google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸೇವೆ ಮಾಡುವ ಮನೋಭಾವ ಯಾರಿಗೆ ಬರುತ್ತೆ ಸ್ವಾಮಿ, ಅದು ಎಲ್ಲರಿಗೂ ಬರೊಲ್ಲ. ಹೋಂ ಗಾರ್ಡ್ ಪೊಲೀಸರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ಹೇಳಿದರು.

ಇಂದು ಶಿವಮೊಗ್ಗ ಫ್ರೀಡಂ ಪಾರ್ಕ್ ಆವರಣದಲ್ಲಿ ಹೋಂ ಗಾರ್ಡ್ ಪೊಲೀಸರು ಸ್ವಚ್ಛತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರನ್ನುದ್ದೇಶಿಸಿ ಮಾತನಾಡಿದ ಅವರು, ಕರ್ತವ್ಯ ನಿಷ್ಠೆಯನ್ನು ಹೋಂ ಗಾರ್ಡ್ ಅವರಿಂದ ಕಲಿಯಬೇಕು. ಇವರೂ ಕೂಡ ಶಿಸ್ತಿನ ಸಿಪಾಯಿಗಳು. ಯಾವುದೇ ಜನ ದಟ್ಟಣೆ ಕಾರ್ಯಕ್ರಮಗಳಲ್ಲಿ, ಮೆರವಣಿಗೆಗಳಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕೂಡ ಹೆಮ್ಮೆ ಅನಿಸುತ್ತದೆ ಎಂದರು.

ಜನರ ಸೇವೆ ಜನಾರ್ಧನನ ಸೇವೆ ಇದ್ದ ಹಾಗೆ, ನಾವು ಕೂಡ ಯಾವುದೇ ಕೆಲಸವಾಗಲಿ ಅದನ್ನು ಸರ್ಕಾರದ ಕೆಲಸ ಎಂದು ಸೀಮಿತ ಗೊಳಿಸದೆ, ಇದು ನಮ್ಮ ಕರ್ತವ್ಯ ಎಂದು ಭಾವಿಸಿ ಕೆಲಸ ಮಾಡುತ್ತೇವೆ. ಅದೇ ರೀತಿ ಹೋಂ ಗಾರ್ಡ್ ಪೋಲೀಸರು ನಾಡ ಹಬ್ಬ ದಸರಾ ಉತ್ಸವದಲ್ಲಿ ತಮ್ಮ ಪಾತ್ರವು ಒಂದು ಎಂಬ ನಿಟ್ಟಿನಲ್ಲಿ ಇಂದು ದಸರಾ ಕಾರ್ಯಕ್ರಮ ನಡೆಯುವ ಮುಖ್ಯ ಸ್ಥಳವಾದ ಫ್ರೀಡಂ ಪಾರ್ಕ್ ಸ್ವಚ್ಚಗೊಳಿಸಲು ಮುಂದಾಗಿದ್ದಾರೆ. ನಿಜಕ್ಕೂ ಶ್ಲಾಘನೀಯ ಕಾರ್ಯ ಭಾಗವಹಿಸಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ದಸರಾ ಮೆರವಣಿಗೆಗೆ ಬಾಲಣ್ಣ, ಸಾಗರ್, ಬಹದ್ದೂರ್ ತಾಲೀಮು…

ನಾಡ ಹಬ್ಬ ಶಿವಮೊಗ್ಗ ದಸರ ನೋಡುವುದೇ ಒಂದು ಆನಂದ. ಅದರಲ್ಲೂ ಮೈಸೂರಿನಂತೆಯೇ ಶಿವಮೊಗ್ಗದಲ್ಲೂ ಅಂಬಾರಿ ಹೋರುವ ಅರ್ಜುನ ಮೆರವಣಿಗೆಯಲ್ಲಿ ಸಾಗಲು ಬಾಲಣ್ಣ, ಬಹದ್ದೂರ್ ಜೊತೆಗಿರಲು ಎಲ್ಲಾ ರೀರಿಯ ತಾಲೀಮು ನಡೆಸಲಾಗುತ್ತಿದೆ. ಜೊತೆಗೆ ಮಾಹುತರು ಈ ಮೂವರೊಂದಿಗೆ ಪ್ರತಿದಿನ ಮೆರವಣಿಗೆ ಸಾಗುವ ರಸ್ತೆಯಲ್ಲಿ ಕರೆದೊಯ್ದು ಫ್ರೀಡಂ ಪಾರ್ಕಿನಲ್ಲಿ ಸುಮಾರು ೨ರಿಂದ ಮೂರು ತಾಸು ಆಹಾರ ಕೊಟ್ಟು ನಿಲ್ಲಿಸುತ್ತಾರೆ. ಅದನ್ನು ನೋಡಲು ಜನರು ತಂಡೋಪ ತಂಡವಾಗಿ ಭಾಗವಹಿಸಿ ಫೋಟೋ ಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *