google.com, pub-9939191130407836, DIRECT, f08c47fec0942fa0

ಶಿವಮೊಗ್ಗ:- ಹಾವೇರಿಯ ಪುರಾತನ ಪ್ರಸಿದ್ಧ ಶ್ರೀ ಸಿಂಧಗಿ ಮಠದ ಪೂಜ್ಯಶ್ರೀ ಶಾಂತವೀರ ಪಟ್ಟಾಧ್ಯಕ್ಷರ 46ನೇ ಪುಣ್ಯ ಸ್ಮರಣೋತ್ಸವ ಸಂದರ್ಭದಲ್ಲಿ ಪೂಜ್ಯ ಜಗದ್ಗುರು ಡಾ. ತೋಂಟದ ಶ್ರೀ ಸಿದ್ದರಾಮ ಮಹಾಸ್ವಾಮಿ ಗಳು ಯಡಿಯೂರು ಇವರಿಂದ ಶಿವಮೊಗ್ಗದ ವಿವಿಧ ಕ್ಷೇತ್ರಗಳ ಸಾಧಕರಾದ ಮಹಾಲಿಂಗಯ್ಯ ಶಾಸ್ತ್ರಿ ಅವರನ್ನು ಸನ್ಮಾನಿಸಿ ಬಿರುದು ನೀಡಿ ಅಭಿನಂದಿಸಲಾಯಿತು.

ಶ್ರೀ ಮಹಾಲಿಂಗಯ್ಯ ಶಾಸ್ತ್ರಿ ಗಳು ಶ್ರೀ ಸಿಂಧಗಿ ಮಠದ ಶ್ರೀ ಗುರು ಕುಮಾರೇಶ್ವರ ಧಾರ್ಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ದವರು, ನಂತರ ಶಿವಮೊಗ್ಗ ನಗರದಲ್ಲಿ ನೆಲೆ ನಿಂತ ಶಾಸ್ತ್ರಿಗಳು ಸಮಾಜ ಸೇವಾ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಸಹಕಾರ ಕ್ಷೇತ್ರ, ಪ್ರವಾಸ ಕ್ಷೇತ್ರ ಹೀಗೆ ಹತ್ತು ಹಲವು ಸೇವಾ ಕ್ಷೇತ್ರಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ನಾಡಿನ ಗಣ್ಯ ವ್ಯಕ್ತಿಗಳಲ್ಲಿ ಓರ್ವರಾಗಿ ಹೊರ ಹೊಮ್ಮಿದ್ದಾರೆ. ಸಿರಿವಂತಿಕೆ ಅವರನ್ನು ಅರಸಿಕೊಂಡು ಬಂದಿದ್ದರೂ ಹೃದ ಯವಂತಿಕೆ ಅವರನ್ನು ಉನ್ನತ ಹಂತ ತಲುಪಿಸಿದೆ. ಹೀಗಾಗಿ ಮಹಾಲಿಂಗ ಯ್ಯ ಶಾಸ್ತ್ರಿಗಳು ಜನಮಾನಸದಲ್ಲಿ ಇಂದಿಗೂ ನೆಲೆನಿಂತಿದ್ದಾರೆ.

ಶ್ರೀಯುತ ಮಹಾಲಿಂಗಯ್ಯ ಶಾಸ್ತ್ರಿಗಳವರು ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿರ್ದೇ ಶಕರಾಗಿ ಪ್ರಥಮ ಪ್ರಯತ್ನದಲ್ಲೇ ಗೆಲುವು ಸಾಧಿಸಿದ ಹಿರಿಮೆ ಹೊಂದಿ ದ್ದಾರೆ. ಅದೇ ರೀತಿ ಶಿವಮೊಗ್ಗದ ಪ್ರತಿಷ್ಠಿತ ಶ್ರೀ ಬಸವೇಶ್ವರ ವೀರಶೈವ ಲಿಂಗಾಯಿತ ಸಮಾಜ ಸೇವಾ ಸಂಘ ದಲ್ಲಿ ನಿರ್ದೇಶಕರಾಗಿ ಗೆಲುವಿನ ಸಾಧನೆ ಮಾಡಿದ್ದಾರೆ.ಶ್ರೀ ಗುರು ಶಾಂತವೀರೇಶ್ವರ ವೀರಶೈವ ಲಿಂಗಾಯಿತ ವಧುವರರ ಅನ್ವೇ ಷಣಾ ಕೇಂದ್ರ ಆರಂಭಿಸಿ ನೂರಾರು ವಧುವರರಿಗೆ ಕಂಕಣ ಬಲ ಒದಗಿಸಿ ದ್ದಾರೆ. ಇದನ್ನು ಅವರು ಸೇವೆಯ ರೂಪದಲ್ಲಿ ಮಾಡುತ್ತಿರುವುದು ನಿಜಕ್ಕೂ ಅನುಕರಣೀಯ ಕಾರ್ಯ ವಾಗಿದೆ. ಇಷ್ಟು ಮಾತ್ರವೇ ಅಲ್ಲ, ಪೋಷಕರು ತಮ್ಮ ಮಕ್ಕಳಿಗೆ ಮದುವೆ ಮಾಡಿಸಲು ಎಷ್ಟೊಂದು ಕಷ್ಟ ಪಡುತ್ತಾರೆ ಎಂಬುದನ್ನರಿತು ರಾಜ್ಯ ಮಟ್ಟದ ವೀರಶೈವ ಲಿಂಗಾಯಿತ ವಧುವರರ ಸಮಾವೇಶ ಏರ್ಪಡಿಸಿ ಹಲವು ನವ ವಧುವರರಿಗೆ ಮಾಂಗಲ್ಯ ಭಾಗ್ಯ ಕಲ್ಪಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ವೀರಶೈವ ಅರ್ಚಕ ಪುರೋಹಿತರ ಕ್ಷೇಮಾ ಭಿವೃದ್ಧಿ ಸಂಘದ ಉಪಾಧ್ಯಕ್ಷರಾಗಿ ಸಂಘದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಶ್ರೀಶೈಲ ಗೃಹ ನಿರ್ಮಾಣ ಸಂಘ ಆರಂಭಿಸಿ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಬಡ ಮತ್ತು ಮಧ್ಯಮ ವರ್ಗದವರಿಗೆ ಸೂರು ಒದಗಿಸಲು ತಮ್ಮದೇ ಮಾಲಿಕತ್ವದ ಎಸ್‌ಜಿಎಸ್ ಡೆವಲಪರ್‍ಸ್ ಮೂಲಕ ಕೋಟೆ ಗಂಗೂರಿನಲ್ಲಿ ೧೪ ಎಕರೆ ಜಾಗದಲ್ಲಿ ‘ಆನಂದಧಾಮ’ ಬಡಾವಣೆಯನ್ನು ನಿರ್ಮಿಸಿ ಕಡಿಮೆ ಬೆಲೆಯಲ್ಲಿ ಸಾಮಾನ್ಯರಿಗೆ ನಿವೇಶನ ನೀಡಿದ ಹೆಗ್ಗಳಿಕೆ ಅವರದ್ದಾಗಿದೆ.

ಶ್ರೀ ಗುರುಶಾಂತವೀರೇಶ್ವರ ಟೂರ್‍ಸ್ ಸಂಸ್ಥೆ ಮೂಲಕ ಭಾರತದ ಪುಣ್ಯಕ್ಷೇತ್ರಗಳಾದ ಕಾಶಿ, ಕೇದಾರ, ಗಂಗೋತ್ರಿ, ಯಮುನೋತ್ರಿ, ಗಯಾ, ವೈಷ್ಣೋದೇವಿ ಹಾಗೂ ದಕ್ಷಿಣ ಭಾರತದ ಕನ್ಯಾಕುಮಾರಿ, ಶ್ರೀರಂಗಂ, ರಾಮೇಶ್ವರ ಮೊದಲಾದ ಪವಿತ್ರ ಕ್ಷೇತ್ರಗಳಿಗೆ ಜನಸಾಮಾ ನ್ಯರಿಗೆ ಕೈಗೆಟಕುವ ದರದಲ್ಲಿ ಊಟ-ವಸತಿ -ದರ್ಶನ ಇನ್ನಿತರ ಅಗತ್ಯ ಸೌಲಭ್ಯಗಳೊಂದಿಗೆ ಯಾತ್ರೆ ಆಯೋಜಿಸುವಲ್ಲಿ ಶಾಸ್ತ್ರಿಗಳ ಹೆಸರು ಖ್ಯಾತಿ ಪಡೆದಿದೆ. ಕೆಲವರಿಗೆ ಪ್ರವಾಸಕ್ಕೆ ಹಣದ ಸಮಸ್ಯೆ ಉಂಟಾದಾಗ ಅವರಿಗೆ ಇಎಂಇ ಮೂಲಕ ಸಾಲಸೌಲಭ್ಯ ಕಲ್ಪಿಸಿ ಅವಕಾಶ ಮಾಡಿಕೊಡುತ್ತಿದ್ದಾರೆ. ಇದೀಗ ಸಿಂಗಾಪೂರ್, ಮಲೇಶಿ ಯಾ, ಬ್ಯಾಂಕಾಕ್, ಪಟ್ಟಾಯ, ದುಬೈ ಹಾಗೂ ಯೂರೋಪ್ ದೇಶಗಳಿಗೆ ವಿದೇಶ ಪ್ರವಾಸಗಳನ್ನು ಆಯೋಜಿಸುತ್ತಿದ್ದು, ಪಾಸ್ ಪೋರ್ಟ್, ವೀಸಾ ಮತ್ತು ಪಾನ್ ಕಾರ್ಡ್‌ಗಳ ಸೌಲಭ್ಯಗಳನ್ನು ಇವರ ಸಂಸ್ಥೆಯೇ ಕಲ್ಪಿಸುತ್ತಿದೆ.

ಶ್ರೀಯುತ ಮಹಾಲಿಂಗಯ್ಯ ಶಾಸ್ತ್ರಿಗಳವರ ಸೇವಾಕಾರ್ಯಗಳು ಹಾಗೂ ಸಾಧನೆ ಗುರುತಿಸಿ ೨೦೨೫ರಲ್ಲಿ ಪ್ರತಿಷ್ಠಿತ ಟೈಮ್ಸ್ ಗ್ರೂಪ್ಸ್ ಮತ್ತು ವಿಜಯ ಕರ್ನಾಟಕ ದಿನಪತ್ರಿಕೆ ಯವರು ಮಲೇಶಿಯಾದ ಕೌಲಾಲಂ ಪುರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರ ಮದಲ್ಲಿ ಜಾಗತಿಕ ಸಾಧಕರಿಗೆ ನೀಡುವ ಗ್ಲೋಬಲ್ ಎಕ್ಸಲೆನ್ಸ್ ಮತ್ತು ಹಾನರ್‍ಸ್ ಪ್ರಶಸ್ತಿ ಇವರಿಗೆ ಲಭ್ಯವಾದದ್ದು ಕರುನಾಡಿಗೆ ಹೆಮ್ಮೆ ತರುವ ವಿಚಾರ. ಅದೇ ರೀತಿ 2019ರಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆ ನೀಡುವ ಅಚಿವರ್‍ಸ್ ಆಫ್ ಕರ್ನಾಟಕ ಪ್ರಶಸ್ತಿಗೆ ಶ್ರೀಯುತರು ಪಾತ್ರರಾಗಿದ್ದಾರೆ. ಮೈಸೂರಿನ ಮಹಾರಾಜರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈ ಪ್ರಶಸ್ತಿ ಪ್ರದಾನ ಮಾಡಿದ್ದು, ತಮ್ಮ ಭಾಗ್ಯ ಎಂದು ಶಾಸ್ತ್ರಿಗಳು ಹೇಳಿದ್ದಾರೆ. ನಾಡಿನ ಕಾಶಿ, ಶ್ರೀಶೈಲ, ಉಜ್ಜಯನಿ, ಬಾಳೆಹೊನ್ನೂರಿನ ರಂಭಾಪುರಿ ಪೀಠ ಹಾಗೂ ಶ್ರೀ ಬೆಕ್ಕಿನಕಲ್ಮಠ ಸೇರಿದಂತೆ ಹತ್ತಾರು ಮಠಾಧೀಶರಿಂದ ಇವರಿಗೆ ಗೌರವ ಪುರಸ್ಕಾರ ಲಭಿಸಿದೆ.

ಶ್ರೀಯುತರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೂಡಲಗಿ ಯವರು. ನಂದಗಾವಿ ಮಠದ ಶ್ರೀ ಶೈಲಯ್ಯ ಮತ್ತು ಶ್ರೀಮತಿ ಮಹಾ ನಂದ ದಂಪತಿಗಳ ಸುಪುತ್ರರು. ಹಾವೇರಿಯ ಸಿಂಧಗಿ ಮಠದ ಪಾಠಶಾಲೆಯಲ್ಲಿ ವೇದಾಧ್ಯಯನ ಮಾಡಿರುವ ಮಹಾಲಿಂಗಯ್ಯ ಶಾಸ್ತ್ರಿಗಳು ನಂತರ ಶಿವಮೊಗ್ಗಕ್ಕೆ ಬಂದು ನೆಲೆಸಿ ಶ್ರೀ ಬೆಕ್ಕಿನ ಕಲ್ಮಠದಲ್ಲಿ ವಿದ್ಯಾಭ್ಯಾಸ ಮುಂದುವರೆಸಿ ಪುನಃ ಬದುಕು ಕಂಡುಕೊಂಡಿದ್ದು ಮಲೆನಾ ಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ. ಇದೀಗ ಶ್ರೀ ಶಾಸ್ತ್ರಿಗಳವರಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿ ಗಳಿಗಾಗಿ ಗುಣಮಟ್ಟದ ವಸತಿ ಶಿಕ್ಷಣ ನೀಡಲು ಹಾಗೂ ಅವರಿಗೆ ಬದುಕಿನ ಮೌಲ್ಯಗಳ ಅರಿವು ಮೂಡಿಸಲು ಇಂಟರ್ ನ್ಯಾಷನಲ್ ಸ್ಕೂಲ್ ಆರಂಭಿಸುವ ಚಿಂತನೆ ಹೊಂದಿದ್ದಾರೆ. ಈ ಬಗ್ಗೆ ಶಿಕ್ಷಣ ತಜ್ಞರ ಮಾರ್ಗ ದರ್ಶನ ದೊಂದಿಗೆ ನೀಲನಕ್ಷೆ ರೂಪಿಸ ಲಾಗುತ್ತಿದೆ. ಶಾಸ್ತ್ರಿಗಳ ಈ ಕನಸು ನನಸಾಗಲಿ ಎಂಬುದು ಅವರ ಸಹಸ್ರಾರು ಸಂಖ್ಯೆಯ ಅಭಿಮಾನಿಗಳ ಆಶಯವಾಗಿದೆ.

ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ

ಕರ್ನಾಟಕದ ಪ್ರತಿಷ್ಟಿತ ನ್ಯೂಸ್ ಫಸ್ಟ್ ಟಿವಿ ಚಾನಲ್ ವತಿಯಿಂದ ಬೆಂಗಳೂರಿನ ಶರ್ಟಾನ್ ಗ್ರಾಂಡ್ ಹೋಟೆಲ್‌ನಲ್ಲಿ ಏರ್ಪಡಿಸಿದ್ದ ವರ್ಣ ರಂಜಿತ ಸಮಾರಂಭದಲ್ಲಿ ಮಹಾಲಿಂಗಯ್ಯ ಶಾಸ್ತ್ರಿ ಅವರ ವಿವಿಧ ಕ್ಷೇತ್ರಗಳ ಅಪರಿಮಿತ ಸಾಧನೆ ಗುರುತಿಸಿ ಸ್ಟಾರ್ ಆಫ್ ಕರ್ನಾಟಕ ಪ್ರತಿಷ್ಟಿತ ಅವಾರ್ಡ್ ಅನ್ನು ಪ್ರದಾನ ಮಾಡಲಾಯಿತು. ಗಣ್ಯಾತಿ ಗಣ್ಯರು ಪಾಲ್ಗೊಂಡಿ ದ್ದರು.ಇದೊಂದು ಶಾಸ್ತ್ರಿಗಳ ಸಾಧನೆಗಳಿಗೆ ಸಂದ ವಿಶೇಷ ಗೌರವವಾಗಿದೆ.

Leave a Reply

Your email address will not be published. Required fields are marked *