google.com, pub-9939191130407836, DIRECT, f08c47fec0942fa0

ಶಿವಮೊಗ್ಗದಲ್ಲಿ ಯೂನಿಟಿ ಆಸ್ಪತ್ರೆಯಿಂದ ಮಕ್ಕಳ ಬೇಸಿಗೆ ಶಿಬಿರ

ಶಿವಮೊಗ್ಗ :- ಕುವೆಂಪು ರಸ್ತೆಯಲ್ಲಿರುವ ಯೂನಿಟಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವತಿಯಿಂದ ಮೇ 4ರಂದು ಆಸ್ಪತ್ರೆ ಆವರಣದಲ್ಲಿ ಬೃಹತ್ ಬೇಸಿಗೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದ್ದು, ಮುಖ್ಯವಾಗಿ ಈ ಶಿಬಿರದಲ್ಲಿ ಉಚಿತ ದಂತ ತಪಾಸಣೆಯನ್ನು ಮಾಡಲಾಗುವುದು ಎಂದು ಮಕ್ಕಳ ತಜ್ಞ ಡಾ.ಶಂಬುಲಿಂಗ…

ಕುಂಚಿಟಿಗ ಜನಾಂಗಕ್ಕೆ ಆಗಿರುವ ತಪ್ಪು ಜನಗಣತಿ ಸರಿಪಡಿಸಿ : ಹನುಮಯ್ಯ

ಶಿವಮೊಗ್ಗ :- ಜನಗಣತಿ ವರದಿಯಲ್ಲಿ ಕುಂಚಿಟಿಗರ ಸಂಖ್ಯೆ ತಪ್ಪಾಗಿದ್ದು, ಮತ್ತೊಮ್ಮೆ ಜನಗಣತಿ ಮಾಡಬೇಕು ಎಂದು ಅಖಿಲ ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಹೆಚ್.ರಂಗ ಹನುಮಯ್ಯ ಆಗ್ರಹಿಸಿದ್ದಾರೆ. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಕಾಂತರಾಜ್ ಜನಗಣತಿ ವರದಿಯಲ್ಲಿ ಕುಂಚಿಟಿಗ ಜನಾಂಗಕ್ಕೆ…

ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟದಿಂದಾಗಿ ಕಾರ್ಮಿಕ ದಿನಾಚರಣೆ ಪ್ರಾರಂಭವಾಯಿತು…

ಶಿವಮೊಗ್ಗ :- ಕಾರ್ಮಿಕರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟದಿಂದಾಗಿ ಕಾರ್ಮಿಕ ದಿನಾಚರಣೆ ಪ್ರಾರಂಭವಾಯಿತು ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಎಸ್.ಶಿವಪ್ಪ ಹೇಳಿದ್ದಾರೆ. ಅವರು ಇಂದು ನಗರದ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ಹಮಾಲಿ…

ಶಿವಮೊಗ್ಗ ಜಿ.ಪಂ. ನಲ್ಲಿ ತಾರಕಕ್ಕೇರಿದ ವಾಗ್ವಾದ….

ಶಿವಮೊಗ್ಗ :- ಜಿ.ಪಂ. ಕೆಪಿಡಿ ಸಭೆಯಲ್ಲಿ ಇಂದು ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಭಾನು ಮತ್ತು ಶಾಸಕ ಎಸ್.ಎನ್. ಚನ್ನಬಸಪ್ಪ ನಡುವಿನ ವಗ್ವಾದ ತಾರಕಕ್ಕೇರಿ ಗೊಂದಲ ಮಯ ವಾತಾವರಣ ಉಂಟಾಯಿತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಅವ್ಯವಸ್ಥೆ ಆಗರವಾಗಿದೆ. ಆಸ್ಪತ್ರೆಯನ್ನು…

ಶಿವಮೊಗ್ಗ ಪಾಲಿಕೆಗೆ ಸೇರಿದ ಮೈದಾನವನ್ನು ತನಿಖೆ ಮುಗಿಯುವವರೆಗೆ ಯಾವುದೇ ಉದ್ದೇಶಗಳಿಗೆ ನೀಡದಂತೆ ರಾಷ್ಟ್ರಭಕ್ತ ಬಳಗ ಮನವಿ

ಶಿವಮೊಗ್ಗ :- ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆಯ ಮಹಾನಗರ ಪಾಲಿಕೆಗೆ ಸೇರಿದ ಆಟದ ಮೈದಾನವನ್ನು ಮುಸ್ಲಿಂ ಸಮುದಾಯದ ಹೋರಾಟಕ್ಕೆ ಅನುಮತಿ ನೀಡಿದ್ದಾರೆ ಎಂದು ತಿಳಿದುಬಂದಿದ್ದು, ಇದು ವಿವಾದಿತ ಸ್ಥಳವಾಗಿದ್ದು, ಪರಿಶೀಲನೆ ನಡೆಯುತ್ತಿದೆ. ತನಿಖೆ ಮುಂದುವರೆದಿದೆ. ಈ ಹಂತದಲ್ಲಿ ಯಾವುದೇ ಕಾರಣಕ್ಕೂ ಇಲ್ಲಿ…

ಮೇ 9ರಂದು ಅನಿಷ್ ಪೂಜಾರಿ ನಿರ್ದೇಶನದ ದಸ್ಕತ್ ಚಲನಚಿತ್ರ ತೆರೆಗೆ

ಶಿವಮೊಗ್ಗ :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ 70ದಿನಗಳ ಪ್ರದರ್ಶನ ಕಂಡ ದಸ್ಕತ್ ತುಳು ಚಿತ್ರದ ಕನ್ನಡ ಆವೃತ್ತಿ ಮೇ 9ರಂದು ರಾಜ್ಯಾದಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಅನಿಷ್ ಪೂಜಾರಿ ವೇಣೂರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇತ್ತಿಚೆಗೆ ಬೆಂಗಳೂರಿನಲ್ಲಿ…

ನಾಳೆ ಪಿಳ್ಳನಗಿರಿಯಲ್ಲಿ ಪುಣ್ಯ ತೀರ್ಥ ಸ್ನಾನ

ಶಿವಮೊಗ್ಗ :- ಹೊಳೆಹೊನ್ನೂರು ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ಪಿಳ್ಳನಗಿರಿ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಹನುಮಂತ ದೇವರ ಸನ್ನಿಧಿಯಲ್ಲಿ ಪುಣ್ಯ ತೀರ್ಥಸ್ನಾನ ನಡೆಯಲಿದೆ. ಪ್ರತಿ ತಿಂಗಳ ಅಮಾವಾಸ್ಯೆಯಂದು ಶ್ರೀ ಹನುಮಂತ ದೇವರಿಗೆ ಸಾಮೂಹಿಕ ಪಂಚಾಮೃತ ಅಭಿಷೇಕ ನೆರವೇರಲಿದ್ದು ಮಹಾ…

ಭಯೋತ್ಪಾದಕತೆ ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ : ಈಶ್ವರಪ್ಪ

ಶಿವಮೊಗ್ಗ :- ಭಯೋತ್ಪಾದಕತೆ ತಡೆಯಲು ಕೇಂದ್ರ ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂಬ ವಿಪಕ್ಷಗಳ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರಿಗೂ ಅಭಿನಂದನೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ…

ಭಯೋತ್ಪಾದನೆ ಹತ್ತಿಕ್ಕಲು ಪಾಕಿಸ್ತಾನ ವಿರುದ್ಧ ಯುದ್ಧ ಅನಿವಾರ್ಯ : ಶಾಸಕ ಚನ್ನಬಸಪ್ಪ

ಶಿವಮೊಗ್ಗ :- ಭಯೋತ್ಪಾದಕತೆ ತಡೆಯಲು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಉಳಿಸಲು ಪಾಕಿಸ್ತಾನದೊಂದಿಗೆ ಯುದ್ಧ ಅನಿವಾರ್ಯ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಪತ್ರಿಕಾಗೋಷ್ಟಿಯಲ್ಲಿ ಆಕ್ರೋಶ ಹೊರಹಾಕಿದರು. ಮೊನ್ನೆಯ ಭಯೋತ್ಪಾದಕ ಘಟನೆಯಿಂದ ಇಡೀ ಭಾರತೀಯರ ಮನ ಮಿಡಿದಿದೆ. ಭಯೋತ್ಪಾದಕತೆಯ ಅಟ್ಟಹಾಸ ಇನ್ನೂ ಎಷ್ಟುದಿನ ಎನ್ನುವ…

ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಶಿವಮೊಗ್ಗದ ಡಾ. ರಕ್ಷಾರಾವ್ ವಿಶೇಷ ಮಾಹಿತಿ…

ಶಿವಮೊಗ್ಗ :- ಇಂದಿನ ಸನ್ನಿವೇಶದಲ್ಲಿ ಮಹಿಳೆಯರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸು ತ್ತಿದ್ದಾರೆ ಮತ್ತು ಅದರಲ್ಲಿಯೂ ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆ ಗಳಿದ್ದಾಗ ಬಹುಪಾಲು ಮಹಿಳೆಯರು ಯಾರೊಂದಿಗೂ ಇದರ ಬಗ್ಗೆ ಚರ್ಚಿಸಲು ಹಿಂಜರಿಯುತ್ತಾರೆ. ಆದ್ದರಿಂದ ಈ ಸಂಕೋಚ ಭಾವನೆಯಿಂದ ಹೊರಬಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು…