
ಶಿವಮೊಗ್ಗ :- ಸಚಿವ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ‘ಕಲ್ಟ್ ’ಚಿತ್ರವು ಹೊಸ ವರ್ಷ ಜ. 23ಕ್ಕೆ ರಾಜದ್ಯಂತ ಬಿಡುಗಡೆಯಾಗುತ್ತಿದ್ದು, ಚಿತ್ರ ತಂಡವು ಈಗ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.
ಈ ಹಿನ್ನಲೆ ಇಂದು ಶಿವಮೊಗ್ಗದ ರಾಯಲ್ ಆರ್ಕೇಡ್ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ನಟ ಝೈದ್ ಖಾನ್, ಕಲ್ಟ್ ಎನ್ನುವುದು ಸಾಕಷ್ಡು ಬಳಕೆಯಲ್ಲಿರುವ ಪದ. ಸಾಮಾನ್ಯವಾಗಿ ಹಳ್ಳಿಸೊಗಡಿನ ಗಟ್ಟಿ ತನ ಅಥವಾ ಮಾಸ್ ಎನ್ನುವ ಅರ್ಥದಲ್ಲಿ ಈ ಪದವನ್ನು ಬಳಸಲಾಗುತ್ತದೆ. ಇದನ್ನೇ ಮುಂದಿಟ್ಡುಕೊಂಡು ಕಲ್ಟ್ ಹೆಸರಲ್ಲಿ ನಾವು ಸಿನಿಮಾ ಮಾಡಿದ್ದೇವೆ . ಇದೊಂದು ರೋಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ.ಎಮೋಷನ್ ಜತೆಗೆ ಆಕ್ಷನ್ ಸನ್ನಿವೇಶಗಳು ಈಸಿನಿಮಾದ ಹೈಲೆಟ್ ಎಂದು ತಿಳಿಸಿದರು.
ಬನಾರಸ್ ಚಿತ್ರದ ನಂತರ ಕಲ್ಟ್ ಹೆಸರಲ್ಲಿ ತಾವು ಸಿನಿಮಾಮಾಡಿದ್ದಕ್ಕೆ ವಿವರಣೆ ನೀಡಿದ ಅವರು, ಮೊದಲ ಚಿತ್ರ ಬನಾರಸ್ ಒಂದು ವಿಭಿನ್ನ ಬಗೆಯ ಚಿತ್ರವಾಗಿತ್ತು.ಆದರೆ ಅದನ್ನುಅರ್ಥ ಮಾಡಿಕೊಳ್ಳುವಲ್ಲಿ ಪ್ರೇಕ್ಚಕರಿಗೆ ಕಷ್ಟವಾಯಿತು. ಹಾಗಾಗಿ ಜನರಿಗೆ ಸುಲಭವಾಗಿ ಅರ್ಥವಾಗುವಂತಹ ಕಥೆಯೊಂದಿಗೆ ಸಿನಿಮಾ ಮಾಡಬೇಕೆನ್ನುವ ಉದ್ದೇಶದೊಂದಿಗೆ ಈ ಕಥೆಯನ್ನು ಆಯ್ಕೆಮಾಡಿಕೊಂಡುಸಿನಿಮಾ ಮಾಡಿದ್ದೇವೆ ಎಂದರು.
ಚಿತ್ರದಲ್ಲಿ ಆರು ಸಾಂಗ್ಸ್ , ಮೂರು ಆಕ್ಷನ್ ಸನ್ನಿವೇಶಗಳಿವೆ. ಯುವಜನರಿಗೆ ಇದು ತುಂಬಾ ಇಷ್ಟವಾಗುವ ವಿಶ್ವಾಸವಿದೆ. ಹೆಸರಾಂತ ನಟಿರಚಿತಾ ರಾಮ್ ಅವರು ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.ನಿರ್ಮಾಪಕರು ಅದ್ದೂರಿಯಾಗಿ ಚಿತ್ರ ನಿರ್ಮಾಣ ಮಾಡಿದ್ದಾರೆ.ಈಗಾಗಲೇ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ ಈ ಚಿತ್ರದ ಮೊದಲ ಹಾಡು “ಅಯ್ಯೊ ಶಿವನೇ” ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆಯಾಗಿ, ಸಾಕಷ್ಟುಜನಪ್ರಿಯತೆ ಪಡೆದಿದೆ ಎಂದರು.
ಚಿತ್ರದ ನಾಯಕಿ ಮಲೈಕಾ ಮಾತನಾಡಿ, ನಾನು ದಾವಣಗೆರೆ ಹುಡುಗಿ. ಧಾರವಾಹಿಗಳ ಮೂಲಕ ನನ್ನ ನಟನೆಯ ಜರ್ನಿ ಶುರುವಾಗಿದೆ. ಈಗ ಕಲ್ಟ್ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದೇನೆ. ಪಾತ್ರದ ಬಗ್ಗೆ ಹೆಚ್ಚು ಹೇಳಲಾರೆ. ಆದರೆ ಈ ಪಾತ್ರದ ಮೂಲಕ ಒಳ್ಳೆಯ ಅವಕಾಶಗಳು ಸಿಗಬಹುದು ಎನ್ನುವ ನಿರೀಕ್ಷೆಯಿದೆ ಎಂದರು.
ಪತ್ರಿಕಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ. ಶ್ರೀಕಾಂತ್, ಕಾಂಗ್ರೆಸ್ ಮುಖಂಡರಾದ ಹೆಚ್.ಸಿ. ಯೋಗೇಶ್, ಕಲೀಂ ಪಾಷಾ, ನಾಗರಾಜ್ ಕಂಕಾರಿ, ಪಾಲಾಕ್ಷಿ, ಶಿವಕುಮಾರ್, ವಿನಯ್ ತಂದ್ಲೆ, ಬಸವರಾಜ್ ಇನ್ನಿತರರಿದ್ದರು.