ಶಿವಮೊಗ್ಗ : ಸಿಎಸ್‌ಆರ್ ನಿಧಿ ಸದ್ಭಳಕೆ ಮಾಡುವಂತೆ ಸೂಕ್ತ ಕಾನೂನು ರಚನೆ ಮಾಡಬೇಕೆಂದು ಮಹಾನಗರ ಪಾಲಿಕೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಐಡಿಯಲ್ ಗೋಪಿ ಆಗ್ರಹಿಸಿದ್ದಾರೆ.
ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್‌ಆರ್) ನಿಧಿಯನ್ನು ಕಾರ್ಪೊರೇಟ್ ಸಂಸ್ಥೆಗಳು ಮತ್ತು ಕಂಪನಿಗಳು ನಮ್ಮ ರಾಜ್ಯದೊಳಗೆ ವಿನಿಯೋಗ ಮಾಡಬೇಕು ಕೂಡಲೇ ಸರ್ಕಾರ ಸೂಕ್ತ ಕಾನೂನು ರಚನೆ ಮಾಡಬೇಕು. ಕಾರಣ ವಿದೇಶಿ ಮತ್ತು ಹೊರರಾಜ್ಯದ ಕಂಪನಿಗಳು ತಮ್ಮ ವ್ಯಾಪಾರ ವಹಿವಾಟುಗಳನ್ನು ರಾಜ್ಯದಲ್ಲಿ ಮಾಡುತ್ತಿದ್ದಾರೆ ಅವರು ತಮಗೆ ಬರುವ ವಾರ್ಷಿಕ ನಿವ್ವಳ ಲಾಭಂಶದಲ್ಲಿ 2% ಹಣವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಮೂಲಕ ರಾಜ್ಯದ ಹಿತ ಕಾಪಾಡುವಲ್ಲಿ ವಿಫಲವಾಗಿದ್ದಾರೆ.
ಕೆಲ ಕಂಪನಿಗಳು ತಮಗೆ ಇಷ್ಟ ಬಂದಂತೆ ಹೊರ ರಾಜ್ಯಕ್ಕೆ ತಮ್ಮ ಇಚ್ಛೆ ಅನುಸಾರ ಖರ್ಚು ಮಾಡುತ್ತಿರುವುದು ಸರ್ಕಾರ ಗಮನಿಸಿ ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ವ್ಯವಹಾರ ಮಾಡುವ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಸಮರ್ಪಕ ವಾಗಿ ರಾಜ್ಯದ ಶಿಕ್ಷಣ ಹಸಿವು ಬಡತನ ನಿರ್ಮೂಲನೆ ಕೊಳಗೇರಿಗಳ ಅಭಿವೃದ್ಧಿ ಮಾಡಲು ಈ ಸಂಸ್ಥೆಗಳಿಗೆ ಸರ್ಕಾರ ಸೂಚನೆ ನೀಡಬೇಕೆಂದು ಮತ್ತು ಈ ಸಂಬಂಧ ಕಾನೂನು ತಿದ್ದುಪಡಿ ಮಾಡಬೇಕೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.