
ಶಿವಮೊಗ್ಗ :- ತೀರ್ಥಹಳ್ಳಿಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆ ಆರಂಭ ಗೊಂಡಿದೆ ಎಂದು ಆಸ್ಪತ್ರೆಯ ಮುಖ್ಯಸ್ಥ ಡಾ| ಡಿ. ಸುರೇಶ್‌ರಾವ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮಂಗಳೂರು ಎಂಐಓ ಮತ್ತು ಉಡುಪಿ ಡೇ ಕೇರ್ ಕ್ಯಾನ್ಸರ್ ಸೆಂಟರ್‌ನ ಪರಂಪರೆ ಮುಂದುವ ರಿಸುವ ವಿಶ್ವಾಸಾರ್ಹ ಕ್ಯಾನ್ಸರ್ ಆಸ್ಪತ್ರೆಯನ್ನು ತೀರ್ಥಹಳ್ಳಿಯಲ್ಲಿ ನೂತನವಾಗಿ ಆರಂಭಿಸಿದ್ದು, ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ನೆರಟೂರು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ಥಾಪಿತವಾದ ರಾಜ್ಯದ ಮೊದಲ ಆಸ್ಪತ್ರೆಯಾಗಿದೆ ಎಂದರು.
ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಉನ್ನತ ಮಟ್ಟದ ಉಚಿತ ಕ್ಯಾನ್ಸರ್ ಚಿಕಿತ್ಸೆ ನೀಡುವುದು, ಈ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ, ಕಿಮೋಥೆರಪಿ, ಆಸ್ಪತ್ರೆ ವಾಸ್ತವ್ಯ ಮತ್ತು ದೈನಂದಿನ ಆಹಾರ ಸೇವೆ ಒಳಗೊಂಡಿದೆ. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಪರಿಣಿತ ವೈದ್ಯರ ತಂಡ ಪ್ರತಿರೋಗಿಯನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿಶ್ವಮಟ್ಟದ ಚಿಕಿತ್ಸೆ ನೀಡಲು ಬದ್ಧವಾಗಿದೆ ಎಂದರು.
ಕ್ಯಾನ್ಸರ್ ಸರ್ಜರಿ ಕಿಮೋಥೆರಪಿ, ಜನರಲ್ ಸರ್ಜರಿ, ರೇಡಿಯೇಷನ್, ಇಎನ್‌ಟಿ, ಸಿಟಿ ಸ್ಕ್ಯಾನ್, ಅಲ್ಟ್ರಾ ಸೌಂಡ್ ಸ್ಕ್ಯಾನ್ ಎಕ್ಸ್‌ರೇ ಸೌಲಭ್ಯ ಗಳು ಈ ಆಸ್ಪತ್ರೆಯಲ್ಲಿ ದೊರೆಯ ಲಿದೆ. ಆರೋಗ್ಯ ಕರ್ನಾಟಕ ಆಯು ಷ್ಮಾನ್ ಭಾರತ್ ಸ್ಕೀಂ, ಸಂಪೂರ್ಣ ಸುರಕ್ಷಾ ಹಾಗೂ ಖಾಸಗೀ ಇನ್ಸೂರೆನ್ಸ್ ಯೋಜನೆಗಳು ಸಹ ಲಭ್ಯವಿದೆ ಎಂದರು.
ಮಲಮೂತ್ರ ವಿಸರ್ಜನೆಯ ವ್ಯತ್ಯಾಸ, ಬಾಯಿಯಲ್ಲಿ ಹಾಗೂ ದೇಹದ ಇತರೆ ಭಾಗದಲ್ಲಿ ಗುಣ ಮುಖವಾಗದ ಹುಣ್ಣು, ಮುಟ್ಟಿನಲ್ಲಿ ವ್ಯತ್ಯಾಸ, ಸ್ತನ, ವೃಷಣ ಅಥವಾ ಇತರೆ ಭಾಗದಲ್ಲಿ ಬಾಹು ಗೆಡ್ಡೆ, ಗಂಟಲಲ್ಲಿ ಸಿಕ್ಕಿಕೊಂಡಂತಾಗುವುದು ಹಾಗೂ ನಿರಂತರ ಕೆಮ್ಮು, ಗಂಟಲು ಕಟ್ಟುವಿಕೆ ಅಥವಾ ಧ್ವನಿಯಲ್ಲಿ ಬದ ಲಾವಣೆ ಇವು ಕ್ಯಾನ್ಸರ್ ಖಾಯಿ ಲೆಯ ಲಕ್ಷಣವಾಗಿವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವೈದ್ಯ ರಾದ ಡಾ| ದಿವ್ಯಾಜ್ಯೋತಿ ಎನ್., ಡಾ| ಸುಹಾಸ್ ನಾವಡ, ಕ್ಯಾನ್ಸರ್ ಜಾಗೃತಿ ಅಭಿಯಾನದ ಮುಖ್ಯ ಸಂಯೋಜಕ ಅ.ನಾ. ವಿಜಯೇಂದ್ರ ಉಪಸ್ಥಿತರಿದ್ದರು.