ಶಿವಮೊಗ್ಗ :- ಸ್ಟಾರ್ -೧ ಎಂಬ ಕನ್ನಡ ಮನರಂಜನಾ ವಾಹಿನಿ ರಾಜ್ಯದ ಎಲ್ಲಾ ಕೇಬಲ್ ಬಾಕ್ಸ್ ಗಳಲ್ಲಿ ಸದ್ಯದಲ್ಲಿಯೇ ಆರಂಭಗೊಳ್ಳುತ್ತಿದ್ದು, ಇದರ ಉದ್ಘಾಟನಾ ಸಮಾರಂಭ ಡಿ. ೨೮ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ಸಂಪಾದಕ ರಾಸಾ ಈಶ್ವರ ಅಭಯ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ನೂತನ ವಾಹಿನಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಮನರಂಜನೆ, ಧಾರಾವಾಹಿಗಳು, ನೃತ್ಯ, ಗಾಯನ, ಇತಿಹಾಸ, ಕಲೆ, ಸಂಸ್ಕತಿ, ಸಾಹಿತ್ಯ ಮುಂತಾದ ದೇಶೀಯ ಸೊಗಡಿನ ಹತ್ತು ಹಲವಾರು ಕಾರ್ಯಕ್ರಮ ಮೂಡಿ ಬರಲಿವೆ. ಈಗಾಗಲೇ ಎಲ್ಲಾ ಶೋಗಳಿಗೆ ಸಂಬಂಧಿಸಿದ ಆಡಿಷನ್ ಗಳು, ಶೂಟಿಂಗ್ ಗಳು ಆರಂಭಗೊಂಡಿದ್ದು, ಎಲ್ಲವೂ ಇದೇ ಡಿ. 28ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿವೆ ಎಂದರು.
ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮಹನೀಯರಿಗೆ ಸ್ಟಾರ್ -1 ಐಕಾನ್ ಪ್ರಶಸ್ತಿ ಅಲ್ಲದೇ, ಸಿನಿಮಾ ಮತ್ತು ಧಾರಾವಾಹಿ ಕಲಾವಿದರಿಗೆ ಸ್ಟಾರ್ -1 ಕುಟುಂಬ ಅವಾರ್ಡ್, ಸಾಹಿತಿಗಳಿಗೆ ಸಾಹಿತ್ಯ ಸೇವಾ ಸಿಂಧೂರ ಅವಾರ್ಡ್ ಹಾಗೂ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 70ಕ್ಕೂ ಹೆಚ್ಚು ಅಂಕ ಪಡೆದು ತೇರ್ಗಡೆಯಾದ 250 ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಪ್ರೋ ಹೆಡ್ ಶಿವಮೊಗ್ಗ ಮೂಲದ ತೇಜಶ್ರೀ ಎಸ್.ಹೆಚ್., ಡಾ. ಯೋಗೀಶ್, ಗಾರಾ ಶ್ರೀನಿವಾಸ್, ಸೌಮ್ಯಾ, ಶ್ರೀನಿವಾಸ್ ಉಪಸ್ಥಿತರಿದ್ದರು.