ಶಿಕಾರಿಪುರ :- ತಾಲೂಕಿನ ಇತಿಹಾಸ ಪ್ರಸಿದ್ದ ತೊಗರ್ಸಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಆ. 23ರ ಶನಿವಾರ ಬೆಳಿಗ್ಗೆ 10ಕ್ಕೆ ಕುಂಬೋತ್ಸವ,ಮಹಾ ರುದ್ರಾಬಿಷೇಕ ಸಹಿತ ವಿಶೇಷ ಪೂಜೆ ಸ್ವಾಮಿಯ ಭವ್ಯ ಮೆರವಣಿಗೆ ಆಯೋಜಿಸಲಾಗಿದೆ.
ತೊಗರ್ಸಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ನಾಡಿನಾದ್ಯಂತ ಲಕ್ಷಾಂತರ ಭಕ್ತ ಸಮೂಹವಿದೆ. ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ನಿತ್ಯ ಮಹಾ ರುದ್ರಾಭಿಷೇಕ ಸಹಿತ ವಿಶೇಷ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಲಿದ್ದು, ಆ. 23ರ ಬೆಳಿಗ್ಗೆ 10ಕ್ಕೆ ಕುಂಬೋತ್ಸವದ ಅಂಗವಾಗಿ ಕವಲಿ ಗಡಿಯಿಂದ ರಥ ಬೀದಿ ಮೂಲಕ ನಡೆಯುವ ಸ್ವಾಮಿಯ ಭವ್ಯ ಮೆರವಣಿಗೆ ದೇವಾಲಯ ತಲುಪಿದ ನಂತರ ಮಳೆ ಹಿರೇಮಠದ ಶ್ರೀ ಮಹಂತ ದೇಶಿ ಕೇಂದ್ರ ಸ್ವಾಮಿಗಳು, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿ ಕೇಂದ್ರ ಸ್ವಾಮಿಗಳು,ಮಳೆ ಹಿರೇಮಠದ ಕಿರಿಯ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ದೇವರಿಗೆ ಮಹಾರುದ್ರಾಭಿಷೇಕ ವಿಶೇಷ ಪೂಜೆಗಳು ನೆರವೇರಲಿದೆ. ನಂತರ ಗ್ರಾಮಸ್ಥರ ಸಹಕಾರ, ಗೆಳೆಯರ ಬಳಗದಿಂದ ಅನ್ನಸಂತರ್ಪಣೆ ನಡೆಯಲಿದೆ.
ನಿತ್ಯ ಮಳೆ ಹಿರೇಮಠದ ಆಶ್ರಯದಲ್ಲಿ ಭಕ್ತಾದಿಗಳ ಸಹಕಾರದಿಂದ ಪ್ರತಿ ವರ್ಷದಂತೆ ಈ ವರ್ಷವೂ ದಾಸೋಹ ನೆರವೇರುತ್ತಿದ್ದು ಕುಂಬೋತ್ಸವದಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ ಮಂಗಳ ವಸ್ತುಗಳನ್ನು ನೀಡಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆಯ ಆಡಳಿತ ಅಧಿಕಾರಿ ಆರ್ ಐ ಅರ್ಚನಾ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಆಸಕ್ತರು ಪಾರ್ವತಿ ಮಹಿಳಾ ಮಂಡಳಿಯನ್ನು ಸಂಪರ್ಕಿಸಲು ಸ್ಥಳೀಯ ವಿವಿಧ ಸಂಘ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ನಿಕಟಪೂರ್ವ ದೇವಾಲಯ ಸಮಿತಿಯವರು ತಿಳಿಸಿದ್ದಾರೆ.
