
ಶಿವಮೊಗ್ಗ :- ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಭೂತಪೂರ್ವ ಸೇವೆ ಹಾಗೂ ಮಾರಿಕಾಂಬಾ ಮೈಕ್ರೋ ಫೈನಾನ್ಸ್ ಮೂಲಕಾ ಮಹಿಳಾ ಸಭಲೀಕರಣಕ್ಕೆ ಒತ್ತು ನೀಡಿ ಮಹಿಳೆಯರ ಉತ್ಥಾನಕ್ಕೆ ನಿರಂತರ ಪರಿಶ್ರಮದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜನತೆಗೆ ಮನರಂಜನೆಗಳ ರಸದೌತಣ ನೀಡುವಲ್ಲಿ ಸೇವೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಸಾಧನೆ ಗುರುತಿಸಿ ಯುವ ನಾಯಕ ಹಾಗೂ ಮಾಜಿ ಜಿ.ಪಂ. ಸದಸ್ಯರೂ ಆದ ಕೆ.ಇ. ಕಾಂತೇಶ್ ಅವರಿಗೆ ವಿಜಯವಾಣಿ ರಾಜ್ಯ ಮಟ್ಟದ ಪತ್ರಿಕೆ ನೀಡುವ ಅಂತರ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವಿಜಯ ರತ್ನ ಪ್ರಶಸ್ತಿ ಲಭಿಸಿದೆ.
ಮಲೇಶಿಯಾದಲ್ಲಿ ಜರುಗಿದ ಸಂಭ್ರಮದ ಸಮಾರಂಭದಲ್ಲಿ ಮಲೇಶಿಯಾ ದೇಶದಲ್ಲಿ ಭಾರತದ ಐಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಬಿ.ಎನ್. ರೆಡ್ಡಿ ಹಾಗೂ ವಿಜಯವಾಣಿ ಪತ್ರಿಕೆಯ ಮುಖ್ಯಸ್ಥರಾದ ಆನಂದ ಸಂಖೇಶ್ವರ ಅವರು ಕೆ.ಈ. ಕಾಂತೇಶ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಂತೇಶ್ ಅವರ ಪತ್ನಿ ಶ್ರೀಮತಿ ಶಾಲಿನಿ ಉಪಸ್ಥಿತರಿದ್ದರು.
ತಮ್ಮ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಅಂತರ ಮಟ್ಟದ ಪ್ರಶಸ್ತಿ ಲಭಿಸಿರುವುದಕ್ಕೆ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ತಾಯಿ ಶ್ರೀಮತಿ ಜಯಲಕ್ಷ್ಮೀ ಈಶ್ವರಪ್ಪ ಹಾಗೂ ಕುಟುಂಬ ವರ್ಗದವರು ಮತ್ತು ಪ್ರಮುಖರಾದ ಮಹಲಿಂಗಯ್ಯ ಶಾಸ್ತ್ರಿ, ಎಂ. ಶಂಕರ್, ಇ. ವಿಶ್ವಾಸ್, ಸಂತೋಷ್ ಕುಮಾರ್, ಶ್ರೀಕಾಂತ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.