
ಶಿವಮೊಗ್ಗ :- ಕಳೆದ ಮೂರು ದಿನಗಳಿಂದ ರಾಜ್ಯಾದ್ಯಂತ ಮಳೆರಾಯ ತನ್ನ ಎಫೆಕ್ಟ್ ತೋರಿಸಿದ್ದಾನೆ. ಮುಂಗಾರು ಬರುವ ಮುನ್ನವೇ ಮಲೆನಾಡಿನಲ್ಲಿ ವಿಪರೀತ ಹಾವಳಿ ಮಾಡಿ ರೈತರಿಗೆ ತೊಂದರೆ ಕೊಟ್ಟಿದ್ದಾನೆ.
ಮಲೆನಾಡು ಹೊರತುಪಡಿಸಿ ಕರ್ನಾಟಕದ ದಕ್ಷಿಣ ಕನ್ನಡದಲ್ಲಿ ಸಾಕಷ್ಟು ಮಳೆ ಸುರಿಯುತ್ತಿದೆ. ಮುಂಗಾರು ಇನ್ನೂ ಕೇರಳ ಪ್ರವೇಶಿಸುತ್ತಿದೆ. ಆದರೆ ಇದಕ್ಕೂ ಮುನ್ನ ಮಳೆ ಮುಂಬೈಯಿಂದ ಮಂಗಳೂರಿನವರೆಗೆ ( ಕರಾವಳಿ) ಸಾಕಷ್ಟು ಮಳೆ ಸುರಿಸಿದೆ. ಕರಾವಳಿ ತೀರದಲ್ಲಿ ಜನಜೀವನ ಅತಂತ್ರಗೊಂಡಿದ್ದು, ಸಂಪೂರ್ಣ ರೆಡ್ ಅಲಾರ್ಟ್ ಘೋಷಣೆ ಮಾಡಲಾಗಿದೆ.

ಅಡಿಕೆ ಬೆಳೆಗಾರರಿಗೆ ಅಷ್ಟೇನು ತೊಂದರೆಯಾಗದಿದ್ದರೂ, ವಿಶೇಷ ಬೆಳೆಗಳಾದ ಬತ್ತ, ರಾಗಿ, ಜೋಳ ಮತ್ತಿತರ ಸಾಂಪ್ರದಾಯಿಕ ಬೆಳೆಗಳ ಬೆಳವಣಿಗೆಗೆ ಮಳೆ ಅಡ್ಡಿ ಪಡಿಸಿ ರೈತರಲ್ಲಿ ಆತಂಕ ಮೂಡಿಸಿದೆ. ಮಲೆನಾಡಿನಲ್ಲಿ ರೈತನ ಮೊಗದಲ್ಲಿ ಮಂದಹಾಸ ಬೀರುವ ಬದಲು ಮಳೆ ಬೆಳೆ ನಾಶ ಮಾಡಿದೆ. ಮಳೆ ಇದೇ ರೀತಿ ಮುಂದುವರೆದರೆ. ರೈತ ಸಾಕಷ್ಟು ತೊಂದರೆಗೀಡಾಗುವುದರಲ್ಲಿ ಅನುಮಾನವಿಲ್ಲ.
ಇಂತಹ ಸಂದರ್ಭದಲ್ಲಿ ಸರ್ಕಾರ ರೈತನೊಡನೆ ಕೈ ಜೋಡಿಸಬೇಕಾಗಿದೆ. ಧೈರ್ಯ ತುಂಬಬೇಕಾಗಿದೆ. ಈಗಾಗಲೆ ರೈತ ಸಾಕಷ್ಟು ಬೆಳೆಗಳನ್ನು ಮಳೆಯಿಂದಾಗಿ ಕಳುಕೊಂಡಿದ್ದು, ಇದಕ್ಕೆ ಸರಿಯಾದ ಪರಿಹಾರ ನೀಡಿ ಪರಿಯಾರ ನೀಡಿ ಧೃರ್ಯ ತುಂಬುವ ಕೆಲಸ ಮಾಡಬೇಕಾಗಿದೆ. ಒಟ್ಟಾರೆ ಮುಂಗಾರು ಬರುವ ಮುಂಚೆಯೇ ಸುರಿದ ಈ ಮಳೆ ರಾಜ್ಯದ ಕರಾವಳಿ ಪ್ರದೇಶ ಹಾಗೂ ಮಲೆನಾಡು ಪ್ರದೇಶದ ಜನಜೀವನ ಅಸ್ಥವ್ಯಸ್ಥಗೊಳಿಸಿದೆ.
