ಶಿವಮೊಗ್ಗ :- ರಾಜಸ್ಥಾನದಲ್ಲಿ ಆಯೋಜಿಸಿರುವ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾ ಕೂಟದಲ್ಲಿ ಶಿವಮೊಗ್ಗದ ವಿದ್ಯಾರ್ಥಿ ಚಿನ್ನದ ಪದಕ ವಿಜೇತನಾಗಿದ್ದಾನೆ. ಖೇಲೋ ಇಂಡಿಯಾದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ 3ನೇ ವರ್ಷದ ಬಿಕಾಂ ವಿದ್ಯಾರ್ಥಿ ಸುದೀಪ್ 2.8 ಮೀಟರ್ ಎತ್ತರ ಜಿಗಿತ ಮಾಡಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ವಿಜೇತನಾಗಿದ್ದಾನೆ.
ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಭಾರತ ದೇಶ ಪ್ರತಿನಿಧಿಸುವ ಗುರಿ ಹೊಂದಿದ್ದೇನೆ ಎಂದು ವಿಜೇತ ಸ್ಪರ್ಧಿ ಸುದೀಪ್ ಅನಿಸಿಕೆ ವ್ಯಕ್ತಪಡಿಸಿದ್ದಾನೆ.
ಕುವೆಂಪು ವಿಶ್ವವಿದ್ಯಾಲಯದಿಂದ ಪ್ರತಿನಿಧಿಸಿದ್ದ ಡಿವಿಎಸ್ ಕಾಲೇಜಿನ ವಿದ್ಯಾರ್ಥಿ ಸುದೀಪ್ ಸಾಧನೆಗೆ ದೇಶೀಯ ವಿದ್ಯಾಶಾಲಾ ಸಮಿತಿ ಆಡಳಿತ ಮಂಡಳಿ ಹಾಗೂ ಡಿವಿಎಸ್ ಕಲಾ, ವಿಜನ ಮತ್ತು ವಾಣಿಜ್ಯ ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯ ಡಾ. ಎಂ. ವೆಂಕಟೇಶ್, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸಚಿನ್. ಕೆ ಅಭಿನಂದಿಸಿದ್ದಾರೆ.