
ಸೊರಬ :- ಪುರಸಭೆ ವ್ಯಾಪ್ತಿಯ ಹಳೇ ಸೊರಬದ ಗೌರಿಕೆರೆ ಮಠ ಸಮೀಪದ ರಸ್ತೆ ದಾಟುತ್ತಿದ್ದ ಜಿಂಕೆಯೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವುದು ಕಂಡುಬಂದಿದೆ.
ಪಟ್ಟಣದ ಹೊರವಲಯದ ಸೊರಬ ಆನವಟ್ಟಿ ಮುಖ್ಯರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ,ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆ ಗಾಯಗೊಂಡು ನರಳಾಡಿ ಮೃತಪಟ್ಟಿದೆ ಎನ್ನಲಾಗಿದೆ.
ಬೆಳಗ್ಗೆ ಜಮೀನಿಗೆ ತೆರಳುವ ರೈತರು ರಸ್ತೆ ಪಕ್ಕದಲ್ಲಿ ಜಿಂಕೆ ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.ಟಿ