google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಡಾ. ಬಿ.ಎಸ್. ಗಿರಿಜ ಪ್ರಸನ್ನಕುಮಾರ್ ಹೇಳಿದರು.

ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಕದಳಿ ವನಿತ ಸಮಾಜದ ೩೨ನೇ ವಾರ್ಷಿಕೋತ್ಸವ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಉದ್ಘಾಟಿಸಿ ಮಾತನಾಡಿ, ಕಾಯಿಲೆ ಯನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲು ಸಾಧ್ಯವಿದೆ ಎಂದರು.

ಕದಳಿ ವನಿತಾ ಸಮಾಜದ ನೂತನ ಅಧ್ಯಕ್ಷೆ ಸುಜಾತ ಬಸವರಾಜ್ ಮಾತನಾಡಿ, ಮಹಿಳೆಯರಿಗೆ ಇತ್ತೀಚೆಗೆ ಸಾಮಾನ್ಯವಾಗಿ ಕಂಡು ಬರುತ್ತಿರುವ ಸ್ತನ ಕ್ಯಾನ್ಸರ್ ಹಾಗೂ ಗರ್ಭ ಕೊರಳ ಕ್ಯಾನ್ಸರ್ ಇವುಗಳನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಬಹುದಾಗಿದೆ. ಕಾಯಿಲೆ ಗುಣಪಡಿಸುವ ಬಗ್ಗೆ ಸೂಕ್ತ ವೈದ್ಯರಲ್ಲಿ ಮಾರ್ಗದರ್ಶನ ಪಡೆಯಬೇಕು ಎಂದು ತಿಳಿಸಿದರು.

ಅಧ್ಯಕ್ಷೆಯಾಗಿ ಸುಜತ ಬಸವರಾಜ್, ಉಪಾಧ್ಯಕ್ಷೆ ಉಮಾ, ಕಾರ್ಯದರ್ಶಿ ಸವಿತಾ, ಸಹ ಕಾರ್ಯದರ್ಶಿ ಸುರೇಖಾ, ಖಜಂಚಿ ನಿರ್ಮಲ, ನಿರ್ದೇಶಕರಾಗಿ ಲತಾ ಶಂಕರ್, ಮಂಜುಳಾ, ವನಜಕ್ಷಿ ಹಾಗೂ ಜಯಮ್ಮ ಪದಗ್ರಹಣ ನಡೆಯಿತು.

ಕದಳಿ ವನಿತಾ ಸಮಾಜದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ಪ್ರದರ್ಶಿಸಲಾಯಿತು. ಅರುಣಾ ಚಂದ್ರ ಶೇಖರ್, ಸವಿತಾ, ರೂಪ, ಶೈಲ, ಭಾರತಿ, ವಾಸಂತಿ, ಶೋಭಾ, ಗಿರಿಜ ಹಾಗೂ ಜ್ಯೋತಿ ಉಪಸ್ಥಿತರಿದ್ದರು.

ಕದಳಿ ವನಿತಾ ಸಮಾಜದಿಂದ ಬಸವೇಶ್ವರ ಪ್ರೌಢಶಾಲೆ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಹಾಗೂ ಕದಳಿ ಸಮಾಜದ ಸದಸ್ಯನಿಯರ ಮಕ್ಕಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿ ತೇರ್ಗಡೆ ಆಗಿರುವ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

Leave a Reply

Your email address will not be published. Required fields are marked *