google.com, pub-9939191130407836, DIRECT, f08c47fec0942fa0

ಆರ್ ಸಿ ಬಿ ತಂಡಕ್ಕೆ ವಿಧಾನ ಸೌಧದ ಮುಂಭಾಗ ಸಂಜೆ ಅಭಿನಂದನೆ : ಭದ್ರತೆ ದೃಷ್ಠಿಯಿಂದ ಮೆರವಣಿಗೆ ರದ್ದು…

ಬೆಂಗಳೂರು :- ಐಪಿಎಲ್ -2025ನ್ನು ಕಪ್ ಗೆದ್ದು ಬೀಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬೆಂಗಳೂರಿಗೆ ಆಗಮಿಸಿದ್ದು, ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ಮುಂಭಾಗ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮದಲ್ಲಿ ಅಭಿನಂದಿಸಲಿದ್ದಾರೆ. ಸಂಜೆ 6ಗಂಟೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳೊಂದಿಗೆ ಆರ್‌ಸಿಬಿ ಆಟಗಾರರ ಸಂಭ್ರಮಾಚರಣೆ…

ತುಂಗಭದ್ರೆ, ಸಮಸ್ಯೆಗಳ ಗೂಡಾಗಿರುವುದು ಕಂಡು ಬಂದಿದೆ : ಪರಿಸರ ತಜ್ಞರ ಆತಂಕ

ಶಿವಮೊಗ್ಗ :- ತುಂಗಭದ್ರಾ ನದಿಯುದ್ದಕ್ಕೂ ಎಲ್ಲಿಯೂ ಚರಂಡಿ ನೀರನ್ನು ಶುದ್ಧೀಕರಣಗೊಳಿಸುವ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದ್ದು, ಇದು ಭೀಕರ ದುರಂತ. ಅಲ್ಲದೆ ತುಂಗಭದ್ರೆ ಸಮಸ್ಯೆಗಳ ಗೂಡಾಗಿರುವುದು ಕಂಡು ಬಂದಿದೆ ಎಂದು ಪರಿಸರ ತಜ್ಞ ಡಾ.ಬಿ.ಎಂ.ಕುಮಾರ ಸ್ವಾಮಿ ತಿಳಿಸಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ…

ಜೂ. 5ರಂದು ವಿಪ್ರ ನೌಕರರ ಸಂಘದ ನೂತನ ಕಟ್ಟಡ ಭೂಮಿಪೂಜೆ

ಶಿವಮೊಗ್ಗ :- ಜಿಲ್ಲಾ ವಿಪ್ರನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಹಳೇ ರೈಲ್ವೆ ನಿಲ್ದಾಣ ಹಿಂಭಾಗದ ಇಸ್ಲಾಪುರದಲ್ಲಿ ನೂತನ ಕಟ್ಟಡವೊಂದನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅದರ ಭೂಮಿ ಪೂಜೆ ಕಾರ್ಯವನ್ನು ಜೂ. 5ರಂದು ಬೆಳಿಗ್ಗೆ 8.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕಟ್ಟಡ ಸಮಿತಿಯ ಅಧ್ಯಕ್ಷ ಆರ್. ಅಚ್ಚುತರಾವ್…

ಶಿವಮೊಗ್ಗ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರಂಭಂ…

ಶಿವಮೊಗ್ಗ :- ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರಂಭಂ ಅಕ್ಷರಭ್ಯಾಸವನ್ನು ವಿಘ್ನ ನಿವಾರಕ ಗಣಪತಿಯನ್ನು ಪ್ರಾರ್ಥಿಸುತ್ತ ವಿದ್ಯೆಯ ಅಧಿದೇವತೆಯಾದ ಶಾರದಾಂಬೆಯನ್ನು ಸ್ಮರಿಸುತ್ತ ಈ ಪ್ರಾರಂಭಿಸಲಾಗಿತ್ತು. ಶಾಲೆಯ ಪುಟಾಣಿ ಮಕ್ಕಳಿಗೆ ಅಕ್ಷರಭ್ಯಾಸದ ಮೊದಲ ದಿನವಾಗಿದ್ದು ಶಾರದಾ ದೇವಿಯ ಪೂಜೆಯ ಜೊತೆಗೆ…

ಶಿವಮೊಗ್ಗದ ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್‌ನಿಂದ ಮಕ್ಕಳಿಗೆ 3ಡಿ ತಂತ್ರeನ ಶಿಕ್ಷಣ…

ಶಿವಮೊಗ್ಗ :- ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ 3ಡಿ ತಂತ್ರಜನವನ್ನು ಬಳಸಿಕೊಂಡು ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್‌ನಿಂದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಗುರುಕುಲಮ್ ಕಾರ್ಯದರ್ಶಿ ಜಿ. ಅರುಣ್‌ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಿವಮೊಗ್ಗದ ಬಿ.ಬಿ. ರಸ್ತೆಯಲ್ಲಿರುವ ಶ್ರೀರಾಮ ನಿವಾಸದಲ್ಲಿ ಬೆಳಗಿನ…

ಉತ್ತಮ ವಹಿವಾಟಿನಿಂದ ಶಿವಮೊಗ್ಗ ಎಪಿಎಂಸಿ ಜಿಲ್ಲೆಗೆ ಕಿರೀಟಪ್ರಾಯವಾಗಿದೆ : ಮಧು ಬಂಗಾರಪ್ಪ

ಶಿವಮೊಗ್ಗ :- ರೈತರಿಗೆ ಉತ್ತಮ ಸಹಕಾರ ಮತ್ತು ಸೌಲಭ್ಯಗಳನ್ನು ನೀಡಿದಲ್ಲಿ ದೇಶದ ಅಭಿವೃದ್ದಿ ಸಹ ಉತ್ತಮವಾಗಿ ಆಗಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಪಿಎಂಸಿ ರೈತರಿಗೆ ಸಹಕಾರಿಯಾಗಿದ್ದು ಉತ್ತಮ ವಹಿವಾಟು ಮೂಲಕ ಜಿಲ್ಲೆಗೆ ಕಿರೀಟಪ್ರಾಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು…

ಸಚಿವರಿಂದ ಸಾಹಿತ್ಯ ಗ್ರಾಮದಲ್ಲಿ ಎಸ್. ಬಂಗಾರಪ್ಪ ಸ್ಮಾರಕ ಗ್ರಂಥಾಲಯ ಉದ್ಘಾಟನೆ

ಶಿವಮೊಗ್ಗ :- ಸಾಹಿತ್ಯಾತ್ಮಕ ಬರವಣಿಗೆ, ಅಧ್ಯಯನದಂತಹ ಕ್ರಿಯಾಶೀಲತೆಯ ಸಂಗಮವಾದ ಸಾಹಿತ್ಯ ಗ್ರಾಮ ಯೋಜನೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು. ಇಂದು ನಗರದ ಗೋಪಿಶೆಟ್ಟಿಕೊಪ್ಪದ ಸಾಹಿತ್ಯ ಗ್ರಾಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ರೂಪಿಸಿರುವ…

ಈ ಸೃಷ್ಟಿಯಲ್ಲಿ ಅತ್ಯಂತ ಅದ್ಭುತವಾಗಿ ಸೃಷ್ಟಿಯಾಗಿರುವುದು ಮನುಷ್ಯ ದೇಹ : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಶಿವಮೊಗ್ಗ :- ಅಂತರಯಾನಕ್ಕಾಗಿ ದೇಹ ದೇವಾಲಯವಾಗಬೇಕು. ದೇವಾಲಯಗಳು ಬಹಿರ್ಮುಖದಿಂದ ಅಂತರ್ಮುಖಿಯಾಗುವ ಜಗೃತಿ ಕೇಂದ್ರಗಳು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಶಿವಮೊಗ್ಗ ಹೊರಹೊಲಯದ ಹೊಳೆಹನಸವಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯ ಗೋಪುರ ಲೋಕಾರ್ಪಣೆ ಮತ್ತು…

ಏನ್ ಕೇಡುಗಾಲನೊ ಏನೋ, ಮುಂಗಾರು ಬರುವ ಮುಂಚೆನೇ ಮಳೆ ಮುಳುಗಿಸಿ ಹೋಗಿದೆ : ರೈತನ ಅಳಲು

ಶಿವಮೊಗ್ಗ :- ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಮಳೆರಾಯ ತನ್ನ ಎಫೆಕ್ಟ್ ತೋರಿಸಿದ್ದಾನೆ. ಮುಂಗಾರು ಬರುವ ಮುನ್ನವೇ ಮಲೆನಾಡಿನಲ್ಲಿ ವಿಪರೀತ ಹಾವಳಿ ಮಾಡಿ ರೈತರಿಗೆ ತೊಂದರೆ ಕೊಟ್ಟಿದ್ದಾನೆ. ಮಲೆನಾಡು ಹೊರತುಪಡಿಸಿ ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಮುಂಗಾರು ಇನ್ನೂ…

ಬಿಜೆಪಿ ಸದಸ್ಯರ ಅಮಾನತ್ತು ವಾಪಸ್ಸು ಸದನದ ಪಾವಿತ್ರ್ಯತೆ ನಾಶಗೊಳಿಸಿದಂತಾಗಿದೆ : ಆಯನೂರು

ಶಿವಮೊಗ್ಗ :- ಸದನದ ಕಾರ್ಯಕಲಾಪಗಳಿಗೆ ಅಡ್ಡಿಮಾಡಿದ ಬಿಜೆಪಿ ಸದಸ್ಯರ ಅಮಾನತ್ತನ್ನು ವಾಪಸ್ಸು ತೆಗೆದುಕೊಂಡಿರುವ ನಿರ್ಧಾರ ಸದನದ ಪಾವಿತ್ರ್ಯತೆಯನ್ನು ನಾಶಗೊಳಿಸಿದ್ದು, ಇದು ಸಂವಿಧಾನ ವಿರೋಧಿಯಾಗಿರುವುದಲ್ಲದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ (ವ್ಯಕ್ತಿಗತ ನೆಲೆಯಲ್ಲಿ) ಹೇಳಿದರು. ಇಂದು ಪತ್ರಿಕಾಗೋಷ್ಟಿಯಲ್ಲಿ…