ತೀರ್ಥಹಳ್ಳಿ :- ಅಕ್ರಮವಾಗಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 9ಗೋವುಗಳನ್ನು ರಕ್ಷಿಸಿರುವ ಮಾಳೂರು ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಂಡಿರುವ ಘಟನೆ ಇಂದು ಬೆಳಿಗ್ಗೆ ಮಂಡಗದ್ದೆ ಸಮೀಪದ ನೆಲ್ಲಿಸರ ಕ್ಯಾಂಪ್ ಬಳಿ ನಡೆದಿದೆ.
ಮಂಡಗದ್ದೆ ಸುತ್ತಮುತ್ತಲ ಹಳ್ಳಿಗಳಿಂದ ಹಸುಗಳು ಮತ್ತು ಕರುಗಳನ್ನು ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿರುವಾಗ ಗಸ್ತಿನಲ್ಲಿದ್ದ ಮಾಳೂರು ಪೊಲೀಸರು ಅನುಮಾನಗೊಂಡು ಗೋವುಗಳಿದ್ದ ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಪರಿಶೀಲಿಸಿದಾಗ ಹಸುಗಳಿರುವುದು ಪತ್ತೆಯಾಗಿದೆ.
ಮಾನವಿತೆಯಲ್ಲದೆ ಸಣ್ಣ ವಾಹನದಲ್ಲಿ ಒಂಬತ್ತು ಹಸುಗಳನ್ನು ಸ್ವಲ್ಪವೂ ಜಾಗವಿಲ್ಲದೆ ಇಕ್ಕಟ್ಟಾಗಿ ಬಂಧಿಸಿ ಸಾಗಿಸುತ್ತಿದ್ದರು. ಕೂಡಲೆ ಹಸುಗಳನ್ನು ವಶಕ್ಕೆ ಪಡೆದ ಮಾಳೂರು ಠಾಣಾ ಪೊಲೀಸರು. ಶಿವಮೊಗ್ಗದ ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ವಶಕ್ಕೆ ಪಡೆದ ಗೋವುಗಳನ್ನು ಸುರಕ್ಷಿತವಾಗಿ ಶಿವಮೊಗ್ಗದ ಗೋಶಾಲೆಯೊಂದಕ್ಕೆ ಕಳುಹಿಸಲಾಗಿದೆ.
