಲ ರಾಜ್ಯದ ಜನತೆಗೆ ಕೃಷಿ ಸಚಿವರು ಯಾರೆಂಬುದೇ ಗೊತ್ತಿಲ್ಲ ಯಾವೊಬ್ಬ ಸಚಿವರು ರಾಜ್ಯ ಪ್ರವಾಸ ಮಾಡುತ್ತಿಲ್ಲ ಇದರಿಂದಾಗಿ ಸರ್ಕಾರ ಸಂಪೂರ್ಣ ನಿಷ್ಕ್ರೀಯವಾಗಿರುವುದು ಗೋಚರವಾಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳು ತ್ತೇವೆ ಎಂದು ಹೇಳುತ್ತಾರೆ ಖರ್ಗೆ ನಿಸ್ಸಾಯಕರಾಗಿ ಮಾತನಾಡುತ್ತಾರೆ ಯತಿಂದ್ರ ಸಿದ್ರಾಮಯ್ಯ 5 ವರ್ಷ ನಮ್ಮಪ್ಪನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ ಇದರಿಂದಾಗಿ ಕಾಂಗ್ರೆಸ್ ನಾಯಕರಲ್ಲಿ ಶಾಸಕರಲ್ಲಿ ಯತೀಂದ್ರ ಸಿದ್ದರಾಮಯ್ಯನವರೇ ಹೈಕಮಾಂಡ ಎಂಬ ಭಾವನೆ ಮೂರುತಿದೆ ಎಂದವರು ಒಟ್ಟಾರೆ ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿ ಕದನದಿಂದಾಗಿ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದು ಹೇಳಿದರು.

ಕೇಂದ್ರದ ಕಡೆ ಕೈ ತೋರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಚುನಾವಣಾ ಸಂದರ್ಭದಲ್ಲಿ 35000 ಕೋಟಿಯನ್ನ ನೀರಾವರಿ ಯೋಜನೆಗಳಿಗೆ ಮೀಸಲಿಡುತ್ತೇನೆ ಎಂದು ಹೇಳಿದ್ದರು ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳಾದರೂ ಕೂಡ ತಮ್ಮ ಮಾತನ್ನ ಉಳಿಸಿಕೊಂಡಿಲ್ಲ ,ತಮ್ಮ ಪಾಲಿನ ಹಣವನ್ನು ಮಂಜೂರು ಮಾಡಿದರೆ ಕೇಂದ್ರ ಉಳಿದ ಹಣವನ್ನು ನೀಡುತ್ತದೆ ಇದು ನಿಯಮವೂ ಹೌದು ಆದರೆ ಪ್ರತಿಯೊಂದುಕ್ಕೂ ಕೇಂದ್ರದ ಕಡೆ ಕೈ ತೋರಿಸುವ ಮೂಲಕ ತಮ್ಮ ಜವಾಬ್ದಾರಿಯನ್ನ ಮರೆಮಾಚುತಿದ್ದಾರೆ ಎಂದು ಆರೋಪಿಸಿದರು.

ಭಾಗ್ಯಗಳಿಂದಾಗಿ ಕಾಂಗ್ರೆಸ್ ನಾಯಕರ ಶಾಸಕರ ಕೈಗೆ ಹಣ ಸಿಗದಂತಾಗಿದೆ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆಗಳು ಸಂಪೂರ್ಣ ಗುಂಡಿಗಳಿಂದ ಆವೃತವಾಗಿವೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲದಂತಾಗಿದೆ ಇದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಕರಿ ಎಂದು ಟೀಕಿಸಿದರು.

ದ್ವೇಷ ಭಾಷಣ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಶಾಸನವನ್ನು ತರುತ್ತಿದ್ದಾರೆ ಇದು ವಿರೋಧ ಪಕ್ಷಗಳನ್ನು ಕಟ್ಟಿ ಹಾಕುವ ಪ್ರಯತ್ನ ಶ್ರೀಮತಿ ಇಂದಿರಾ ಗಾಂಧಿಯವರು ಜಾರಿಗೊಳಿಸಿ ದಂತಹ ತುರ್ತು ಪರಿಸ್ಥಿತಿಯ ಕರಾಳ ದಿನವನ್ನ ನೆನಪಿಸು ವಂತಿದೆ ಇಂತಹ ಯಾವುದೇ ಕೊಬ್ಬು ಬೆದರಿಕೆಗೆ ವಿರೋಧ ಪಕ್ಷ ಜಗ್ಗುವುದಿಲ್ಲ ನಮ್ಮ ಹೋರಾಟವನ್ನು ನಾವು ಮುಂದುವರಿಸು ತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಜನರಿಂದ ಸಂಪೂರ್ಣ ದೂರವಾಗುತ್ತಿದೆ 400 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷ ಎಂದು ಎರಡಂಕಿಯ ಸ್ಥಾನಕ್ಕೆ ಇಳಿದು ಇಳಿಯುವ ಮೂಲಕ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮುತ್ತಿದೆ ರಾಹುಲ್ ಗಾಂಧಿಯವರು ಮತಗಳ ದನದ ಬಗ್ಗೆ ಬಹಳಷ್ಟು ಮಾತನಾಡುತ್ತಾರೆ ಅದಕ್ಕೆ ಬಿಹಾರ್ದ ಜನತೆ ತಕ್ಕ ಉತ್ತರವನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ಕುಮಾರಸ್ವಾಮಿ, ಟಿ.ಡಿ. ಮೇಘರಾಜ್, eನೇಶ್ವರ್, ನಾಗರಾಜ್, ಎನ್.ಡಿ. ಸತೀಶ್, ಮಾಲತೇಶ್, ಶಿವರಾಜ್, ಚಂದ್ರಶೇಖರ್, ಮಂಜುನಾಥ್, ಅಣ್ಣಪ್ಪ ಇದ್ದರು.

Leave a Reply

Your email address will not be published. Required fields are marked *