google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಕಲಾಜ್ಯೋತಿ ಶಿವಮೊಗ್ಗ ವತಿಯಿಂದ ಆ. 2ರ ಶನಿವಾರ ಸಂಜೆ 6.30ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಪರಹಿತ ಪಾಷಾಣ ಎಂಬ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಸಂಸ್ಥೆಗೆ 50ವರ್ಷ ಸಂದ ಹಿನ್ನಲೆಯಲ್ಲಿ ನಗರದ ಸಹ್ಯಾದ್ರಿ ಸೌಂಡ್ಸ್ ಮತ್ತು ಲೈಟ್ಸ್ ರಂಗ ಪರಿಕರ ಸಹಕಾರದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದರು ಅಭಿನಯಿಸ ಲಿರುವ ಈ ನಾಟಕ ಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ.

ವಿನ್ಯಾಸ, ಬೆಳಕು ಮತ್ತು ನಿರ್ದೇಶನವನ್ನು ಹರಿಗೆ ಗೋಪಾಲ ಸ್ವಾಮಿ ಅವರು ನಿರ್ವಹಿಸಲಿದ್ದು, ಈ ನಾಟಕವನ್ನು ಬಿ. ಚಂದ್ರಶೇಖರ್ ಅವರು ರಚಿಸಿದ್ದಾರೆ. ರಂಗ ಸಜ್ಜಿಕೆ ವಿಕ್ರಂ ವಾಸು ಅವರದ್ದಾಗಿದೆ.

ಶಿವಮೊಗ್ಗದ ಜನತೆ ಹಾಗೂ ಕಲಾಸಕ್ತರು ಆಗಮಿಸಿ, ಕುತೂಹಲಭರಿತ ಈ ನಾಟಕವನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವಂತೆ ಆಯೋಜಕರು ಕೋರಿದ್ದಾರೆ.

Leave a Reply

Your email address will not be published. Required fields are marked *