ಶಿವಮೊಗ್ಗ :- ದುರ್ಗಿಗುಡಿ ಕನ್ನಡ ಸಂಘದಿಂದ ಇಂದು ಶ್ರೀ ಭುವನೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆಯು ರಾಮಣ್ಣ ಶ್ರೇಷ್ಠಿ ಪಾರ್ಕಿನಿಂದ ಹೊರಟು, ಗಾಂಧಿಬಜರ್ ಮಾರ್ಗವಾಗಿ ದುರ್ಗಿಗುಡಿಯಲ್ಲಿರುವ ವೀರ ಶಿವಪ್ಪನಾಯಕ ಭವ್ಯ ಮಂಟಪ ತಲುಪಿತು.
ಇದಕ್ಕೂ ಮೊದಲು ವೀರಶಿವಪ್ಪನಾಯಕರ ಪ್ರತಿಮೆಗೆ ಪುಷ್ಪಹಾರವನ್ನು ಅರ್ಪಿಸಲಾಯಿತು. ಮೆರವಣಿಗೆಯಲ್ಲಿ ಎ.ಡಿ. ತ್ಯಾಗರಾಜ್‌ರವರ ಸಹ್ಯಾದ್ರಿ ರೋಡ್ ಬ್ಯಾಂಡ್ ಆರ್ಕೆಸ್ಟ್ರಾ ಗಮನಸೆಳೆಯಿತು. ಇಂದಿನಿಂದ ಡಿ. 21ರ ವರೆಗೆ 57ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ದುರ್ಗಿಗುಡಿ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಾಜಋಷಿ ಭರತೇಶ್ ತಿಳಿಸಿದ್ದಾರೆ.
ಡಿ.೧೮ರ ನಾಳೆ ಭದ್ರಾವತಿಯ ಪ್ರವೀಣ್ ಮತ್ತು ಅಂಬಿಕಾ ಸಂಗಡಿಗರಿಂದ, ಡಿ. 19ರಂದು ಭದ್ರಾವತಿಯ ನಾಟ್ಯ ಮಯೂರಿ ಕಲಾ ನಿಕೇತನ ತಂಡದಿಂದ ಡಿ. 21ರಂದು ಭದ್ರಾವತಿಯ ಶೇಖರ್ ಮೆಲೋಡಿಯಸ್ ತಂಡದಿಂದ ಚಿತ್ರಗೀತೆ ಮತ್ತು ನೃತ್ಯ ಕಾರ್ಯಕ್ರಮಗಳು ನಡೆಯಲಿವೆ. ಡಿ. ೨೧ರಂದು ಸಂಜೆ 7 ಗಂಟೆಗೆ ನಡೆಯುವ ವಿಶೇಷ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸರಿಗಮಪ ಖ್ಯಾತ ಗಾಯಕರಾದ ಕಾರ್ತಿಕ್ ನಾಗಲಾಪೂರ್, ಮೆಹಬೂಬ್ ಸಾಬ್, ಆರಾಧ್ಯ ರಾವ್, ಸವಿಶ್ರೀ, ಆಂಕರ್ ಚಂದನಾ, ಭಾಗವಹಿಸಲಿದ್ದಾರೆ.
ಇಂದಿನ ಮೆರವಣಿಗೆಯಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಸಿ. ನರಸಿಂಹ ಗಂಧದಮನೆ, ಬಿ. ಲಿಂಗರಾಜು, ಎಲ್. ಗೋವಿಂದರಾಜ್, ವಿ. ಮಯೂರ್, ಎಸ್.ಕೆ. ಪ್ರಕಾಶ್, ಹಾಲಿ ಪದಾಧಿಕಾರಿಗಳಾದ ಗೌರವಾಧ್ಯಕ್ಷ ಸ.ನ.ಮೂರ್ತಿ, ಅಧ್ಯಕ್ಷ ನರಸಿಂಹ ಪಾಂಡುಸ್ವಾಮಿ, ಉಪಾಧ್ಯಕ್ಷ ಪುಟ್ಟರಾಜು, ಪ್ರಧಾನ ಕಾರ್ಯದರ್ಶಿ ಎ. ಭರತೇಶ್, ಸಹಕಾರ್‍ಯದರ್ಶಿ ಪಿ.ಜಿ. ಶಿವಪ್ರಕಾಶ್, ಖಜಂಚಿ ಎನ್. ಸತೀಶ್ ನಾಯಕ್, ನಿರ್ದೇಶಕರುಗಳಾದ ಟಿ.ವಿ. ರಾಘವೇಂದ್ರ, ಎಸ್.ಡಿ. ಗುರುಮೂರ್ತಿ, ಜಿ. ಚಂದ್ರಶೇಖರ್, ಎಂ. ಯೋಗೀಶ್, ಎಂ. ರಾಕೇಶ್, ಎಸ್.ಸಿ. ಹರೀಶ್, ಎಸ್. ಮಂಜುನಾಥ್, ಎಸ್.ಎಂ. ಮಧುಸೂದನ್, ಎಸ್.ಎಸ್. ಮೋಹನ್, ಕಿರಣ್ ಕಂಕಾರಿ, ಕಿರಣ್‌ಕುಮಾರ್, ಶಿವಾನಂದ್, ಆರ್. ಕಿರಣ್, ಎಸ್.ಟಿ. ಪ್ರಸನ್ನಕುಮಾರ್, ಎಸ್.ಎಸ್. ಧನಂಜಯ್ಯ, ಎಲ್.ಎಂ. ಶರತ್, ಪಿ.ಜಿ. ಮಧುಕರ್, ಸಂತೋಷ್, ಯಶವಂತ್ ಶೆಟ್ಟಿ ಸೇರಿದಂತೆ ಹಲವರಿದ್ದರು.