google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನವರಾತ್ರಿ ಹಬ್ಬದ ಈ ಶುಭ ಸಂದರ್ಭದಲ್ಲಿ, ನಗರದ ಕುವೆಂಪು ರಂಗಮಂದಿರದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಇಂಡಿಯಾ ಸ್ವೀಟ್ ಹೌಸ್ ನಿಂದ ಶಿವಮೊಗ್ಗದ ಪೌರಕಾರ್ಮಿಕರನ್ನು ಉಡುಗರೆಗಳನ್ನು ನೀಡಿ ಗೌರವಿಸಲಾಯಿತು.

ಸುಮಾರು ೧ಸಾವಿರ ಪೌರಕಾರ್ಮಿಕರಿಗೆ ಸಿಹಿ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು. ಜೊತೆಗೆ, ತೀವ್ರ ಬಿಸಿಲಿನಿಂದ ರಕ್ಷಣೆಗಾಗಿ ಪ್ರತಿಯೊಬ್ಬರಿಗೂ ವಿಶೇಷವಾಗಿ ವಿನ್ಯಾಸಗೊಳಿಸಿದ ಕ್ಯಾಪ್‌ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಪಾಲಿಕೆ ಆಯುಕ್ತರಾದ ಮಾಯಣ ಗೌಡ ಅವರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವು ಪೌರಕಾರ್ಮಿಕರ ಶ್ರಮವನ್ನು ಸನ್ಮಾನಿಸಿತು.

ಶಿವಮೊಗ್ಗದಂತಹ ನಗರಗಳಲ್ಲಿ, ಪೌರಕಾರ್ಮಿಕರು ಸಮುದಾಯದ ಆರೋಗ್ಯ ಮತ್ತು ನಗರ ಸ್ವಚ್ಛತೆಯನ್ನು ಕಾಪಾಡುವ ಪ್ರಮುಖ ಸಹಭಾಗಿಗಳಾಗಿದ್ದಾರೆ. ಪೌರ ಕಾರ್ಮಿಕರ ತ್ಯಾಗವನ್ನು ಸಮಾಜವು ಸರಿಯಾಗಿ ಗುರುತಿಸಬೇಕಾಗಿದೆ. ಇಂಡಿಯಾ ಸ್ವೀಟ್ ಹೌಸ್‌ನ ಈ ಉಪಕ್ರಮವು ಕೃತಜ್ಞತೆ ಮತ್ತು ಗೌರವವನ್ನು ಹೆಚ್ಚಿಸುವ ವೇದಿಕೆಯಾಗಿ, ಕಾರ್ಮಿಕರನ್ನು ಗೌರವಿಸುವುದರ ಮೂಲಕ ಹಬ್ಬದ ಸಂಭ್ರಮವನ್ನು ನಿರ್ಮಾಣ ಮಾಡಿದರು.

ಈ ಸಂದರ್ಭದಲ್ಲಿ ಆಯುಕ್ತರಾದ ಮಾಯಣ್ಣ ಗೌಡ ಅವರು ಮಾತನಾಡಿ, ಪೌರಕಾರ್ಮಿಕರು ನಿರಂತರ ಶ್ರಮಿಸಿ, ಕಾಣದಂತೆಯೇ ನಮ್ಮ ನಗರವನ್ನು ಸ್ವಚ್ಛ ಮತ್ತು ವಾಸಯೋಗ್ಯವಾಗಿರಿಸುತ್ತಾರೆ. ನವರಾತ್ರಿಯಂತಹ ಹಬ್ಬಗಳಲ್ಲಿ, ಅವರ ಸೇವೆಯನ್ನು ಬೆಳಕಿಗೆ ತಂದು, ಹೆಮ್ಮೆ ಮತ್ತು ಗೌರವದಿಂದ ಅವರ ಕೆಲಸವನ್ನು ಆಚರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಸಂಸ್ಥೆಯ ಸಂಸ್ಥಾಪಕರಾದ ಶ್ವೇತಾ ಮತ್ತು ವಿಶ್ವನಾಥ್ ನಮ್ಮ ಉಪಕ್ರಮವು ಒಳಗೊಳ್ಳುವಿಕೆಗೆ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪ್ರತೀ ನವರಾತ್ರಿಯಲ್ಲೂ ನಮ್ಮ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವವರನ್ನು ನೆನಪಿಸುವುದಾಗಿದೆ. ವ್ಯವಹಾರ, ಸಮುದಾಯ ಮತ್ತು ನಾಗರಿಕ ಸಂಸ್ಥೆಗಳನ್ನು ಸೇತುವೆ ಮಾಡುವ ಮೂಲಕ, ನಾವು ಕೇವಲ ಸಿಹಿಯನ್ನು ಮಾತ್ರವಲ್ಲ, ಮಲ್ಯಗಳನ್ನೂ ಹಂಚಿಕೊಳ್ಳುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂಧಿಯವರು ಹಾಜರಿದ್ದರು.

Leave a Reply

Your email address will not be published. Required fields are marked *