google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಕೋಟೆ ಶ್ರೀ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ಆಶ್ರಯದಲ್ಲಿ ಡಿ. 7ರ ಭಾನುವಾರ ದಿಂದ ಜ. 5ರ ಸೋಮವಾರದ ವರೆಗೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಹಾಗೂ ಕೋಟಿತ್ರಯ ರಾಮಾ ನಾಮಾರ್ಚನ ಮಹೋತ್ಸವವನ್ನು ಆಯೋಜಿಸಲಾಗಿದೆ.

ಇದರ ಅಂಗವಾಗಿ ಒಂದು ತಿಂಗಳ ಪರ್ಯಂತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, 7ರ ಬೆಳಿಗ್ಗೆ ಮಹಾ ಸಂಕಲ್ಪ ಹಾಗೂ ನವಗ್ರಹ ಪೂಜೆಯ ಮೂಲಕ ಚಾಲನೆ ನೀಡಲಾಗುತ್ತಿದೆ. ಡಿ. 8ರಿಂದ 17ರವರೆಗೆ ಶ್ರೀ ಭಾಗವತ ಮಹಾ ಪುರಾಣ ಹೋಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಚ್. ಆರ್. ಶ್ರೀಧರ್‌ರವರಿಂದ ಪ್ರತಿನಿತ್ಯ ಸಂಜೆ 6.30ಕ್ಕೆ ಭಾಗವತ ಸಪ್ತಾಹ ಉಪನ್ಯಾಸ ನಡೆಯಲಿದೆ. ಡಿ. 15ರಿಂದ 17ರವರೆಗೆ ಕಲ್ಲಾಪುರದ ಪವಮಾನ ಆಚಾರ್‌ರವರಿಂದ ವಿಷ್ಣುವಿನ ದಶಾವತಾರ ಕುರಿತು ಉಪನ್ಯಾಸ ಹಾಗೂ ದಶಾವತಾರ ಉತ್ಸವ ನಡೆಯಲಿದೆ.

ಡಿ. 18ರಂದು ಸಪ್ತ ಚಿರಂಜೀವಿ ಗಳ ಪೂಜೆ ಹೋಮ ನಡೆಯಲಿದ್ದು, ಸಂಜೆ ಮತ್ತೂರು ಸನತ್‌ಕುಮಾರ್, ಅಚ್ಯುತ ಅವಧಾನಿಯವರಿಂದ ಸೀತಾ ಕಲ್ಯಾಣ ಗಮಕ ವಾಚನ ವ್ಯಾಖ್ಯಾನ, ಡಿ. 19ರಂದು ಎಳ್ಳು ಅಮಾವಾಸ್ಯೆ ಭಾಗವಾಗಿ ಶಕ್ತಿದೇವತೆಗಳ ಸಮಾ ವೇಶ, 20ರಂದು ಮಾರುತಿ ಹೋಮ, ಸಂಜೆ ಉಸ್ತಾದ್ ಹುಮಾ ಯೂನ್ ಹರ್ಲಾಪುರ, ನೌಷಾದ್ ಹರ್ಲಾಪುರ, ನಿಷದ್ ಹರ್ಲಾಪುರ ರವರಿಂದ ಹಿಂದೂಸ್ಥಾನೀ ಸಂಗೀತ, ದಾಸವಾಣಿ ಕಾರ್‍ಯಕ್ರಮ ನಡೆಯಲಿದೆ.

ಡಿ. 21ರಂದು ಶ್ರೀ ಗಾಯತ್ರಿ ಹೋಮ, ಸಂಜೆ ಅರುಣ್ ಕುಮಾರ್ ಮತ್ತು ಸಂಗಡಿಗರಿಂದ ಭಕ್ತಿ ಸಂಕೀರ್ತನೆ, ೨೨ರಂದು ವಿಷ್ಣು ಸಹಸ್ರನಾಮ ಹೋಮ, ಮೈಸೂರಿನ ಎಂ.ಜಿ. ಶ್ರೀಧರ್ ಸಂಗಡಿಗರಿಂದ ನಾಗಸ್ವರ, 23ರಂದು ಲಲಿತಾ ಸಹಸ್ರನಾಮ ಹೋಮ, ಸಂಜೆ ನೃತ್ಯಗುರು ಸೌಮ್ಯ ರಂಗಸ್ವಾಮಿಯವರ ನವಭಾವ್ ಸ್ಕೂಲ್ ಆಫ್ ಆರ್ಟ್‌ನ ವಿದ್ಯಾರ್ಥಿ ಗಳಿಂದ ನೃತ್ಯ ವೈಭವ, ೨೪ರಂದು ಶ್ರೀಲಕ್ಷ್ಮೀ ನರಸಿಂಹ ಹೋಮ ನಡೆಯಲಿದೆ.

ಸಂಜೆ ಶೃಂಗೇರಿ ಹೆಚ್. ಎಸ್. ನಾಗರಾಜ್‌ರವರಿಂದ ಕರ್ನಾಟಕ ಶಾಸೀಯ ಸಂಗೀತ, 25ರಂದು ಶ್ರೀ ಲಕ್ಷ್ಮೀ ಹಯಗ್ರೀವ ಹೋಮ ಸಂಜೆ ಸಹನಾ ಚೇತನ್ ತಂಡದವರಿಂದ ಭರತ ನಾಟ್ಯ, 26ರಂದು ಶ್ರೀ ಸೂಕ್ತ ಹೋಮ, ಸಂಜೆ ಬೆಂಗಳೂರಿನ ಸೂಕ್ತ ಪಟ್ಟಾಭಿರಾಮನ್, ವಾಸುಕಿ ವೈಭವ್ ತಂಡದವರಿಂದ ಸಂಗೀತ ಸಂಜೆ, 27ರಂದು ಶ್ರೀ ವೈನತೇಯ ಮಂತ್ರ ಹೋಮ ಸಂಜೆ ವಿದುಷಿ ಸಂಭ್ರಮ ಹೆಚ್. ಎಸ್. ತಂಡದವರಿಂದ ಕರ್ನಾಟಕ ಶಾಸೀಯ ಸಂಗೀತ, 28ರಂದು ವರಾಹಸ್ವಾಮಿ ಮಂತ್ರ ಹೋಮ, ಸಂಜೆ ಗಜೇಂದ್ರ ಮೋಕ್ಷ, 29ರಂದು ಉತ್ಸವ ರಾಮರಿಗೆ ಅಭಿಷೇಕ, ಸಂಜೆ ವೈಭವದ ಸೀತಾ ಕಲ್ಯಾಣ ಮಹೋತ್ಸವ, ೩೦ರಂದು ವೈಕುಂಠ ಏಕಾದಶೀ, ಆನೆ ಉತ್ಸವ ಸಂಜೆ ಕುಮಾರ ಸ್ವಾಮಿ ಸಂಗಡಿಗ ರಿಂದ ನಾದ ವೈಭವ-ಸ್ಯಾಕ್ಯೋ ಫೋನ್ ವಾದನ, ೩೧ರಂದು ತೀರ್ಥ ಸ್ನಾನ, ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ, ಜ. 1ರಂದು ಸುದರ್ಶನ ಹೋಮ, ಉರುಟಣೆ, 108 ಸತ್ಯ ನಾರಾಯಣ ವ್ರತ, ೨ರಂದು ಪಲ್ಲಕ್ಕಿ ಉತ್ಸವ ಶ್ರೀವತ್ಸ ಸಂಗಡಿಗರಿಂದ ವೇಣುವಾದನ, ಶಯನೋತ್ಸವ, 3ರಂದು ಶ್ರೀ ಧನ್ವಂತರಿ ಹೋಮ, ಸಂಜೆ ತುಂಗಾ ತೀರದಲ್ಲಿ ತೆಪ್ಪೋತ್ಸವ, 4ರಂದು ಮಹಾಭಿಷೇಕ, ಮೋಹಿನಿ ಅಲಂಕಾರ, ಕೋಟಿ ತ್ರಯ ನಾಮಾರ್ಚನೆ ಸಮಾರೋಪ ಮತ್ತು 5ರಂದು ರಾಮತಾರಕ ಮಂತ್ರ ಹೋಮ, ಮಹಾಭಿಷೇಕ, ಕಿರೀಟ ಸಮರ್ಪಣೆ ಹಾಗೂ ಸಂಜೆ ಪ್ರಾಕಾರೋತ್ಸವ ನಡೆಯಲಿದೆ.

ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಶ್ರೀ ಸೀತಾ ಕಲ್ಯಾಣ ಶತಮಾನೋತ್ಸವ ಸಮಿತಿ ವಿನಂತಿಸಿದೆ.

Leave a Reply

Your email address will not be published. Required fields are marked *