ಶಿವಮೊಗ್ಗ : ಜಿಲ್ಲಾ ವ್ಯಾಪ್ತಿಯಲ್ಲಿ ಕಳೆದು ಹೋದ ಮೊಬೈಲ್ಗಳನ್ನು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿಯವರು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಡಿ. 3ರಂದು ಸಂಜೆ ಸದರಿ ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಜಯನಗರ ಠಾಣೆಯ ಆವರಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮೊಬೈಲ್ ವಾರಸುದಾರರಿಗೆ ವಿತರಿಸಿ ಮಾತನಾಡಿದ ಜಿಲ್ಲಾ ರಕ್ಷಣಾಧಿಕಾರ ಮಿಥುನ್ ಕುಮಾರ್ ಜಿ.ಕೆ. ಜಿಲ್ಲೆಯಾದ್ಯಂತ ಇದುವರೆಗೂ ಸುಮಾರು 6445 ಕಳೆದು ಹೋದ ಮೊಬೈಲ್ಗಳು ವರದಿಯಾಗಿದ್ದು, ಇವುಗಳಲ್ಲಿ ದೇಶದ ವಿವಿಧ ರಾಜ್ಯಗಳಾದ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಕೇರಳ ಮತ್ತು ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪತ್ತೆ ಮಾಡಿ ಸುಮಾರು 1194ಕ್ಕೂ ಹೆಚ್ಚು ಮೊಬೈಲ್ಗಳನ್ನು ವಾರಸುದಾರರಿಗೆ ನೀಡಿದ್ದು, ನಂತರ ಇದೆ ರೀತಿ ಕಳೆದ 2 ತಿಂಗಳಲ್ಲಿ 110 ಮೊಬೈಲ್ ಫೋನ್ಗಳನ್ನು ಪತ್ತೆ ಮಾಡಿರುತ್ತಾರೆ.
ಬೆಳಿಗ್ಗೆ ಎದ್ದ ಕೂಡಲೇ ದೇವರ ಮುಖ ನೋಡುವ ಬದಲು ಸಾಮಾಜಿಕ ಜಲತಾಣಗಳನ್ನು ನೋಡುತ್ತಾರೆ : ಜಿಲ್ಲಾ ರಕ್ಷಣಾಧಿಕಾರಿ
ಮೊಬೈಲ್ ಫೋನ್ ಎಂಬುದು ಈ ದಿನಗಳಲ್ಲಿ ಮನುಷ್ಯನ ಒಂದು ಭಾಗವೇ ಆಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಎಲ್ಲರೂ ಸಹಾ ಮೊಬೈಲ್ ಫೋನ್ ಅನ್ನು ಉಪಯೋಗಿಸುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಯಾರೇ ಆಗಲಿ ಬೆಳಿಗೆ ಎದ್ದ ಕೂಡಲೇ ದೇವರ ಮುಖವನ್ನು ನೋಡುವ ಬದಲು ಸಾಮಾಜಿಕ ಜಲತಾಣವನ್ನು ವೀಕ್ಷಿಸುತ್ತಾರೆ.
ಸಹಜವಾಗಿ ನಿಮಗೆಲ್ಲ ಕಿವಿಮಾತು ಹೇಳುವುದಾದರೆ ನಿಮ್ಮ ಮೋಬೈಲ್ ಫೋನ್ ಕಳೆದು ಹೋದಾಗ ನೀವು ಜಗರೂಕರಾಗಿರದೇ ಹೋದಲ್ಲಿ, ಈ ರೀತಿ ಕಳೆದು ಹೋಗಿರುವ ಮೊಬೈಲ್ನ ಸಿಮ್ ಕಾರ್ಡ್ನ್ನು ಉಪಯೋಗಿಸಿಕೊಂಡು ಬೇರೆ ಬೇರೆ ರೀತಿಯ ಸೈಬರ್ ಅಪರಾದವನ್ನು ಮಾಡುವ ಸಾದ್ಯತೆ ಹೆಚ್ಚಾಗಿರುತ್ತದೆ. ಆದುದರಿಂದ ತಾವೆಲ್ಲರೂ ಕೂಡ ಜಗೂರಕರಾಗಿರಬೇಕು.
ನಿಮ್ಮ ಬೆಲೆ ಬಾಳುವ ವಸ್ತುಗಳಾದ ಚಿನ್ನಾಭರಣಗಳು ಯಾವ ರೀತಿ ಜೋಪಾನವಾಗಿ ಇಡುತ್ತೀರೋ, ಅದೇ ರೀತಿ ರೀತಿಯಲ್ಲಿ ಮೊಬೈಲ್ ಅನ್ನು ಜಗೂರಕತೆಯಿಂದ ಇಟ್ಟು ಕೊಳ್ಳಬೇಕು, ಕೆಲವೊಂದು ಸೇಪ್ಟಿ ಅಪ್ಲೀಕೇಷನ್ಗಳನ್ನು ಉಪಯೋಗಿಸಿಕೊಂಡಲ್ಲಿ, ಅದರ ಮುಖಾಂತರ ಮೊಬೈಲ್ ಅನ್ನು ಟ್ರೇಸ್ ಮಾಡಲು ಅನೂಕುಲವಾಗುತ್ತದೆ.
ಮೊಬೈಲ್ ಫೋನ್ ನಲ್ಲಿ ಲೊಕೆಷನ್ ಆನ್ ಮಾಡಿಕೊಂಡಿದ್ದಲ್ಲಿ ಮೊಬೈಲ್ ಕಳೆದು ಹೋದ ಸಂದರ್ಭದಲ್ಲಿ ಮೊಬೈಲ್ ಎಲ್ಲಿದೆ ಎಂದು ಗೊತ್ತಾಗುತ್ತದೆ. ಸಾರ್ವಜನಿಕರಿಗೆ ತಿಳಿಸುವುದೇನೆಂದರೆ ತಕ್ಷಣವಾಗಿ ಮೊಬೈಲ್ ಅನ್ನು ಬ್ಲಾಕ್ ಮಾಡಿಸಬೇಕು ಇಲ್ಲ ಅಂದರೆ ನಿಮ್ಮ ನಂಬರ್ ಅನ್ನು ಉಪಯೋಗಿಸಿಕೊಂಡು ಸೈಬರ್ ಅಪರಾದವನ್ನು ಮಾಡಿದರೆ, ಅದು ನಿಮ್ಮ ಮೇಲೆ ಬರುವ ಸಾಧ್ಯತೆ ಇರುತ್ತದೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎ.ಜಿ.ಕಾರಿಯಪ್ಪ ಹಾಗೂ ರಮೇಶ್ ಕುಮಾರ್, ಸೈಬರ್ ಕ್ರೈಂ ಡಿವೈಎಸ್ಪಿ ಕೃಷ್ಣ ಮೂರ್ತಿ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.