
ಶಿವಮೊಗ್ಗ:- ಕಳೆದ ಮೇ 22 ರಂದು ಜೈನ್ ಪಬ್ಲಿಕ್ ಸ್ಕೂಲ್ ಪುನಃ ಆರಂಭವಾಗಿ ಮಕ್ಕಳ ಸಂತೋಷ ದಿಂದ ಮುಗಿಲು ಮೀರಿತ್ತು. ಶಾಲೆಯು ಡಿಸ್ನಿಲ್ಯಾಂಡ್ ತರಹ ಬದಲಾಗಿ, ಮಕ್ಕಳು ಪ್ರೀತಿಸುವ ಚೋಟಾ ಭೀಮ್ ಮತ್ತು ಇತರ ಪ್ರಾಣಿ ಪಾತ್ರಗಳು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಿದವು.
ಪ್ರಿನ್ಸಿಪಾಲ್ ಮ್ಯಾಡಮ್ ಅವರ ಉತ್ಸಾಹಭರಿತ ಸ್ವಾಗತ ಭಾಷಣ ದಿಂದ ದಿನ ಆರಂಭವಾಯಿತು. ನಂತರ ಪಿ.ಇ. ಮಾಸ್ಟರ್ ಸಂತೋಷ್ ಸರ್ ಅವರ ಏರೋಬಿಕ್ ಗೀತೆಗಳಿಗೆ ಶಿಕ್ಷಕರು ಮತ್ತು ಕಾರ್ಟೂನ್ ಪಾತ್ರಗಳು ಮಕ್ಕಳೊಂದಿಗೆ ಕುಣಿದರು.

ದಿನವಿಡೀ ಹಲವಾರು ಚಟುವಟಿಕೆಗಳ ಮೂಲಕ ‘ಏಕತೆ ಮತ್ತು ವೈವಿಧ್ಯತೆ’ಯನ್ನು ಆಚರಿಸಲಾಯಿತು. ‘ಹನಿ ಶೋ’ ಕಾರ್ಯಕ್ರಮದಲ್ಲಿ ಶಿಕ್ಷಕರು, ಸಿಬ್ಬಂದಿ, ಪೋಷಕರು ಮತ್ತು ಡ್ರೈವರ್ಗಳು ಭಾಗವಹಿಸಿ, ನಾವು ಎಲ್ಲರೂ ಈ ಶಾಲೆಯ ಭಾಗವೆಂಬ ಭಾವನೆ ಮೆರೆದರು. ವಿಶ್ವಾಸ್ ಸರ್ ‘ಜೇನುನುಣುಪುಗಳ ಮಹತ್ವ ಮತ್ತು ಏಕತೆ’ ಬಗ್ಗೆ ಪ್ರೇರಣಾದಾಯಕ ಭಾಷಣ ನೀಡಿದರು.

ಇದು ಹೊಸ ಶೈಕ್ಷಣಿಕ ವರ್ಷದ ಉತ್ಸಾಹಭರಿತ, ಮೌಲ್ಯಮಯ ಹಾಗೂ ಸೃಜನಾತ್ಮಕ ಆರಂಭ ವಾಗಿತ್ತು! ಒಟ್ಟಾರೆ ಮಕ್ಕಳಂತೂ ಕುಣಿದು ಕುಪ್ಪಳಿಸಿದರು. ಪ್ರಾಚಾರ್ಯರು, ನಿರ್ವಹಣಾ ಮಂಡಳಿ ಪ್ರಮುಖರಿದ್ದರು.
