
ಶಿವಮೊಗ್ಗ :- ಆಧುನಿಕತೆಯ ಅಹಂಕಾರಕ್ಕೆ ಸಿಕ್ಕಿಕೊಳ್ಳದೆ, ನಾವು ಕಲಿತ ವಿದ್ಯೆ ಸಮಾಜಮುಖಿ ಕಾರ್ಯಕ್ಕೆ ವಿನಿಯೋಗವಾಗಲಿ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.
ನಗರದ ಕುವೆಂಪು ರಂಗಮಂದಿರ ದಲ್ಲಿ ಕಸ್ತೂರಬಾ ಬಾಲಿಕಾ ಪ್ರೌಢ ಶಾಲೆಯ ವತಿಯಿಂದ ಏರ್ಪಡಿಸಿದ್ದ 2025-26 ನೇ ಸಾಲಿನ ವಿದ್ಯಾರ್ಥಿನಿ ಸಂಘ ಉದ್ಘಾಟಿಸಿ ಮಾತನಾಡಿದರು.
ನಾವು ಭಗವಂತನನ್ನು ಪ್ರಾರ್ಥಿಸು ವಾಗ ಸುಖ ಸಂಪತ್ತುಗಳನ್ನು ಬೇಡು ತ್ತೇವೆ ವಿನಃ, ಒಳ್ಳೆಯ ಮನುಷ್ಯನನ್ನಾಗಿ ಮಾಡು ಎಂದು ಕೇಳುತ್ತಿಲ್ಲ. ಯಾವಾಗ ನಾವು ಕೇಳುವುದಿಲ್ಲ ಆಗ ನಮ್ಮ ತನವನ್ನು ನಾವು ಕಳೆದು ಕೊಂಡಿದ್ದೇವೆ ಎಂದರ್ಥ. ನಿಮ್ಮ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ. ಎಲ್ಲರೂ ಉನ್ನತ ಅಂಕ ಪಡೆಯಿರಿ ಎನ್ನುವುದಕ್ಕಿಂತ, ಜೀವನವನ್ನು ಪ್ರೀತಿಯಿಂದ ಬದುಕಿ ಎಂದಾಗಬೇಕು.
ಇಂದು ಮೊಬೈಲ್ ಗೀಳಿಗೆ ಬಿದ್ದು ಯುವ ಸಮೂಹ ಮೂಲೆ ಸೇರು ತ್ತಿದ್ದಾರೆ. ಆಧುನಿಕತೆಯ ಮೂಲಕ ಕುಳಿತಲ್ಲಿಯೆ ಎಲ್ಲವೂ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ನಿಜವಾದ ಬದುಕುವ ಕಲೆ ಕಲಿಯಬೇಕಿದೆ. ಸೂಕ್ಷ್ಮವಾಗಿ ಬದುಕುವ ಕ್ರಮಗಳಿಂದ ಹೊರ ಬನ್ನಿ. ಅಂಧಕಾರ, ಮಡ್ಯತೆ, ವೈರುದ್ಯಗಳನ್ನು ಹೋಗಲಾಡಿಸಿ.
ಅಧ್ಯಯನ ನಮ್ಮನ್ನು ಪುಣ್ಯವಂತ ನಾಗಿ ಮಾಡುತ್ತದೆ. ನಮ್ಮಲ್ಲಿ ಒಡ ಮೂಡುವ ಸಾಮಾಜಿಕ ಜವಾಬ್ದಾರಿ ಗಳು ನಮ್ಮನ್ನು ಪುಣ್ಯವಂತರನ್ನಾಗಿ ಪರಿವರ್ತಿಸುತ್ತದೆ. ಆಡಂಬರಕ್ಕೆ ಬಲಿಯಾಗಬೇಡಿ. ಬಹಳಷ್ಟು ವಿದ್ಯಾರ್ಥಿಗಳು ಪ್ರೌಢಶಾಲೆಯ ನಂತರ ಸೃಜನಶೀಲತೆಯ ಚಿಂತನೆಗಳನ್ನು ಬಿಟ್ಟುಬಿಡುತ್ತಾರೆ. ಅಂತಹ ಸೀಮಿತತೆಗೆ ಒಳಗಾಗಬೇಡಿ. ನಿಮ್ಮ ಪರಿಸರದಲ್ಲಿ ಒಳ್ಳೆಯದನ್ನು ಬಿತ್ತುವ ಕಾರ್ಯವಾಗಲಿ. ಅಸಹಾ ಯಕರಿಗೆ ಸಹಾಯ ಮಾಡುವಲ್ಲಿ ನಿರತರಾಗಿ. ನಮ್ಮ ಬದುಕಿನ ವಾಸ್ತವತೆಯನ್ನು ಒಪ್ಪಿಕೊಳ್ಳಿ. ಸಿರಿತನ ಬಡತನ ಎಲ್ಲವನ್ನೂ ಸ್ವೀಕರಿಸಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಆಜೀವ ಸದಸ್ಯರಾದ ಡಾ.ಅರವಿಂದ.ಎಸ್.ಟಿ, ನಿವೃತ್ತ ಸಂಸ್ಕೃತ ಉಪನ್ಯಾಸಕ ಜಿ.ಎಸ್. ನಟೇಶ್, ಕಸ್ತೂರಬಾ ಪಿಯು ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮಾತನಾಡಿದರು.
ಶಾಲೆಯ ಉಪ ಪ್ರಾಂಶುಪಾಲ ಸಿ. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ದ್ದರು. ಶಾಲೆಯ ಪ್ರಧಾನಿ ಶ್ರೇಯಾ, ವಿರೋಧ ಪಕ್ಷದ ನಾಯಕಿ ಯಶಸ್ವಿನಿ ಉಪಸ್ಥಿತರಿದ್ದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
