google.com, pub-9939191130407836, DIRECT, f08c47fec0942fa0

Month: December 2025

ಡಿ. 8ರಂದು ಶಿವಮೊಗ್ಗದಲ್ಲಿ ಮುಷ್ಠಿ ಅಕ್ಕಿ ಅಭಿಯಾನಕ್ಕೆ ಚಾಲನೆ

ಶಿವಮೊಗ್ಗ :- ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜಂ, ರಾಷ್ಟ್ರೀಯ ಅನ್ನದಾನ ಸಮಿತಿವತಿಯಿಂದ ಪ್ರತಿ ವರ್ಷದಂತೆ ಶಬರಿಮಲೈ ಅಯ್ಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುವ ಮಾಲಾಧಾರಿಗಳಿಗೆ ಅನ್ನಸಂತರ್ಪಣೆಯ ಉದ್ದೇಶದಿಂದ ಡಿ.೮ರ ಸೋಮವಾರ ಸೀಗೆಹಟ್ಟಿಯ ಅಂತರಘಟ್ಟಮ್ಮ ದೇವಾಲಯದಲ್ಲಿ ಬೆಳಿಗ್ಗೆ ೯ ಗಂಟೆಗೆ ಒಂದು ಮುಷ್ಠಿ…

ಭೂಸ್ವಾಧೀನಪಡಿಸಿಕೊಂಡಿರುವ ನಿವೇಶನ, ಕಟ್ಟಡಗಳ ಸ್ವತ್ತಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಲು ಸಚಿವರಿಗೆ ಮನವಿ

ಶಿವಮೊಗ್ಗ :- ಭಾರತೀಯ ರಾಷ್ಟ್ರೀಯ ಹೆದ್ದಾರಿ 206ರ ಅಭಿವೃದ್ಧಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ. 15-16ರಲ್ಲಿ ಭೂಸ್ವಾಧೀನಪಡಿಸಿಕೊಂಡಿರುವ ನಿವೇಶನ ಮತ್ತು ಕಟ್ಟಡಗಳ ಸ್ವತ್ತಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಮೂಲಕ…

ವೈಭವದಿಂದ ನಡೆದ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ಅಮ್ಮನವರ ಬ್ರಹ್ಮರಥೋತ್ಸವ

ಶಿವಮೊಗ್ಗ :- ನಗರದ ಗ್ರಾಮದೇವತೆ ಕೋಟೆ ಶ್ರೀ ಚಂಡಿಕಾದುರ್ಗಾ ಪರಮೇಶ್ವರಿ ಅಮ್ಮನವರ ಬ್ರಹ್ಮ ರಥೋತ್ಸವ ಇಂದು ವೈಭವದಿಂದ ನಡೆಯಿತು. ಈ ಸಂದರ್ಭದಲ್ಲಿ ಬ್ರಹ್ಮರಥ ಪೂಜೆ, ರಥಾಂಗಹೋಮ, ದಿಂಡಿರಥ ರಾಜಬೀದಿ ಉತ್ಸವ ನಂತರ ಬ್ರಹ್ಮ ರಥೋತ್ಸವ, ಆಚಾರ್ಯತ್ರಯರ ಭವನದಲ್ಲಿ ಗುರುಪಾದುಕ ಪೂಜೆ, ಮಹಾ…

ಕಳುವಾಗಿದ್ದ ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್‍ಯಕ್ರಮದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ಹೇಳಿದ್ದೇನು

ಶಿವಮೊಗ್ಗ : ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್‌ಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಡಿ. 3ರಂದು ಸಂಜೆ ಸದರಿ ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಜಯನಗರ ಠಾಣೆಯ ಆವರಣದಲ್ಲಿ…

ಸಿಎಸ್‌ಆರ್ ನಿಧಿ ಸದ್ಭಳಕೆಗೆ ಐಡಿಯಲ್ ಗೋಪಿ ಆಗ್ರಹ

ಶಿವಮೊಗ್ಗ : ಸಿಎಸ್‌ಆರ್ ನಿಧಿ ಸದ್ಭಳಕೆ ಮಾಡುವಂತೆ ಸೂಕ್ತ ಕಾನೂನು ರಚನೆ ಮಾಡಬೇಕೆಂದು ಮಹಾನಗರ ಪಾಲಿಕೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ ಆಗ್ರಹಿಸಿದ್ದಾರೆ. ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ನಿಧಿಯನ್ನು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕಂಪನಿಗಳು ನಮ್ಮ ರಾಜ್ಯದೊಳಗೆ…

ಕೆಎಸ್‌ಸಿಎ ಆಡಳಿತ ಮಂಡಳಿ ಚುನಾವಣೆಯಲ್ಲಿ ನಮ್ಮ ತಂಡ ವಿಜಯ ಸಾಧಿಸಲಿದೆ : ಬ್ರಿಜೇಶ್ ಪಟೇಲ್

ಶಿವಮೊಗ್ಗ :- ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಆಡಳಿತ ಮಂಡಳಿಯ 2025-28ನೇ ಸಾಲಿನ ಚುನಾವಣೆ ಡಿ. 7ರಂದು ನಡೆಯಲಿದ್ದು, ತಮ್ಮ ತಂಡ ನಿಚ್ಚಳ ವಿಜಯ ಸಾಧಿಸಲಿದೆ ಎಂದು ಕೆಎಸ್‌ಸಿಎ ಹಾಲಿ ಅಧ್ಯಕ್ಷ ಖ್ಯಾತ ಕ್ರಿಕೆಟ್ ಪಟು ಬ್ರಿಜೇಶ್ ಪಟೇಲ್ ವಿಶ್ವಾಸ…

ಖೇಲೋ ಇಂಡಿಯಾ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಶಿವಮೊಗ್ಗದ ಸುದೀಪ್‌ಗೆ ಚಿನ್ನದ ಪದಕ

ಶಿವಮೊಗ್ಗ :- ರಾಜಸ್ಥಾನದಲ್ಲಿ ಆಯೋಜಿಸಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾ ಕೂಟದಲ್ಲಿ ಶಿವಮೊಗ್ಗದ ವಿದ್ಯಾರ್ಥಿ ಚಿನ್ನದ ಪದಕ ವಿಜೇತನಾಗಿದ್ದಾನೆ. ಖೇಲೋ ಇಂಡಿಯಾದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ 3ನೇ ವರ್ಷದ…

ಮದುವೆಯಾದ ಮರು ದಿನವೇ ನವ ವರ ಹೃದಯಾಘಾತ ದಿಂದ ಸಾವು : ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಘಟನೆ

ಶಿವಮೊಗ್ಗ :- ಇತ್ತೀಚಿಗೆ ಹೃದಯಘಾತದ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಹೃದಯಘಾತಕ್ಕೆ ಮತ್ತೊಂದು ಬಲಿಯಾಗಿದ್ದು, ಮದುವೆಯಾದ ಮರುದಿನವೇ ಕುಸಿದು ಬಿದ್ದು ನವ ವರ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಹನುಮಂತಾಪುರದ ಯುವಕ ಮದುವೆಯಾದ…

ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಡಿ. 7ರಿಂದ ಜ. 5ರವರೆಗೆ ಶ್ರೀ ಸೀತಾಕಲ್ಯಾಣ ಶತಮಾನೋತ್ಸವ

ಶಿವಮೊಗ್ಗ :- ನಗರದ ಕೋಟೆ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಡಿ. 7ರ ಭಾನುವಾರ ದಿಂದ ಜ. 5ರ ಸೋಮವಾರದ ವರೆಗೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾ…

ವಿಜೃಂಭಣೆಯಿಂದ ಸೆಕ್ರೇಡ್ ಹಾರ್ಟ್ ಪ್ರೌಢ ಶಾಲೆಯ ವಜ್ರಮಹೋತ್ಸವ ಆಚರಣೆ : ಕುಮಾರ್ ಬಂಗಾರಪ್ಪ ವಿವರಣೆ

ಶಿವಮೊಗ್ಗ :- ನಗರದ ಪ್ರತಿಷ್ಠಿತ ಸೆಕ್ರೇಡ್ ಹಾರ್ಟ್ ಪ್ರೌಢ ಶಾಲೆಯ 60ನೇ ವರ್ಷದ ವಜ್ರಮಹೋತ್ಸವದ ಆಚರಣೆಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗುವುದು ಎಂದು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಗರದ ಹೃದಯ…