google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಜೆ.ಎನ್.ಎನ್.ಸಿ.ಇ ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎನ್ಇಎಸ್ ಕ್ರೀಡೋತ್ಸವ 2026 ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಆಚಾರ್ಯ ತುಳಸಿ‌ ರಾಷ್ಟ್ರೀಯ ವಾಣಿಜ್ಯ ಸಂಜೆ‌ ಕಾಲೇಜು ತಂಡ ಗೆಲುವು ಸಾಧಿಸಿದ್ದು, ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ತಂಡ ರನ್ನರ್‌ ಅಪ್ ಪಡೆದರು.

ಪುರುಷ ವಾಲಿಬಾಲ್ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ ಟ್ರಾನ್ಸ್‌ಪೋರ್ಟ್‌ ವಿಭಾಗ (ಪ್ರಥಮ), ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು (ದ್ವಿತೀಯ), ಶಟಲ್‌ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಫಾರ್ಮಸಿ ಕಾಲೇಜು (ಪ್ರಥಮ), ಜೆ.ಎನ್.ಎನ್.ಸಿ.ಇ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು (ಪ್ರಥಮ), ನ್ಯಾಷನಲ್ ಪಬ್ಲಿಕ್ ಶಾಲೆ (ದ್ವಿತೀಯ) ಸ್ಥಾನ ಪಡೆದಿದೆ.

ಮಹಿಳಾ ಥ್ರೋಬಾಲ್ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ ಮಹಿಳಾ ತಂಡ (ಪ್ರಥಮ), ನ್ಯಾಷನಲ್ ಪಬ್ಲಿಕ್ ಶಾಲೆ ಮಹಿಳಾ – ಬಿ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ- ಎ ತಂಡ (ಪ್ರಥಮ), ಜೆ.ಎನ್.ಎನ್.ಸಿ.ಇ- ಬಿ ತಂಡ (ದ್ವಿತೀಯ), ಶಟಲ್‌ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆ (ಪ್ರಥಮ), ಕಸ್ತೂರಬಾ ಪಿಯು ಕಾಲೇಜು (ದ್ವಿತೀಯ), ಟೆನಿಕಾಯಿಟ್ ಸ್ಪರ್ಧೆಯಲ್ಲಿ ಎಚ್‌.ಎಸ್ ರುದ್ರಪ್ಪ ಪಿಯು ಕಾಲೇಜು (ಪ್ರಥಮ), ಕಮಲಾ‌ ನೆಹರು ಮಹಿಳಾ ಕಾಲೇಜು (ದ್ವಿತೀಯ) ಸ್ಥಾನ ಪಡೆದಿದೆ.

ಇದರೊಂದಿಗೆ ಅಥ್ಲೆಟಿಕ್ಸ್ ಸ್ಪರ್ಧೆಗಳಾದ ನೂರು ಮತ್ತು ಇನ್ನೂರು ಮೀಟರ್ ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ, ಚೆಸ್ ಸ್ಪರ್ಧೆಗಳು ನಡೆಯಿತು. ಎಲ್ಲಾ ವಯೋಮಾನದವರಿಗೆ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *