google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಪ್ರಮುಖ ಉದ್ಯಮವಾದ ಎಪಿಎಂಸಿ ಸೊಪ್ಪು ಮತ್ತು ತರಕಾರಿ ಮಂಡಿಗಳನ್ನು ನಡೆಸುತ್ತಿರುವ ಮಾಲೀಕರು ಪ್ರತೀ ವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪನೆ ಮಾಡಿ, ಸಾವಿರಾರು ಜನಕ್ಕೆ ಯಶಸ್ವಿಯಾಗಿ ಅನ್ನ ಸಂತರ್ಪಣೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾದುದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರಶಂಸಿಸಿದರು.

ಎಪಿಎಂಸಿ ತರಕಾರಿ ಮತ್ತು ಸೊಪ್ಪು ಸ್ನೇಹಿತರ ಗಣಪತಿ ಬಳಗದಿಂದ ಪ್ರತಿಷ್ಠಾಪಿಸಿರುವ ಗಣಪತಿ ಸನ್ನಿಧಿಯಲ್ಲಿ ಇಂದು ಬೆಳಿಗ್ಗೆ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಒಂದು ಸಮಾಜಮುಖಿ ಕೆಲಸದಲ್ಲಿ ಕೈ ಜೋಡಿಸಿರುವ ಮಾಲೀಕರುಗಳು ತಮ್ಮ ಹಣದಲ್ಲಿ ಪ್ರತಿ ವರ್ಷ ೫ದಿನಗಳ ಕಾಲ ಗಣಪತಿ ಪ್ರತಿಷ್ಠಾಪಿಸಿ, ಗ್ರಾಹಕ ರಿಗೆ ಮತ್ತು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಈ ಕಾರ್ಯ ಯಶಸ್ವಿ ಯಾಗಿ ನಡೆಯಲು ಕಾರಣಕರ್ತರಾದ ಮತ್ತು ಇದರ ನೇತೃತ್ವ ವಹಿಸಿರುವ ಸಮಾಜ ಸೇವಕರು, ಉದ್ಯಮಿಗಳಾದ ಡಿ.ಎಸ್. ಚಂದ್ರು (ಸೊಪ್ಪು) ಅವರ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಪ್ರಮುಖರಾದ ಭೀಮರಾಜ್, ಪ್ರಶಾಂತ, ಟೊಮ್ಯಾಟೊ ರಾಜು, ಈರುಳ್ಳಿ ರಾಮು, ಎ.ಎಸ್.ಕೆ. ಮಂಜುನಾಥ್, ನಾಗರಾಜ್, ಶರವಣ, ಸಂದೀಪ್ ಶೇಟ್, ಭರತ್, ಅಣ್ಣಪ್ಪ ಇನ್ನಿತರರಿದ್ದರು.

Leave a Reply

Your email address will not be published. Required fields are marked *