google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಇನ್ನೊಬ್ಬರ ಸಾಮರ್ಥ್ಯವನ್ನು ಕರಾರುವಾಕ್ಕಾಗಿ ಗುರುತಿಸಿ ಬೆಳೆಸುವ ಯಶಸ್ವಿ ನಾಯ ಕರು ವಿದ್ಯಾಸಂಸ್ಥೆಗಳ ಅಭಿವೃದ್ಧಿಗೆ ಅತ್ಯವಶ್ಯಕ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್. ನಾರಾಯಣ ರಾವ್ ನುಡಿದರು.

ನಗರದ ಎಸ್.ಆರ್. ನಾಗಪ್ಪಶೆಟ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜನ ಕಾಲೇಜಿನಲ್ಲಿ ನಿರ್ಮಿಸಿರುವ ನೂತನ ಬಿ-ಬ್ಲಾಕ್ ಕಟ್ಟಡ ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಎನ್‌ಇಎಸ್ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವ ಕಾರ್ಯ ನಡೆಯುತ್ತಿದೆ. ವಿಶೇಷವಾಗಿ ಅನುದಾ ನಿತ ಶಾಲೆಗಳನ್ನು ಆಧುನಿಕತೆಗೆ ತಕ್ಕಂತೆ ಉನ್ನತಿಕರಣಗೊಳಿಸುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಂದರು.

ಉಪನ್ಯಾಸಕರಲ್ಲಿ ನಿರಂತರ ಕಲಿಕೆ ಎಂಬ ಪ್ರಕ್ರಿಯೆ ರೂಢಿಗತವಾಗ ಬೇಕು. ಆಗ ಮಾತ್ರ ತರಗತಿಯಲ್ಲಿ ಗುಣಮಟ್ಟದ ಬೋಧನೆಯ ಮೂಲಕ ವಿದ್ಯಾರ್ಥಿಗಳನ್ನು ತಲುಪಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿ ಊಟ ಮಾಡುವಾಗ, ಈ ಅನ್ನದ ತುತ್ತನ್ನು ತಾನು ಯಾರಿಂದಲೂ ಕಸಿದಿಲ್ಲ ಎಂಬ ಆತ್ಮ ತೃಪ್ತಿ ಬೇಕು. ಅದೇ ರೀತಿ ಕಲಿಕೆಯ ಹಪಹಪಿ ಇರುವ ವಿದ್ಯಾರ್ಥಿಗಳಿಗೆ ಉತ್ತಮ ವಾಗಿ ಕಲಿಸಿದಾಗ ಮಾತ್ರ, ನಿಜವಾದ ವೃತ್ತಿ ಸಾರ್ಥಕತೆ ಸಿಗುತ್ತದೆ ಎಂದರು.

ಈ ಹಿನ್ನಲೆಯಲ್ಲಿ ವಿದ್ಯಾಸಂಸ್ಥೆಯ ಗುಣಮಟ್ಟವನ್ನು ಹೆಚ್ಚಿಸಲು ಆದ್ಯತೆ ನೀಡಿ. ಶಿಕ್ಷಕರ ಕಾರ್ಯಕ್ಷಮತೆ ಹೆಚ್ಚಾಗಲಿ, ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ ಸದಾಚಾರಗಳನ್ನು ಬಿತ್ತುವ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್. ನಾಗರಾಜ ಅವರು ಮಾತನಾಡಿ, ಕಾಲೇಜು ಬೆಳೆದಂತೆಲ್ಲ ಸವಾಲುಗಳು ಹೆಚ್ಚುತ್ತಿರುತ್ತದೆ. ಈಗಿನ ವಿದ್ಯಾರ್ಥಿಗಳ ಅಪೇಕ್ಷೆ, ಕಲಿಕಾ ಸಾಮರ್ಥ್ಯಗಳು ವ್ಯತ್ಯಾಸಗೊಳ್ಳುತ್ತಲೆ ಇರುತ್ತದೆ. ಅದಕ್ಕೆ ತಕ್ಕಂತೆ ಉಪನ್ಯಾ ಸಕರು ಉನ್ನತಿಕರಣ ಗೊಳ್ಳುವ ಸವಾಲಿದೆ. ಹೊಸ ತಾಂತ್ರಿಕ ಮತ್ತು ಬೋಧನಾ ಕೌಶಲ್ಯತೆಗಳ ಉತ್ಖನನ ನಡೆಯಲಿ ಎಂದರು.

ಎನ್‌ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಮೈಲಾರಪ್ಪ, ಟಿ.ಆರ್. ಅಶ್ವತ್ಥ ನಾರಾಯಣ ಶೆಟ್ಟಿ, ಶ್ರೀಕೃಷ್ಣ, ಅನಂತ ದತ್ತಾ, ಸೀತಾಲಕ್ಷ್ಮೀ, ಮಾಧುರಾವ್, ಸುಧೀರ್, ಹೆಚ್.ಸಿ.ಶಿವಕುಮಾರ್, ಆಜೀವ ಸದಸ್ಯರಾದ ರುಕ್ಮಿಣಿ ವೇದವ್ಯಾಸ, ಕಿಶೋರ್ ಶೀರನಾಳಿ, ರವೀಂದ್ರ, ವಿಖ್ಯಾತ್, ಗುರು ಪ್ರಸಾದ್, ಜಗದೀಶ್, ಕುಲಸಚಿವ ಪ್ರೊ.ಎನ್.ಕೆ. ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮ ಚಂದ್ರ ಇನ್ನಿತರರಿದ್ದರು. ಪ್ರಾಂಶು ಪಾಲ ಡಾ. ಎಲ್.ಕೆ. ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಲಕ್ಷ್ಮಣ್ ನಿರೂಪಿಸಿದರು.

Leave a Reply

Your email address will not be published. Required fields are marked *