
ಶಿವಮೊಗ್ಗ :- ಮಹಿಳೆಯ ರಲ್ಲಿ ಭಕ್ತಿಭಾವ ಹೆಚ್ಚಿಸುವ ಉದ್ದೇಶ ದಿಂದ ಈ ಭಜನಾ ಸ್ಪರ್ಧೆಯನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ಜಿಲ್ಲೆಯ ಹಲವಾರು ಭಾಗಗಳಿಂದ ಮಹಿಳೆಯರು ಬಂದಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪ್ರತಿಮಾ ಡಾಕಪ್ಪಗೌಡ ತಿಳಿಸಿದರು.

ನಗರದ ಮಥುರಾ ಪ್ಯಾರಡೇಸ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಜಿಲ್ಲಾ ಮಹಿಳಾ ಘಟಕದ ಆಶ್ರಯದಲ್ಲಿ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲೆಯ ಮಹಿಳೆರಿಗಾಗಿ ಭಕ್ತಿಭಾವ, ಭಜನೆ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇವಲ ಬಹುಮಾನ ಪಡೆಯುವುದು ಅಷ್ಟೇ ಅಲ್ಲ ಸ್ಪರ್ಧೆಯಲ್ಲಿ ಭಾಗ ವಹಿಸುವ ಮೂಲಕ ಭಾರತೀಯ ಸಂಸ್ಕತಿ, ಸಂಸ್ಕಾರ, ಉಳಿಸಿ-ಬೆಳೆಸಲು, ನಮ್ಮ ಆತ್ಮಶಕ್ತಿಯನ್ನು ಹೆಚ್ಚಿಸಲು, ಸಾಕಾರತ್ಮಕ ಮನೋಭಾವದಿಂದ ಸದಾ ಶಾಂತಿ ನೆಮ್ಮದಿಯಿಂದರಲು ಸಹಕಾರಿಯಾಗುತ್ತದೆ. ಎಂದು ತಿಳಿಸುತ್ತಾ ಅಖಿಲ ಕರ್ನಾಟಕ ಒಕ್ಕ ಲಿಗರ ಸಂಘದ ಮಹಿಳಾ ಘಟಕದ ವರ್ಷಪೂರ್ತಿ ಈ ರೀತಿಯ ಸಾಂಸ್ಕತಿಕ, ಶೈಕ್ಷಣಿಕ, ಆಧ್ಯಾತ್ಮಿಕ, ಆರೋಗ್ಯ, ಪರಿಸರ, ಜಗೃತಿ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ಸುಮಾರು ೧೫ತಂಡಗಳು ಭಾಗವಹಿಸಿದ್ದು, ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿಗೆ, ಪ್ರಥಮ ಬಹುಮಾನ, ರಾಗರಂಜಿನಿ ಮಹಿಳಾ ತಂಡಕ್ಕೆ ದ್ವೀತಿಯ, ಹೊಯ್ಸಳ ಹಾಗೂ ಭಜನಾ ಮಂಡಳಿ ತೃತೀಯ ಬಹುಮಾನ ಲಭಿಸಿದೆ.
ವೇದಿಕೆಯಲ್ಲಿ ರಮೇಶ್ ಹೆಗ್ಡೆ, ಡಾ. ಶಾಂತ ಸುರೇಂದ್, ಗೋ ರಮೇಶ್ ಗೌಡ, ಚೇತನ್‌ಗೌಡ, ತಾಯಿಮನೆ ಸುದರ್ಶನ್, ರಘು ರಾಜ್‌ಗೌಡ, ಸುಷ್ಮಾಸಂಜಯ್, ಚೇತನ್, ಮಥುರಾ ಪ್ಯಾರಡೈಸ್‌ನ ಗೋಪಿನಾಥ್, ಸಂಘದ ಪದಾಧಿಕಾರಿಗಳು ಮತ್ತು 250 ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.