ಶಿವಮೊಗ್ಗ : ಎನ್‌ಎಸ್‌ಯುಐ ವತಿಯಿಂದ ಇಂದು ಕುವೆಂಪು ರಂಗಮಂದಿರದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನೋಟ್‌ಬುಕ್ ವಿತರಣೆಯ ನಮ್ಮೂರ ಹೆಮ್ಮೆ ಕಾರ್ಯಕ್ರಮ ಆಯೋಜಿಸಿದ್ದು, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.೯೫ಕ್ಕೂ ಹೆಚ್ಚು ಅಂಕಪಡೆದ ಸುಮಾರು ೧೦೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು. ಅಲ್ಲದೆ ೧೫೦೦ ಬಡ ಮಕ್ಕಳಿಗೆ ನೋಟ್ ಬುಕ್ಕನ್ನು ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿಗಣೇಶ್, ಎನ್‌ಎಸ್‌ಯುಐ ಎಂಬುದು ವಿದ್ಯಾರ್ಥಿಗಳ ಸಮಸ್ಯೆಗಳ ಬಗೆಹರಿಸುವುದರ ಜೊತೆಗೆ ನಾಯಕತ್ವ ಗುಣವನ್ನು ಕಲಿಸುತ್ತದೆ. ಆ ಮೂಲಕ ಸಂಘಟನಾತ್ಮಕವಾಗಿ ಬೆಳೆಯಲು ಅವಕಾಶವಾಗುತ್ತದೆ. ವಿದ್ಯಾರ್ಥಿಗಳು ಅವಕಾಶ ಬಂದಾಗ ಬಳಸಿಕೊಳ್ಳಬೇಕು. ಹಲವೊಮ್ಮೆ ಅವಕಾಶ ಮುಂದೆ ಇದ್ದರೂ ಆಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಉತ್ತಮ ಶಿಕ್ಷಣವನ್ನು ಪಡೆಯ ಬೇಕು, ವಿದ್ಯಾರ್ಥಿಗಳು ಏನೇ ಸಮಸ್ಯೆ ಇದ್ದರೂ ಎನ್‌ಎಸ್‌ಯುಐ ನ್ನು ಸಂಪರ್ಕಿಸಿ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್ ಮಾತನಾಡಿ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಎನ್‌ಎಸ್‌ಯುಐ ಹೋರಾಟ ಮಾಡುತ್ತಾ ಬಂದಿದೆ. ಮಾಜಿ ಪ್ರಧಾನಿ ದಿ|| ಇಂದಿರಾಗಾಂಧಿಯವರು ಹುಟ್ಟುಹಾಕಿದ ಸಂಘಟನೆ ಇದು. ಆ ಮೂಲಕ ಯುವಕರು ಕೂಡ ರಾಜಕೀಯಕ್ಕೆ ಬರಬೇಕು ಎಂಬ ಆಶಯವನ್ನು ಈ ಸಂಘಟನೆ ನನಸು ಮಾಡಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಗೌರವ ಕೊಡುತ್ತಾ, ವಿದ್ಯಾರ್ಥಿಗಳಿಗೆ ಆಸರೆಯಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ಎನ್‌ಎಸ್‌ಯುಐ ನಮ್ಮೂರ ಹೆಮ್ಮೆ ಎಂಬ ಕಾರ್ಯಕ್ರಮದ ಮೂಲಕ ಪ್ರತಿಭಾವಂತರನ್ನು ಗುರುತಿಸು ವುದರ ಜೊತೆಗೆ ಬಡ ವಿದ್ಯಾರ್ಥಿ ಗಳಿಗೆ ನೋಟ್ ಬುಕ್ಕನ್ನು ನೀಡಿದ್ದು ಶ್ಲಾಘನೀಯ ಎಂದರು.
ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ವಿಜಯ್, ಪ್ರಮುಖರಾದ ಹೆಚ್.ಸಿ. ಯೋಗೀಶ್, ಶಿವಕುಮಾರ್, ಕಲೀಲ್‌ಪಾಷಾ, ಮಧುಸೂದನ್, ಚೇತನ್, ವಿಜಯ ಕುಮಾರ್ (ದನಿ), ವಿಶ್ವನಾಥ್‌ಕಾಶಿ, ಯಮುನಾ ರಂಗೇಗೌಡ, ಬಿ.ಎಸ್. ಗಣೇಶ್, ಚರಣ್, ಗಿರೀಶ್, ಶಿವರಾಜ್, ಬಾಲಾಜಿ, ಅನ್ನು, ಅಕ್ಬರ್, ಮಂಜುನಾಥಬಾಬು, ಶ್ರೀಜಿತ್, ಆದರ್ಶ ಹುಂಚದಕಟ್ಟೆ, ಹರ್ಷಿತ್, ಯು. ಶಿವಾನಂದ್ ಸೇರಿದಂತೆ ಹಲವರಿದ್ದರು.