google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಹೋಳಿ ಹುಣ್ಣಿ ಮೆಯಂದು ದುರ್ಗಿಗುಡಿ ದುರ್ಗ ಮ್ಮ- ಮರಿಯಮ್ಮನ ತೇರು ಎಳೆಯಲಾಗಿದೆ. ಹೃದಯ ಭಾಗದ ದುರ್ಗಿಗುಡಿಯಲ್ಲಿ ಇಂದು ಬೆಳಿಗ್ಗೆ ಸಮಸ್ತ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದೆ.

ದುರ್ಗಪರಮೇಶ್ವರಿ ಸೇವಾ ಸಮಿತಿ ನೇತೃತ್ವದಲ್ಲಿ ಭಕ್ತರು ತೇರನ್ನು ಎಳೆದಿದ್ದು,ಅಮ್ಮನವರ ರಥೋತ್ಸ ವದಲ್ಲಿ  ಶಿವಮೊಗ್ಗ ಮಾತ್ರ ವಲ್ಲದೆ ಸುತ್ತಮುತ್ತಲ ಗ್ರಾಮಗಳಿಂದಲೂ ಭಕ್ತರು  ಪಾಲ್ಗೊಂಡಿದ್ದರು. ಹೋಳಿ ಹುಣ್ಣಿಮೆಯಂದು ನಡೆ ಯುವ ರಥೋತ್ಸವಕ್ಕೆ ಹಲವು ವರ್ಷಗಳ ಇತಿಹಾಸವಿದೆ. ತೇರು ಎಳೆಯಲು ವಿವಿಧ ಭಾಗಗಳ ಭಕ್ತರು ಆಗಮಿಸಿದ್ದರು. ದುರ್ಗಿಗುಡಿಯಲ್ಲಿ ತೇರನೆಳೆದು ನಂತರ ದೇವಿಯ ಗುಡಿ ಎದುರು ನಿಲ್ಲಿಸಿದ ರಥದ ಬಳಿ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಜಾತ್ರೆ ಅಂಗವಾಗಿ ದೇವಸ್ಥಾನ ದಲ್ಲಿ ವಿಶೇಷ ಪೂಜೆ ನಡೆಯಿತು. ಬಳಿಕ ಪಲ್ಲಕ್ಕಿಯಲ್ಲಿ ದೇವರನ್ನು ತಂದು ರಥದಲ್ಲಿ ಇರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇಗುಲದ ಮುಂಭಾಗದಿಂದ ದುರ್ಗಿಗುಡಿ ಮುಖ್ಯರಸ್ತೆವರೆಗೆ ಭಕ್ತರು ರಥವನ್ನು ಎಳೆದು ದೇವರ ಆಶೀರ್ವಾದ ಬೇಡಿದರು. ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವಿ ರಥೋತ್ಸವವು ಸಾಮಾನ್ಯವಾಗಿ ಮಧ್ಯಾಹ್ನ ಹೊತ್ತಿಗೆ ನಡೆಯುತ್ತದೆ. ಆದರೆ ಇವತ್ತು ಚಂದ್ರಗ್ರಹಣ ಹಿನ್ನೆಲೆ ಈ ಬಾರಿ ಬೆಳಗ್ಗೆ ರಥೋತ್ಸವ ನಡೆಯಿತು.  ರಥೋತ್ಸವದ ಸಂದರ್ಭ ಪಡ್ಡು ಅಣಪ್ಪ ಇನ್ನಿತರ ದಾನಿಗಳು ಅನ್ನ ಸಂತರ್ಪಣೆ, ನೀರು, ಪಾನಕ ವಿತರಣೆ ಮಾಡಲಾಯಿತು.

ಇನ್ನು, ಶ್ರೀ ದುರ್ಗಮ್ಮ, ಶ್ರೀ ಮರಿಯಮ್ಮ ದೇವರ ರಥೋತ್ಸವದ ಬಳಿಕವೇ ಶಿವಮೊಗ್ಗ ನಗರದಲ್ಲಿ ಹೋಳಿ ಹಬ್ಬ ಆಚರಿಸುವುದು ವಾಡಿಕೆ. ಒಟ್ಟಾರೆ ಈ ರಥೋತ್ಸವಕ್ಕೆ ಬಾರಿ ಸಂಖೈಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ನಗರದ ವಿವಿಧೆಡೆ ಹೋಳಿ ನಿಮಿತ್ತ ರತಿ ಮನ್ಮಥರ ಪ್ರತಿಷ್ಠಾಪನೆ…

ಹೋಳಿ ನಿಮಿತ್ತ ನಗರದ ಗಾಂಧಿಬಜಾರಿನ ರವಿವರ್ಮ ರಸ್ತೆ, ಬಸವೇಶ್ವರ ದೇವಸ್ಥಾನ, ತುಳಜಾ ಭವಾನಿ ಅಮ್ಮನವರ ಟೆಂಪಲ್, ರವಿವರ್ಮ ರಸ್ತೆಯ ಶ್ರೀರಾಮ ಮಂದಿರ, ಬಿಬಿ ರಸ್ತೆಯ ಶ್ರೀ ಆರ್ಯ ಅಕ್ಷೋಬ್ಯ ತೀರ್ಥ ಮಠ ಹಾಗೂ ಕುಂಬಾರ ಬೀದಿಯಲ್ಲಿ ಹೋಳಿ ಹಬ್ಬದ ನಿಮಿತ್ತ ರತಿ ಮನ್ಮಥರ ಪುತ್ಥಳಿಗಳನ್ನು ನಿರ್ಮಿಸಲಾಗಿದೆ.

ನಗರದ  ಗಾಂಧಿಬಜಾರ್  ಗೆಳೆಯರು ಸೇರಿ ಈ ಬಾರಿ ಗಾಂಧಿಬಜಾರ್‌ನಲ್ಲಿ  ವಿಶೇಷ ರೀತಿ ಹೋಳಿ ಹಬ್ಬದ  ಆಚರಣೆ ಮಾಡಲಿದ್ದಾರೆ. ಹೋಳಿ ನಿಮಿತ್ತ ರೈನ್ ಡ್ಯಾನ್ಸ್ (ಮಳೆ ನೃತ್ಯ)  ಏರ್ಪಡಿ ಸಿದ್ದು, ಮಹಿಳೆಯರಿಗೆ ಮತ್ತು ಪುರುಷರಿಗೆ  ಪ್ರತ್ಯೇಕವಾಗಿರುತ್ತದೆ.  ಡಿಜೆ ಡ್ಯಾನ್ಸ್ ಸಹ ಇರುತ್ತದೆ. ಶಿವಮೊಗ್ಗದ ಜನತೆ ಹೋಳಿ  ಆಡುವುದರ ಮೂಲಕ ಸಂಭ್ರಮಿಸೋಣ ಎಂಬುದು ಅವರ ಮನವಿಯಾಗಿದೆ.

ಗಾಂಧಿ ಬಜಾರ್ ವರ್ತಕರ ಸಂಘ ಮತ್ತು  ಈ ಭಾಗದ  ಎಲ್ಲಾ ಸಂಘ ಸಂಸ್ಥೆಗಳ  ಮತ್ತು ಎಲ್ಲಾ ಸಮಾಜ ಸಂಸ್ಥೆಗಳ  ಸಹಯೋಗದಿಂದ  ಮಾ. 4ರ ನಾಳೆ ಬೆಳಿಗ್ಗೆ  8.30ರಿಂದ 12.30ರ ವರೆಗೆ ರಂಗಿನಾಟದೊಂದಿಗೆ ಹೋಳಿ ಹಬ್ಬವನ್ನು ರಂಗುಗೊಳಿಸೋಣ ಎಂಬುದು ಈ ಭಾಗದ  ಪ್ರಮುಖ ವಿಜಯಕುಮಾರ್  ಜೆ. ದಿನಕರ್ ಹಾಗೂ ಮತ್ತಿತರ ಪ್ರಮುಖರ ಮನವಿಯಾಗಿದೆ. ಎಲ್ಲೆಡೆ ನಾಳೆ ಕಾಮದಹನ ಮತ್ತು ಓಕುಳಿ ಆಟ ಜರುಗಲಿದೆ. ಸರ್ವರು ಪಾಲ್ಗೊಳ್ಳಲು ಕೋರಿದೆ.

Leave a Reply

Your email address will not be published. Required fields are marked *