google.com, pub-9939191130407836, DIRECT, f08c47fec0942fa0

Author: Abhinandan

ಈ ಸೃಷ್ಟಿಯಲ್ಲಿ ಅತ್ಯಂತ ಅದ್ಭುತವಾಗಿ ಸೃಷ್ಟಿಯಾಗಿರುವುದು ಮನುಷ್ಯ ದೇಹ : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಶಿವಮೊಗ್ಗ :- ಅಂತರಯಾನಕ್ಕಾಗಿ ದೇಹ ದೇವಾಲಯವಾಗಬೇಕು. ದೇವಾಲಯಗಳು ಬಹಿರ್ಮುಖದಿಂದ ಅಂತರ್ಮುಖಿಯಾಗುವ ಜಗೃತಿ ಕೇಂದ್ರಗಳು ಎಂದು ಚಿತ್ರದುರ್ಗ ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. ಶಿವಮೊಗ್ಗ ಹೊರಹೊಲಯದ ಹೊಳೆಹನಸವಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಾಲಯ ಗೋಪುರ ಲೋಕಾರ್ಪಣೆ ಮತ್ತು…

ಏನ್ ಕೇಡುಗಾಲನೊ ಏನೋ, ಮುಂಗಾರು ಬರುವ ಮುಂಚೆನೇ ಮಳೆ ಮುಳುಗಿಸಿ ಹೋಗಿದೆ : ರೈತನ ಅಳಲು

ಶಿವಮೊಗ್ಗ :- ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಮಳೆರಾಯ ತನ್ನ ಎಫೆಕ್ಟ್ ತೋರಿಸಿದ್ದಾನೆ. ಮುಂಗಾರು ಬರುವ ಮುನ್ನವೇ ಮಲೆನಾಡಿನಲ್ಲಿ ವಿಪರೀತ ಹಾವಳಿ ಮಾಡಿ ರೈತರಿಗೆ ತೊಂದರೆ ಕೊಟ್ಟಿದ್ದಾನೆ. ಮಲೆನಾಡು ಹೊರತುಪಡಿಸಿ ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಮುಂಗಾರು ಇನ್ನೂ…

ಬಿಜೆಪಿ ಸದಸ್ಯರ ಅಮಾನತ್ತು ವಾಪಸ್ಸು ಸದನದ ಪಾವಿತ್ರ್ಯತೆ ನಾಶಗೊಳಿಸಿದಂತಾಗಿದೆ : ಆಯನೂರು

ಶಿವಮೊಗ್ಗ :- ಸದನದ ಕಾರ್ಯಕಲಾಪಗಳಿಗೆ ಅಡ್ಡಿಮಾಡಿದ ಬಿಜೆಪಿ ಸದಸ್ಯರ ಅಮಾನತ್ತನ್ನು ವಾಪಸ್ಸು ತೆಗೆದುಕೊಂಡಿರುವ ನಿರ್ಧಾರ ಸದನದ ಪಾವಿತ್ರ್ಯತೆಯನ್ನು ನಾಶಗೊಳಿಸಿದ್ದು, ಇದು ಸಂವಿಧಾನ ವಿರೋಧಿಯಾಗಿರುವುದಲ್ಲದೆ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಿದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ (ವ್ಯಕ್ತಿಗತ ನೆಲೆಯಲ್ಲಿ) ಹೇಳಿದರು. ಇಂದು ಪತ್ರಿಕಾಗೋಷ್ಟಿಯಲ್ಲಿ…

ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳ ಮಂಜೂರು : ಮಧು ಬಂಗಾರಪ್ಪ

ಶಿವಮೊಗ್ಗ :- ಜಿಲ್ಲೆಗೆ ಐದು ಹೊಸ ವಿದ್ಯಾರ್ಥಿ ವಸತಿ ನಿಲಯಗಳನ್ನು ಮಂಜೂರು ಮಾಡಲಾಗಿದೆ. ವಿದ್ಯಾರ್ಥಿಗಳು ಈ ನಿಲಯಗಳ ಪ್ರಯೋಜನ ಪಡೆಯಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಅವರು ಹೇಳಿದರು. ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಹಿಂದುಳಿದ ವರ್ಗಗಳ ಕಲ್ಯಾಣ…

ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ : ರೆಡ್ ಅಲರ್ಟ್

ಮಂಗಳೂರು :- ರಾಜ್ಯದ ಕರಾವಳಿ ಪ್ರದೇಶದಲ್ಲಿ ಸತತ ಮೂರನೇ ದಿನವಾದ ಸೋಮ ವಾರವೂ ಭಾರಿ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ. ಪರಿಸ್ಥಿತಿಯನ್ನು ನಿಭಾಯಿಸಲು ವಿಪತ್ತು ನಿರ್ವಹಣಾ ತಂಡಗಳನ್ನು ನಿಯೋಜಿಸಲಾಗಿದೆ. ಮುಂದಿನ 48…

ಶಿವಮೊಗ್ಗ ನಗರದ ಬಡಾವಣೆಗಳಲ್ಲಿ ಉದ್ಯಾನವನ ಕಾಮಗಾರಿಗಳಿಗೆ ಗುದ್ದಲಿಪೂಜೆ

ಶಿವಮೊಗ್ಗ :- ಸೂಡಾದಿಂದ ನಗರದ ವಿವಿಧ ಬಡಾವಣೆಗಳಲ್ಲಿ ಉದ್ಯಾನವನ ಅಭಿವೃದ್ದಿ ಸೇರಿದಂತೆ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ನಗರದ ನಿವಾಸಿಗಳು ತಮ್ಮ ಬಡಾವಣೆಗಳ ಉದ್ಯಾನವನಗಳು ಹಾಗೂ ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚ ಮತ್ತು ಸುಂದರವಾಗಿಟ್ಟುಕೊಳ್ಳಬೇಕು ಎಂದು ಸೂಡಾ ಅಧ್ಯಕ್ಷ ಸುಂದರೇಶ್ ಕರೆ…

ಅತಿ ಶೀಘ್ರದಲ್ಲಿ ಪಾಲಿಕೆ ಚುನಾವಣೆ ನಡೆಸಲು ರಾಷ್ಟ್ರಭಕ್ತರ ಬಳಗ ಮನವಿ

ಶಿವಮೊಗ್ಗ :- ಅವಧಿ ಮುಗಿದಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯನ್ನು ಆದ್ಯತೆ ಮೇರೆಗೆ ಅತಿ ಶೀಘ್ರದಲ್ಲೇ ನಡೆಸಬೇಕು ಎಂದು ಇಂದು ಶಿವಮೊಗ್ಗಕ್ಕೆ ಭೇಟಿ ನೀಡುರುವ ರಾಜ್ಯ ಚುನಾವಣಾ ಆಯೋಗದ ಆಯುಕ್ತರಿಗೆ ರಾಷ್ಟ್ರಭಕ್ತರ ಬಳಗ ಮನವಿ ಸಲ್ಲಿಸಿದೆ. ಮಹಾನಗರ ಪಾಲಿಕೆಗೆ ಚುನಾಯಿತ ಪ್ರತಿನಿಧಿಗಳ…

ಶಾಲಾ ಪುನರಾರಂಭ ಸಂಭ್ರಮಿಸಿದ ಜೈನ್ ಪಬ್ಲಿಕ್ ಸ್ಕೂಲ್

ಶಿವಮೊಗ್ಗ:- ಕಳೆದ ಮೇ 22 ರಂದು ಜೈನ್ ಪಬ್ಲಿಕ್ ಸ್ಕೂಲ್ ಪುನಃ ಆರಂಭವಾಗಿ ಮಕ್ಕಳ ಸಂತೋಷ ದಿಂದ ಮುಗಿಲು ಮೀರಿತ್ತು. ಶಾಲೆಯು ಡಿಸ್ನಿಲ್ಯಾಂಡ್ ತರಹ ಬದಲಾಗಿ, ಮಕ್ಕಳು ಪ್ರೀತಿಸುವ ಚೋಟಾ ಭೀಮ್ ಮತ್ತು ಇತರ ಪ್ರಾಣಿ ಪಾತ್ರಗಳು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿದವು.…

ಸರ್ಕಾರದ ಆದೇಶ ಬಂದತಕ್ಷಣ ಪಾಲಿಕೆ ಚುನಾವಣೆ ದಿನಾಂಕ ನಿಗದಿ : ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ

ಶಿವಮೊಗ್ಗ :- ಶಿವಮೊಗ್ಗ ಮಹಾನಗರಪಾಲಿಕೆಗೆ ಚುನಾವಣೆ ನಡೆಸುವ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಸರ್ಕಾರದಿಂದ ಪ್ರತಿಕ್ರಿಯೆ ಬಂದ ಕೂಡಲೇ ಚುನಾವಣೆಗೆ ದಿನಾಂಕ ನಿಗದಿ ಗೊಳಿಸಲಾಗುವುದೆಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ತಿಳಿಸಿದರು. ಮಹಾನಗರ…

ಪಾಕಿಸ್ತಾನವು ಮಂಡಿಯೂರಬೇಕಾದಷ್ಟು ಶೌರ್ಯವನ್ನು ತೋರಿಸಿದ್ದಕ್ಕಾಗಿ ಭಾರತದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ

ಬಿಕಾನೇರ್ :- ‘ಸಿಂಧೂರ’ ಗನ್‌ಪೌಡರ್ ಆದಾಗ ಏನಾಗುತ್ತದೆ ಎಂಬುದನ್ನು ಇದೀಗ ನಮ್ಮ ದೇಶದ ಶತ್ರುಗಳು ತಿಳಿದುಕೊಂಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಪಾಕಿಸ್ತಾನವು ಮಂಡಿಯೂರಬೇಕಾದಷ್ಟು ಶೌರ್ಯವನ್ನು ತೋರಿಸಿದ್ದಕ್ಕಾಗಿ ಭಾರತದ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ನಂತರ…