ಶಿವಮೊಗ್ಗ :- ಶಿವಮೊಗ್ಗ ನಗರದ ಭರಮಪ್ಪ ನಗರದಲ್ಲಿ ಆ. 22ರ ನಾಳೆ ವಿದ್ಯುತ್ ಕಾಮಗಾರಿ ಹಮ್ಮಿಕೊಂಡಿದ್ದು ಅಶೋಕ ರಸ್ತೆ, ಎಸ್ ಪಿಎಂ ರಸ್ತೆ, ವಿನಾಯಕ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಗುವ ಫೀಡರ್ ಎ.ಎಫ್-4ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ. 23 ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಾಯ ಉಂಟಾಗಲಿದೆ.
ಅಮೃತ ಲೇಔಟ್, ಸಿಟಿ ಕ್ಲಬ್, ಮಹೇಂದ್ರ ಶೋರೂಂ ಮುಖ್ಯರಸ್ತೆ, ಗಾಡಿಕೊಪ್ಪ, ಶರಾವತಿ ಡೆಂಟಲ್ ಕಾಲೇಜು, ಹರ್ಷ ಫರ್ನ್ ಸುತ್ತಮುತ್ತ, ಮಲ್ಲಿಗೇನಹಳ್ಳಿ, ಎಬಿವಿಪಿ ಲೇಔಟ್, ಮ್ಯಾಕ್ಸ್, ಅರುಣೋದಯ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.