
ಇದುವರೆಗೂ ನಾವು ನಮ್ಮ ಬೆನ್ನು ಮೂಳೆಯ ಚಿಕಿತ್ಸೆಗಾಗಿ ನರರೋಗ ತಜ್ಞರನ್ನೋ ಅಥವಾ ಕೀಲು ಮೂಳೆ ತಜ್ಞರನ್ನೋ ಭೇಟಿಯಾಗಿ ಸಲಹೆ ಚಿಕಿತ್ಸೆ ಪಡೆಯುತ್ತಿದ್ದೆವು. ಆದರೆ ಇದೀಗ ಬೆನ್ನು ಮೂಳೆಯನ್ನು ವಿಶೇಷವಾಗಿ ತಮ್ಮ ಅಧ್ಯಯನದ ಭಾಗವಾಗಿ ಮಾಡಿಕೊಂಡು ಬೆನ್ನು ಮೂಳೆಯ ಆಳ ಅಗಲವನ್ನೆಲ್ಲ ಅರಿತು ಒಂದು ಸಾವಿರಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಯ ವಿಶೇಷ ಅನುಭವದೊಂದಿಗೆ ಆಕಾಶದ ಎತ್ತರಕ್ಕೆ ಏರಿ ನುರಿತ ತಜ್ಞರಾಗಿ ಹೊರ ಬಂದಿರುವ ಡಾ| ಆಕಾಶ್ ಅವರು ಇದೀಗ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸರ್ವ ಸುಸಜ್ಜಿತವಾದ ಮತ್ತು ಆಧುನಿಕ ಡೆಕ್ಸಾ-ಸ್ಕ್ಯಾನ್, ಡಿಜಿಟಲ್ ಎಕ್ಸರೇ, ಸಿಟಿ ಸ್ಕ್ಯಾನ್-ಮುಂತಾದ ಅತಿ ಆಧುನಿಕ ತಾಂತ್ರಿಕ ಸಾಧನ ಸಲಕರಣೆಗಳ ವ್ಯವಸ್ಥೆಗಳನ್ನು ಹೊಂದಿದ ಸನ್-ಬೋನ್ ಅಂಡ್ ಸ್ಪೈನ್ ಸ್ಪೆಷಾಲಿಟಿ ಹಾಸ್ಪಿಟಲ್ ಅನ್ನು ಪ್ರಾರಂಭಿಸುತ್ತಿದ್ದಾರೆ. ವೈದ್ಯಕೀಯವನ್ನು ವೃತ್ತಿ ಎನ್ನುವುದಕ್ಕಿಂತ ಜನಸೇವೆಯ ಸಾಧನ ಎಂದು ನಂಬಿರುವ ಡಾ| ಆಕಾಶ್ ಅವರ ಕುರಿತು ಸಣ್ಣ ಪರಿಚಯ ಈ ಲೇಖನದಲ್ಲಿದೆ ನಿರ್ಲಕ್ಷಿಸದೆ ಓದಿ ನಿಮಗೋ ಅಥವಾ ನಿಮ್ಮವರಿಗೋ ಖಂಡಿತ ಉಪಯೋಗವಾಗುತ್ತದೆ.
ಬೆನ್ನು ನೋವಿನ ಅನುಭವ ಯಾರಿಗಿಲ್ಲ ಹೇಳಿ?
ಈ ಮೊದಲು 60 ವರ್ಷ ದಾಟಿದ ವೃದ್ಧರಿಗೆ ವಯೋಸಹಜ ಎಂಬಂತೆ ಬೆನ್ನು ನೋವು ಕಾಣಿಸಿಕೊಳ್ಳುತ್ತಿತ್ತು, ಆದರೆ ಈಗ ಹಾಗಿಲ್ಲ. ಮಧ್ಯಮ ವಯಸ್ಕರಿಗೂ ಸಹ ಬೆನ್ನು ನೋವಿನ ಬಾಧೆ ಸಾಮಾನ್ಯವಾಗುತ್ತಿದೆ, ಇದಕ್ಕೆ ಕಾರಣಗಳು ಹಲವಾರು. ಇಂದಿನ ಗಡಿಬಿಡಿಯ ಜೀವನ ಶೈಲಿ ಒಂದಾದರೆ ಸಮಯದೊಂದಿಗೆ ಪೈಪೋಟಿಗೆ ಇಳಿದು ನಾವು ಬಳಸುವ ವಾಹನಗಳು ರಸ್ತೆಯ ಗುಂಡಿಗಳಲ್ಲಿ ಎದ್ದು, ಕುಣಿದು , ಕುಪ್ಪಳಿಸಿ ಹೋಗುವುದರಿಂದಾಗಿ ಬೆನ್ನು ಮೂಳೆಗೆ ಬೀಳುವ ಒತ್ತಡದಿಂದಾಗಿಯೂ ಬೆನ್ನುನೋವು ಕಾಣಿಸಿಕೊಳ್ಳುತ್ತಿದೆ. ಏನೋ ಪ್ರಯಾಣದ ಆಯಾಸ ದಿಂದ ಬೆನ್ನು ನೋವು ಬಂದು ಒಂದೆರಡು ದಿನ ವಿಶ್ರಾಂತಿ ನಂತರ ಹೋದರೆ ಪರವಾಗಿಲ್ಲ ಆದರೆ ದೇಹದ ಸಂಪೂರ್ಣ ಭಾರ ಹೊರುವ ಪ್ರಧಾನ ಅಂಗದಲ್ಲಿ ಒಂದಾದ ಹಾಗೂ ನರಮಂಡಲ ವ್ಯೂಹದ ಕೇಂದ್ರ ಬಿಂದುವಂತಿರುವ ಬೆನ್ನು ನೋವಿನ ಬಾಧೆ ಬೇತಾಳದಂತೆ ಬೆನ್ನು ಹಿಡಿದರೆ ಎಂತಹ ವ್ಯಕ್ತಿಯಾದರೂ ಒಮ್ಮೆ ನಡುಗಿ ಹೋಗುತ್ತಾನೆ. ಇಂತಹ ಸಂದರ್ಭದಲ್ಲಿ ನಿಮಗೆ ಪರಿಹಾರದ ಖಾತ್ರಿಯೊಂದಿಗೆ ಚಿಕಿತ್ಸೆ ನೀಡಿ ಕ್ವಿಂಟಾಲ್ ಭಾರದ ಅಡಿಕೆ ಚೀಲವನ್ನು ಎತ್ತಬಲ್ಲಂತೆ ಬೆನ್ನು ಮೂಳೆಯನ್ನು ಗಟ್ಟಿಗೊಳಿಸಬಲ್ಲ ವೈದ್ಯರೆಂದರೆ ನಮ್ಮ ಜಿಲ್ಲೆಯವರೇ ಆದ ಡಾ| ಆಕಾಶ್ ಅವರು. ಆಕಾಶ ನೋಡೋದಕ್ಕೆ ನೂಕುನುಗ್ಲು ಯಾಕೆ ಎನ್ನುವ ಒಂದು ಮಾತಿದೆ ಅಂದ್ರೆ ಯಾವುದೇ ಗಡಿಬಿಡಿಯಿಲ್ಲದೆ ಯಾವಾಗ ಬೇಕಾದರೂ ಆಕಾಶವನ್ನು ನೋಡಬಹುದು. ಹಾಗೆಯೇ ಡಾ. ಆಕಾಶ್ ಅವರನ್ನು ಸಹ ನೀವು ಸರಳವಾಗಿ ಭೇಟಿ ಮಾಡುವಷ್ಟು ಸರಳತನ ಸೌಜನ್ಯತೆ ಅವರಲ್ಲಿದೆ.

ಮಲಗಿದ ೮ರ ಆಕಾರದಲ್ಲಿರುವ ಬೆನ್ನು ಮೂಳೆ ಕತ್ತಿನ ಮೂಲದಿಂದ ಹಿಡಿದು ಬುಡದತನಕ ಒಂದರ ಮೇಲೊಂದರಂತೆ ಜೋಡಿಸ ಲ್ಪಟ್ಟಿದ್ದು ಶಾಕ್ ಅಬ್ಸರ್ವ್‌ನಂತೆ ಕೆಲಸ ಮಾಡುವ ಸ್ಪಂಜಿನಂತಹ ಲಿಗ್ಮೆಂಟ್ ಹೊಂದಿರುತ್ತದೆ ಎಂದು ಶರೀರ ವಿಜ್ಞಾನ ಹೇಳುತ್ತದೆ. ಈ ಮಣಿಕಟ್ಟುಗಳ ಮೇಲೆ ವಿಶೇಷ ಒತ್ತಡ ಬಿದ್ದಾಗ ಐ-೪ಮತ್ತು ಐ-5, ಸರ್ವಿಕಲ್ಸ್ ಸ್ಪಾಂಡಿ ಲೈಟ್ ಹಾಗೂ ಟೈಲ್ ಬೋನ್ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
ಶೃಂಗೇರಿ ಸಮೀಪದ ಹೊಸ್ತೋಟ ಗ್ರಾಮದ ಶ್ರೀಮತಿ ನಮಿತಾ ಹಾಗೂ ಸೂರ್ಯ ನಾರಾಯಣ್ (ಆಕಾಶ್ ಇನ್ ಹೋಟೆಲ್) ಅವರ ಪುತ್ರರಾಗಿ ಜನಿಸಿದ ಶ್ರೀಯುತ ಆಕಾಶ್ ಅವರು ತಮ್ಮ ಬಾಲ್ಯದಿಂದಲೇ ವೈದ್ಯರಾಗುವ ಕನಸು ಕಂಡವರು, ಶಿವಮೊಗ್ಗದ ಎಜುಕೇರ್ ಹಾಗೂ ಜ್ಞಾನ ದೀಪ ಶಾಲೆಗಳಲ್ಲಿ ಪ್ರಾಥಮಿಕ ಮತ್ತುಮಾಧ್ಯಮಿಕ ಶಿಕ್ಷಣವನ್ನ ಮುಗಿಸಿ ಬಂಟ್ವಾಳದ ಸಮೀಪವಿರುವ ಅಳಿಕೆಯ ಲೋಕ ಸೇವಾ ವಿದ್ಯಾ ಕೇಂದ್ರದಲ್ಲಿ ಪ್ರೌಢ ಹಾಗೂ ಪಿಯುಸಿ ಶಿಕ್ಷಣವನ್ನ ಮುಗಿಸಿದರು.
ತಂದೆ ತಾಯಿಗಳ ಬೆಂಬಲದೊಂದಿಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದ ಡಾ. ಆಕಾಶ್ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ತಮ್ಮ ಎಂಬಿಬಿಎಸ್ ಪದವಿ ಪಡೆದು ಕೊಂಡರು. ಬೆನ್ನುಮೂಳೆಯ ಅಧ್ಯಯನದ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ ಆಕಾಶ ರವರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಎಸ್‌ಆರ್ಥೋಪಿಡಿಕ್ಸ್ ಶಿಕ್ಷಣ ಮುಗಿಸಿ ಇಂಗ್ಲೆಂಡಿನ ಗ್ಲಾ ಸ್ಕೋ ವಿಶ್ವವಿದ್ಯಾಲಯದಲ್ಲಿ ಎಂ ಆರ್ ಸಿ ಎಸ್ ಪದವಿಯನ್ನು ಪಡೆದು ಕೊಂಡಿದ್ದಾರೆ. ಬೆಲ್ಜಿಯಂ ಸೀಕೋಟ್ ನಿಂದ ಡಿಪ್ಲೋಮೋ ಪದವಿ, ದೆಹಲಿಯ ನ್ಯಾಷನಲ್ ಬೋರ್ಡ್ ಆಫ್ ಎಜುಕೇಶನ್ ಸಂಸ್ಥೆಯಲ್ಲಿ ಬೆನ್ನು ಮೂಳೆ ಚಿಕಿತ್ಸೆ ಕುರಿತ ಎಫ್‌ಎನ್ ಬಿ ಸ್ಪೈನ್ ಸರ್ಜರಿಯಲ್ಲಿ ಉನ್ನತ ಶಿಕ್ಷಣದ ಪದವಿ ಪಡೆದರು. ಕೊಯಂಬತ್ತೂರಿನ ಗಂಗಾ ಹಾಸ್ಪಿಟಲ್‌ನಲ್ಲಿ ಡಾ. ಎಸ್ ರಾಜಶೇಖರ ಅವರ ಮಾರ್ಗದರ್ಶನದಲ್ಲಿ ಹಾಗೂ ಬೆಂಗಳೂರು ಹಾಸ್ಪಿಟಲ್ ನಲ್ಲಿ ಡಾ. ಸತೀಶ್ ರುದ್ರಪ್ಪ ಅವರ ನೇತೃತ್ವ ದಲ್ಲಿ ಬೆನ್ನುಹುರಿ ಶಸ್ತ್ರಚಿಕಿತ್ಸೆಯ ಆಳವಾದ ಅಭ್ಯಾಸ ಮಾಡಿದರು. ಅಧ್ಯಯನ ಮಾಡಲು ಇನ್ನೂ ಏನಾದರೂ ಉಳಿದಿದೆಯೇನೋ ಎಂದು ನೋಡಲು ಸೌತ್ ಕೊರಿಯಾ ದ ಡಾ| ಕಂಗ್ ಟೇಕ್ ಲಿಂ ಅವರೊಂದಿಗೆ ಕೆಲಸ ಮಾಡಿ ಸಂಪೂರ್ಣ ಅನುಭವವನ್ನು ಗಳಿಸಿ ಕೊಂಡರು. ಹೀಗೆ ಸತತ ಪರಿಶ್ರಮದ ಸಾಧನೆಯೊಂದಿಗೆ ಬೆನ್ನುಮೂಳೆಯ 32 ಪ್ರತಿ ಮಣಿಗಂಟಿನೊಂದಿಗೆ 4-6 ತಿಂಗಳು ಕಳೆದು ಅವರೊಂದಿಗೆ ತಟ್ಟಿ ಮುಟ್ಟಿ ಮಾತನಾಡಿ ಒಳಹೊಕ್ಕು ಅದರ ಸೂಕ್ಷ್ಮಾತಿ ಸೂಕ್ಷ್ಮ ಸ್ವಭಾವವನ್ನು ಅರಿತು ರೋಗಿಗೆ ಆಗಿರುವ ಬಾಧೆಯ ಕಾರಣ ಕಂಡು ಹಿಡಿವ ಆಳವಾದ ಸಂಶೋಧಕ ಜ್ಞಾನ ಪಡೆದಿರುವ ಡಾ| ಆಕಾಶ್ ಅವರು ಸಾವಿರಕ್ಕೂ ಅಧಿಕ ಬೆನ್ನುಮೂಳೆಯ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ ಅನೇಕ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ವೈದ್ಯಕೀಯ ಸಮ್ಮೇಳನಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ, ಅಲ್ಲದೆ ಡಾ| ಸತೀಶ್ ರುದ್ರಪ್ಪ ಡಾ| ರಾಮಚಂದ್ರನ್ ಮತ್ತು ಡಾ. ಧ್ರುವ ಅವರೊಂದಿಗೆ ಸೇರಿ ಎರಡು ವೈದ್ಯಕೀಯ ಗ್ರಂಥಗಳನ್ನು ಬರೆದು ಪ್ರಕಟಿಸಿದ್ದಾರೆ.
ಬೆಂಗಳೂರಿನ ತಮ್ಮ ವೈದ್ಯಕೀಯ ಸೇವಾವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಿಂದಲೇ ಶೇ. 20 ರಿಂದ 30ರಷ್ಟು ರೋಗಿಗಳು ಕೀಲು ಮೂಳೆ ಚಿಕಿತ್ಸೆಗಾಗಿ ಬರುವುದನ್ನು ಗಮನಿಸಿದ ಆಕಾಶ್ ಅವರು ನನ್ನ ಅನುಭವದ ಸೇವೆ ನಮ್ಮ ಜಿಲ್ಲೆಯ ಜನತೆಗೆ ಸಮೀಪದಲ್ಲಿಯೇ ಸಿಗುವಂತಾಗ ಬೇಕು ಎಂಬ ಬಯಕೆಯೊಂದಿಗೆ ಶಿವಮೊಗ್ಗದಲ್ಲಿ ತಮ್ಮದೇ ಆದ 15 ಜನರ ವೈದ್ಯ ತಂಡದೊಂದಿಗೆ ಸುಸಜ್ಜಿತವಾದ ಪ್ರಪ್ರಥಮ ವಾಗಿ ವಿಶೇಷವಾಗಿ ಬೆನ್ನುಹುರಿ ಚಿಕಿತ್ಸೆಗೆ ಮೀಸಲಾದ ಆಸ್ಪತ್ರೆಯನ್ನು ತೆರೆಯಲು ನಿರ್ಧರಿಸಿ ಇದೀಗ ಅದನ್ನು ಸಾಕಾರಗೊಳಿಸುವ ಅಂತಿಮ ಹಂತದಲ್ಲಿದ್ದಾರೆ. ಇವರಿಗೆ ಇವರ ಪತ್ನಿ ನೇತ್ರ ತಜ್ಞೆ ಡಾ| ಪೂಜಾ ಅವರು ಬೆಂಬಲಿಸಿ ನಿಂತಿದ್ದಾರೆ. ಇದೀಗ ನೀವೇ ಹೇಳಿ ತಜ್ಞತೆ-ಸೇವಾ ಭಾವನೆ- ಸೌಜನ್ಯತೆ- ಸಂಗಮ ವಾಗಿರುವ ಇಂತಹ ಸೇವಾ ಮನೋಭಾವದ ತಜ್ಞ ವೈದ್ಯರು ಶಿವಮೊಗ್ಗಕ್ಕೆ ಆಗಮಿಸಿರುವುದು ಮೂಳೆ ಹಾಗೂ ಬೆನ್ನು ನೋವಿನ ರೋಗಿಗಳಿಗೆ ಮನೆ ಬಾಗಿಲಿಗೆ ಬಂದ ಭಾಗ್ಯ ಎಂಬುದುಸರಿ ಅಲ್ಲವೇ?
ಬೆನ್ನು ಮೂಳೆ ಸಮಸ್ಯೆ ಏಕೆ? ಮತ್ತು ಹೇಗೆ?
ಬೆನ್ನು ಮೂಳೆ ಸಮಸ್ಯೆ ಎಂಬುದು ವ್ಯಾಧಿಯು ಅಲ್ಲ, ವಿರೂಪತೆಯು ಅಲ್ಲ ಬದಲಾಗಿ ಸವಕಳಿ ಮತ್ತು ಜೀವನ ಶೈಲಿಯ ಬದುಕಿನಿಂದಾಗಿ ಬರುವ ಸಮಸ್ಯೆಯಾಗಿದೆ ಎನ್ನುತ್ತಾರೆ ಆಕಾಶ್ ಅವರು. ಬಹಳ ಹೊತ್ತು ಕೂತು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ಸರ್ವಿಕಲ್ ಸಮಸ್ಯೆಗಳು ಹೆಚ್ಚು ಅದೇ ರೀತಿ ಭಾರ ಎತ್ತುವ ಹಾಗೂ ಸದಾ ಸಂಚಾರ, ಪ್ರಯಾಣದಲ್ಲಿರುವ, ದ್ವಿಚಕ್ರಗಳಲ್ಲಿ ಸಂಚರಿಸುವ ಉದ್ಯೋಗದಲ್ಲಿರುವವರಿಗೆ ಡಿಸ್ಕ್ ಬಲ್ಜಿನ ಸಮಸ್ಯೆ ಹೆಚ್ಚು. ದಿನಗಟ್ಟಲೆ ಕೂತೆ ಕೆಲಸ ಮಾಡುವವರಲ್ಲಿ ಟೈಲ್ ಬೋನ್ ಪ್ರಾಬ್ಲಮ್ ಜಾಸ್ತಿ ಇರುತ್ತದೆ ಎನ್ನುತ್ತಾರೆ .
ಧೂಮಪಾನ ಸೇವನೆ, ಅತಿಯಾದ ಬೊಜ್ಜು, ಒತ್ತಡದ ಜೀವನ ಶೈಲಿ, ಭಾರ ಎತ್ತುವುದು ಬಹು ಪ್ರಧಾನ ಕಾರಣ ಎನ್ನುವ ಡಾ| ಆಕಾಶ್ ನಿತ್ಯದ ವ್ಯಾಯಾಮ ಹಾಗೂ ಸತತವಾಗಿ ಒಂದೇ ಕಡೆ ಕೂಡದೆ ಆಗಾಗೆ ಎದ್ದು ಕೂತು ಭಂಗಿ ಬದಲಿಸುವ ಮೂಲಕಸಮಸ್ಯೆಗೆ ಸಾಕಷ್ಟು ಪರಿಹಾರ ಕಂಡುಕೊಳ್ಳ ಬಹುದು ಎನ್ನುತ್ತಾರೆ. ಈವರೆಗಿನ ತಮ್ಮ ಸೇವಾವಧಿಯಲ್ಲಿ ಸಾವಿರಕ್ಕೂ ಹೆಚ್ಚು ಬೆನ್ನು ಮೂಳೆ ಶಸ್ತ್ರಚಿಕಿತ್ಸೆ ಮಾಡಿರುವುದಾಗಿ ಹೇಳಿದ ಆಕಾಶ್ ಇವರಲ್ಲಿ ಶೇ. 90 ಡಿಸ್ಕ್ ಬಲ್ಜ್ ಸಮಸ್ಯೆಯಿಂದ ಬಂದವರೇ ಹೆಚ್ಚು ಎನ್ನುತ್ತಾರೆ. ಡಿಸ್ಕ್ ಬಲ್ಜ್ ಎಂದರೆ ಬೆನ್ನುಮೂಳೆಯ ಮಣಿಕಟ್ಟುಗಳ ಮಧ್ಯ ಇರುವ ಮೃದುವಾದ ಕುಶನ್‌ನಂತೆ ವರ್ತಿಸುವ ಒಂದು ಪದರ ಒತ್ತಡದಿಂದಾಗಿ ಹೊರಬಂದು ಬೆನ್ನುಮೂಳೆಯ ಮಣಿಕಟ್ಟಿನ ಜರುಗುವಿಕೆಗೆ ಕಾರಣವಾಗಿ ಅಕ್ಕಪಕ್ಕದಲ್ಲಿಯ ನರಮಂಡಲಗಳಿಗೆ ಒತ್ತಡ ಹಾಕುವುದರಿಂದಾಗಿ ಉದ್ಭವಿಸುವ ಸಮಸ್ಯೆಯಾಗಿದೆ. ಈ ಸಮಸ್ಯೆ ಸಣ್ಣದಾಗಿದ್ದಲ್ಲಿ ವಿಶ್ರಾಂತಿ ಪಡೆಯುವುದರಿಂದಲೇ ಗುಣವಾಗುತ್ತದೆ. ಶೇಕಡ 90ರಷ್ಟು ಡಿಸ್ಕ್ ಬಲ್ಜಿನ ಸಮಸ್ಯೆ ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣವಾಗುತ್ತದೆ ಸಮಸ್ಯೆ ತೀವ್ರವಾಗಿದ್ದಲ್ಲಿ ಮಾತ್ರ ಶಸ್ತ್ರ ಚಿಕಿತ್ಸೆಯ ಅಗತ್ಯ ಬೀಳುತ್ತಿದೆ ಎನ್ನುತ್ತಾರೆ ಡಾಕ್ಟರ್ ಆಕಾಶ್
ಮೂಳೆಯ ಭವಿಷ್ಯ ಹೇಳುವ ಯಂತ್ರ
ನಿಮಗೆ ಮುಂದಿನ 10 ವರ್ಷಗಳಲ್ಲಿ ನಿಮ್ಮ ದೇಹದ ಮೂಳೆಗಳು ಯಾವ ರೀತಿಯ ಪರಿವರ್ತನೆ ಹೊಂದಬಹುದು ಅದರಿಂದ ಮೂಳೆಮುರಿತದಂತಹ ಸಂಭವಗಳು ಸಾಧ್ಯವೇ ಎಂಬುದನ್ನ ಈಗಲೇ ಪತ್ತೆ ಹಚ್ಚುವ ಹಾಗೂ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಫುಲ್ ಬಾಡಿ ಡೆಕ್ಸಾಸ್ಕ್ಯಾನ್ ಯಂತ್ರ ಅಳವಡಿಸಲಾಗಿದೆ. ಇದರ ಲಾಭವನ್ನು ವಿಶೇಷವಾಗಿ 65 ವರ್ಷ ಮೇಲ್ಪಟ್ಟವರು ಕಡಿಮೆ ಶುಲ್ಕ ದಲ್ಲಿಯೇ ಪಡೆದುಕೊಳ್ಳಬಹುದು. ಜನರಲ್ ಪ್ಯಾಕೇಜ್‌ನಲ್ಲಿ ಮೂಳೆಯ ಸಾಂದ್ರತೆ ಬ್ಲಡ್ ಕ್ಯಾಲ್ಸಿಯಂ, ಎಕ್ಸರೆ, ವಿಟಮಿನ್ ಎಲ್ಲದರ ಪರೀಕ್ಷೆ ಮಾಡಿ ವರದಿ ನೀಡಲಾಗುತ್ತದೆ.
