
ಶಿವಮೊಗ್ಗ :- ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಶಿಕ್ಷಣ ವ್ಯವಸ್ಥೆಯ ಕುರಿತು ಕಥೆಯನ್ನು ಹೊಂದಿರುವ ಭಾರತಿ ಟೀಚರ್ (7ನೇ ತರಗತಿ ಚಲನಚಿತ್ರ) ಜ. 16ರಂದು ರಾಜ್ಯಾದ್ಯಂತ ಬಿಡುಗಡೆ ಯಾಗಲಿದೆ ಎಂದು ನಿರ್ಮಾಪಕ ರಾಘವ ಸೂರ್ಯ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಎಂ.ಎಲ್. ಪ್ರಸನ್ನ ನಿರ್ದೇಶನದ ಈ ಚಿತ್ರಕ್ಕೆ ರಾಘವೇಂದ್ರರೆಡ್ಡಿ, ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು ಬಿಡು ಗಡೆಗೊಂಡಿವೆ. ಭಾರತಿ ಎನ್ನುವ 7ನೇ ತರಗತಿ ವಿದ್ಯಾರ್ಥಿಯೊಬ್ಬಳು ಶಿಕ್ಷಕಿಯಾಗುವ ಕನಸ್ಸನ್ನು ಹೇಗೆ ನನಸು ಮಾಡಿಕೊಳ್ಳುತ್ತಾಳೆ. ತನ್ನ ಊರಿನ ಪ್ರತಿಯೊಬ್ಬರನ್ನು ಸಹ ಕನ್ನಡದಲ್ಲಿ ಓದುವ-ಬರೆಯುವ ದೃಢಸಂಕಲ್ಪ ಮಾಡುತ್ತಾಳೆ ಮತ್ತು ಹೇಗೆ ಯಶಸ್ವಿಯಾಗುತ್ತಾಳೆ ಎಂಬ ಕಥಾ ಹಂದರದ ಸಿನಿಮಾ ಇದು. ಸಂಗೀತ ಮತ್ತು ಸಾಹಿತ್ಯ ನೋಡುಗ ರಿಗೆ ಆಪ್ತವೆನಿಸುತ್ತದೆ ಎಂದರು.
ಮಕ್ಕಳನ್ನು ಈ ಚಿತ್ರಕ್ಕೆ ಕರೆತರಬೇಕು ಎಂಬ ಉದ್ದೇಶ ನಮ್ಮ ಚಿತ್ರತಂಡಕ್ಕೆ ಇದೆ. ಹಾಗಾಗಿ ಮಲ್ಟಿಫ್ಲೆಕ್ಸ್ ಟಾಕೀಸ್ ಗಳನ್ನು ಬಿಟ್ಟು ಸಿಂಗಲ್ ಟಾಕೀಸ್ ಗಳನ್ನು ಪ್ರದರ್ಶನದ ದರ ಕೇವಲ ೫೦ರೂ. ನಿಗಧಿ ಮಾಡಲು ನಾನು ಈಗಾಗಲೇ ನಿರ್ಧರಿಸಿದ್ದೇವೆ. ಗುಂಪಾಗಿ ಮಕ್ಕಳು ಬಂದರೆ ಇನ್ನೂ ಕಡಿಮೆ ದರದಲ್ಲಿ ಚಿತ್ರವನ್ನು ತೋರಿಸ ಲಾಗುವುದು ಎಂದರು. ಚಿತ್ರದ ನಾಯಕ ರೋಹಿತ್ ರಾಘವೇಂದ್ರ, ಶಿಕ್ಷಕ ಸಿಹಿಕಹಿ ಚಂದ್ರು ಅಭಿನಯಿಸಿದ್ದಾರೆ. ಕು.ಆಶಿಕಾ, ಗೋವಿಂದೇ ಗೌಡ, ಅಶ್ವಿನ್ಹಾಸನ್, ದಿವ್ಯಾ ಅಂಚನ್ ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಸಚಿವ ಸಂತೋಷ್ ಲಾಡ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಂತೋಷ್ ಎಸ್.ಲಾಡ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು.
ಮಕ್ಕಳು ಮಾತ್ರವಲ್ಲದೆ ದೊಡ್ಡವರು ಕೂಡ ಈ ಸಿನಿಮಾ ನೋಡಬೇಕು. ಮಕ್ಕಳನ್ನು ಅರ್ಥಮಾಡಿಕೊಂಡು ಅವರನ್ನು ಪ್ರೋತ್ಸಾಹಿಸಿ ಮಾರ್ಗ ದರ್ಶಕರಾಗಬೇಕು ಎಂದರು. ಗೋಷ್ಠಿಯಲ್ಲಿ ಸಮಿತಿ ಪ್ರಮುಖ ರಾದ ಸುಮಂಗಲಾ, ನಾಗರಾಜ್, ರಾಘವೇಂದ್ರ, ರಘು ಇದ್ದರು.
