google.com, pub-9939191130407836, DIRECT, f08c47fec0942fa0

ತೀರ್ಥಹಳ್ಳಿ :- ತಾಲ್ಲೂಕಿನಲ್ಲಿ ಸಾಕಷ್ಟು ಅಂಗವಿಕಲರಿದ್ದಾರೆ. ಅವರಾಗಿಯೇ ಅಂಗವಿಕಲತೆ ಮಾಡಿ ಕೊಂಡಿದ್ದಲ್ಲ, ಹುಟ್ಟುವಾಗಲೇ ಅಂಗವಿಕಲರಾಗಿದ್ದು, ಇಂದು ನಾವು ಅವರಲ್ಲಿ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಬೇಕಿದೆ ಎಂದು ಮಾಜಿ ಗೃಹ ಸಚಿವ ಹಾಗೂ ಹಾಲಿ ಶಾಸಕ ಆರಗ ಜನೇಂದ್ರ ಹೇಳಿದರು.

ಇಂದು ಪಟ್ಟಣದ ಗ್ರಾಮೀಣಾಭಿ ವೃದ್ಧಿ ಸೌಧದಲ್ಲಿ ವಿಕಲಚೇತನರಿಗೆ ಬೈಕ್, ಲ್ಯಾಪ್ ಟಾಪ್, ವೀಲ್ ಚೇರ್ ವಿತರಿಸಿ ಮಾತನಾಡಿದ ಅವರು, ವಿಕಲ ಚೇತನರಿಗೆ ಇಂತಹ ವಸ್ತುಗಳನ್ನು ನೀಡುವುದರಿಂದ ಅವರ ಜೀವನ ಸಹನೀಯವಾಗುತ್ತದೆ, ಅವರಲ್ಲಿ ಅಂಗವಿಕಲ ಕೊರತೆ ಕಡಿಮೆ ಯಾಗಿ ಬದುಕುವ ಚಲ ಹೆಚ್ಚಾಗು ತ್ತದೆ. ಇಂದು ಸಹಾಯ ಪಡೆದ ಫಲಾನುಭವಿಗಳ ಬದುಕು ಸುಖಮ ಯವಾಗಲಿ ಎಂದು ಹಾರೈಸಿದರು.

ಶಾಸಕರ ಪ್ರದೇಶಾಭಿವೃದ್ಧಿಯಿಂದ ಪುನೀತ್, ಯೋಗೇಂದ್ರ, ಪುರುಷೋತ್ತಮ್‌ರಿಗೆ ದ್ವಿಚಕ್ರವಾಹನ ನೀಡಲಾಯಿತು. ಹಾಗೆಯೇ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ವಾಸುದೇವರಿಗೆ ವಿಲ್ ಚೇರ್, ಮೇಘ್ಯಾ ನಾಯ್ಕ ರವರಿಗೆ ಡಿಜಿಟಲ್ ಹಿಯರಿಂಗ್ ವುಡ್, ಅಪ್ರೋಜ್ ಖಾನ್‌ರಿಗೆ ವಾಕಿಂಗ್ ಸ್ವಿಕ್, ಸಲ್ಮಾನ್ ಖಾನ್‌ರಿಗೆ ಎಂ.ಆರ್. ಕಿಟ್, ಗಾನ್ಹವಿರಿಗೆ ಲ್ಯಾಪ್‌ಟಾಪ್, ಲಲಿತರವರಿಗೆ ದ್ವಿ- ಚಕ್ರ ವಾಹನ ನೀಡಲಾಯಿತು.

ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಸುವರ್ಣ ನಾಯ್ಕ, ಪಟ್ಟಣ ಪಂಚಾಯತಿ ಅಧ್ಯಕ್ಷ ರೆಹಮತ್ ಉಲ್ಲಾ ಅಸಾದಿ, ಸದಸ್ಯ ಸೊಪ್ಪುಗುಡ್ಡೆ ರಾಘವೇಂದ್ರ, ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ದಿವಾಕರ್ ಮುಂತಾದವರಿದ್ದರು.

Leave a Reply

Your email address will not be published. Required fields are marked *