google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರೇಡಿಯೋ ಶಿವಮೊಗ್ಗ 90.8 ಎಫ್.ಎಂ ಮತ್ತು ಮೈತ್ರಿ ಮೈ ಜ್ಯುವೆಲ್ ಸಹಯೋಗದೊಂದಿಗೆ ‘ಗೊಂಬೆ ಕೂರಿಸಿ ಬಹುಮಾನ ಗೆಲ್ಲಿರಿ’ ವಿಶೇಷ ಸ್ಪರ್ಧೆಯನ್ನು ಶಿವಮೊಗ್ಗದ ಜನತೆಗಾಗಿ ಆಯೋಜಿಸುತ್ತಿದೆ.

ದಸರಾ ಹಬ್ಬದ ಸಡಗರವನ್ನು ಮನೆಯಲ್ಲಿ ಗೊಂಬೆ ಕೂರಿಸುವ ಮೂಲಕ ಆಚರಿಸುತ್ತಿದ್ದೀರಾ? ನಿಮ್ಮ ಮನೆಯಲ್ಲಿ ವಿಶೇಷವಾಗಿ ಕೂರಿಸಿರುವ ಗೊಂಬೆಗಳ ಬಗ್ಗೆ, ಅದನ್ನು ನೀವು ಆಚರಿಸಿಕೊಂಡು ಬಂದಿರುವ ಬಗ್ಗೆ ನಮಗೆ ಒಂದಿಷ್ಟು ಮಾಹಿತಿಯನ್ನು ತಿಳಿಸಿ ಬಹುಮಾನವನ್ನು ಗೆಲ್ಲಿರಿ.

ಹೌದು ದಸರಾ ಹಬ್ಬದ ಸಂಪ್ರದಾಯವಾಗಿ ಹಲವರು ಹಿಂದಿನಿಂದಲೂ, ಆಸಕ್ತಿ ಉಂಟಾಗಿ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಗೊಂಬೆ ಕೂರಿಸುವ ಪದ್ದತಿಯನ್ನು ಆಚರಿಸುತ್ತಿದ್ದಲ್ಲಿ, ಗೊಂಬೆಗಳನ್ನು ಚೆಂದವಾಗಿ ಕೂರಿಸಿದ್ದರೆ, ತಾವೇ ಸ್ವತಃ ತಯಾರಿಸಿದ ಗೊಂಬೆಗಳು, ಕೊಂಡು ತಂದ ಗೊಂಬೆಗಳು, ಗೊಂಬೆಗಳ ಮೂಲಕ ಕಥೆಯನ್ನು ಹೇಳುವಂತೆ ಸುಂದರವಾಗಿ, ಆಕರ್ಷಕವಾಗಿ ಗೊಂಬೆಯನ್ನು ಮನೆಯಲ್ಲಿ ಕೂರಿಸುತ್ತಿದ್ದರೆ ನೀವು ಆ ಮಾಹಿತಿಯನ್ನು ನಮಗೆ ತಲುಪಿಸಿ. ನಮ್ಮ ರೇಡಿಯೋ ಶಿವಮೊಗ್ಗ ತಂಡ ಗೊಂಬೆ ಕೂರಿಸಿರುವುದನ್ನು ವೀಕ್ಷಿಸಿ, ನಿಮ್ಮ ಜೊತೆಗೆ ಮಾತನಾಡಿ ಅದನ್ನು ಕೇಳುಗರಿಗೆ ತಲುಪಿಸುತ್ತದೆ. ಜೊತೆಗೆ ಅಚ್ಚುಕಟ್ಟಾಗಿ, ಆಕರ್ಷಕವಾಗಿ ಗೊಂಬೆ ಕೂರಿಸಿದವರಿಗೆ ಬಹುಮಾನವನ್ನು ವಿತರಿಸಲಾಗುವುದು.

ಸೆ. ೩೦ರ ಒಳಗಾಗಿ ನಿಮ್ಮ ಮಾಹಿತಿಯನ್ನು ನಮಗೆ ತಲುಪಿಸಬೇಕಿದೆ. ಹೆಚ್ಚಿನ ಮಾಹಿತಿಗೆ ಗುರುಪ್ರಸಾದ್ ಮೊ. 7259176279, ಶ್ರೀಕಾಂತ್ ಮೊ. 8867558649ರಲ್ಲಿ ಸಂಪರ್ಕಿಸುವಂತೆ ಎಫ್ ಎಂ ಶಿವಮೊಗ್ಗ ರೇಡಿಯೋ ನಿಲಯ ನಿರ್ದೇಶಕರಾದ ಜಿ.ಎಲ್. ಜನಾರ್ಧನ್ ಅವರು ಕೋರಿದ್ದಾರೆ.

Leave a Reply

Your email address will not be published. Required fields are marked *