google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಉದಯೋನ್ಮುಖ ಕೈಗಾರಿಕಾ ಸಂಸ್ಥೆಗಳ ಭೇಟಿ ಮತ್ತು ಉದ್ಯಮಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮಕ್ಕೆ ಮುನ್ನುಡಿ ಇಟ್ಟಿದ್ದು, ಮೊದಲ ಭಾಗವಾಗಿ ನಗರದಲ್ಲಿ ಸ್ಥಾಪಿಸಿರುವ ಸ್ಥಳೀಯ ಆಹಾರ ಸಂಸ್ಕರಣ ಘಟಕವಾದ ಎಸ್‌ಎಪಿ ಬಯೋ ಪ್ರಾಡಕ್ಟ್ಸ್ ಸಂಸ್ಥೆಗೆ ಭೇಟಿ ನೀಡಿ ಉದ್ಯಮಿ ಕವಿತಾ ಅವರೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆಯ ವಾಸ್ತವ ಅನುಭವಗಳನ್ನು ಪಡೆಯುವುದು ಈ ಸಂವಾದದ ಪ್ರಮುಖ ಉದ್ದೇಶವಾಗಿದ್ದು, ಉದ್ಯಮಶೀಲತೆಯ ಉತ್ಸಾಹ, ಸವಾಲುಗಳು ಮತ್ತು ಸಬಲೀಕರಣದ ಸಾರವನ್ನು ಸೆರೆಹಿಡಿಯುವ ಪ್ರಯತ್ನ ವಿದ್ಯಾರ್ಥಿಗಳಿಂದ ನಡೆಯಿತು. ಎಂಬಿಎ ವಿದ್ಯಾರ್ಥಿಗಳಾದ ಚಂದನ, ದರ್ಶನ್, ಕಿರಣ್, ರಾಹುಲ್ ಮತ್ತು ಈಕ್ಷಾ ಸಂದರ್ಶನ ಮುನ್ನಡೆಸಿದರು.

ಉದ್ಯಮಿ ಕವಿತಾ ಮಾತನಾಡಿ, ಅಡುಗೆ ಮನೆಯಲ್ಲಿ ಕೂಡಿಟ್ಟ ಉಳಿತಾಯದಲ್ಲಿ ಈ ಉದ್ಯಮ ಪ್ರಾರಂಭಿಸಲಾಗಿದ್ದು, ಚಟ್ನಿಪುಡಿ, ರಸಂ ಪುಡಿಯಂತಹ ಸಾಂಪ್ರದಾಯಿಕ ಪಾಕ ವಿಧಾನಗಳನ್ನು ಪುನರುಜ್ಜೀವನಗೊಳಿಸುವ ಮತ್ತು ಅವುಗಳನ್ನು ಸುಲಭವಾಗಿ ಕೈಗೆಟುಕು ವಂತೆ ಮಾಡುವ ಬಯಕೆಯು ಹೊಸ ಉದ್ಯಮ ಪ್ರಾರಂಭಿಸಲು ಪ್ರೇರಣೆ ನೀಡಿತು. ಪ್ರಧಾನ ಮಂತ್ರಿಗಳ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಯೋಜನೆಯು ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಗ್ರಾಮೀಣ ಮಹಿಳೆ ಯರನ್ನು ಔಪಚಾರಿಕ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಸಹಾಯ ಮಾಡಿತು ಎಂದರು.

ಉದ್ಯಮವು ಚಪಾತಿ, ಹೋಳಿಗೆ, ಚಟ್ನಿ ಪುಡಿ ಮತ್ತು ಕೋಲ್ಡ್-ಪ್ರೆಸ್ಡ್ ಎಣ್ಣೆಗಳಂತಹ ಸಾಂಪ್ರದಾಯಿಕ ಉತ್ಪನ್ನಗಳನ್ನು ಸಂಸ್ಕರಿಸುತ್ತದೆ. ಇವೆಲ್ಲವೂ ರಾಸಾಯನಿಕ ಮುಕ್ತ ಪದಾರ್ಥಗಳಾಗಿದ್ದು, ನೈರ್ಮಲ್ಯ ಪ್ರಕ್ರಿಯೆ ಬಳಸಿ ತಯಾರಿಸಲಾಗು ತ್ತದೆ. ಈ ಉತ್ಪನ್ನಗಳು ಪ್ರಾಥಮಿಕ ವಾಗಿ ಈ ಪ್ರದೇಶದ ಪಿಜಿ ವಸತಿ ಸೌಕರ್ಯಗಳು, ಸಣ್ಣ ಹೋಟೆಲ್ ಗಳು ಮತ್ತು ವಸತಿಗೃಹಗಳಿಗೆ ಪೂರೈಸುತ್ತೇವೆ ಎಂದರು.

ಬಳಕೆದಾರರಿಂದ ಸಿಗುವ ಪ್ರಶಂಸನೀಯ ಮಾತುಗಳು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಚಾರ ಪಡೆಯುವ ಮೂಲ ಶಕ್ತಿಯಾಗಿದ್ದು, ಬಲವಾದ ಗ್ರಾಹಕ ಸಂಬಂಧಗಳು ತಮ್ಮ ವ್ಯವಹಾರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆರ್ಡರ್ ನಿರ್ವಹಣೆಗಾಗಿ ವಾಟ್ಸಾಪ್ ವ್ಯವಹಾರದಂತಹ ಸರಳ ತಂತ್ರeನ ಗಳನ್ನು ಅಳವಡಿಸಿಕೊಳ್ಳಲಾಗಿದೆ. ನಿಮಗೆ ತಿಳಿದಿರುವ ಜನದೊಂದಿಗೆ ಉದ್ಯಮ ಪ್ರಾರಂಭಿಸಿ, ಪರಿಪೂರ್ಣ ಸಮಯಕ್ಕಾಗಿ ಕಾಯಬೇಡಿ. ನಿರಂತರವಾಗಿ ಕಲಿಯಿರಿ, ಡಿಜಿಟಲ್ ಪರಿಕರಗಳನ್ನು ಹೆಚ್ಚು ಅಳವಡಿಸಿಕೊಳ್ಳಿ ಮತ್ತು ಮುಖ್ಯವಾಗಿ ನಿಮ್ಮನ್ನು ನೀವು ನಂಬಿ ಎಂದು ಸಲಹೆ ನೀಡಿದರು.

ಎಂಬಿಎ ವಿಭಾಗದ ನಿರ್ದೇಶಕ ಡಾ.ಸಿ. ಶ್ರೀಕಾಂತ್, ಸಹಾಯಕ ಪ್ರಾಧ್ಯಾಪಕರಾದ ಡಾ. ಶಾಂತಿ ಕಿರಣ್, ಡಾ. ಸುಭದ್ರಾ ಪಿ.ಎಸ್. ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *