google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ವಸತಿ ಯೋಜನೆ ಯಡಿಯಲ್ಲಿ ನಿರ್ಮಾಣವಾಗುವ ಮನೆಗಳಲ್ಲಿ ಮುಸ್ಲಿಂರಿಗೆ ಶೇ. 15ರಷ್ಟು ಮೀಸಲಾತಿ ನೀಡಲು ಸಚಿವ ಸಂಪುಟ ತೀರ್ಮಾನಿಸಿರು ವುದನ್ನು ವಿರೋಧಿಸಿ, ರಾಷ್ಟ್ರಭಕ್ತ ಬಳಗ ಜೂನ್ 25ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದು ರಾಷ್ಟ್ರಭಕ್ತ ಬಳಗದ ಮುಖಂಡ ಕೆ.ಈ. ಕಾಂತೇಶ್ ಪತ್ರಿಕಾ ಗೋಷ್ಟಿಯಲ್ಲಿ ಇಂದು ಆರೋಪಿಸಿದರು.

ದೇಶದಲ್ಲಿ ಹಿಂದೂ ಯುವತಿ ಯರನ್ನು ಗುರಿಯಾಗಿಸಿಕೊಂಡು ಮತಾಂಧ ಮುಸ್ಲಿಂ ಯುವಕರು ಲವ್ ಜಿಹಾದ್ ಮೂಲಕ ಹಿಂದೂಗಳ ಸಂಖ್ಯೆಇಳಿಕೆ ಮಾಡಿ ದೇಶವನ್ನು ಇಸ್ಲಾಮಿಕರಣ ಮಾಡಲು ಹೊರಟಿ ರುವಾಗ ರಾಜ್ಯ ಸರ್ಕಾರ ಮುಸ್ಲಿಂರನ್ನು ಓಲೈಸಿ ಕೊಂಡು ತುಷ್ಟೀಕರಣದ ರಾಜಕೀಯ ಮಾಡಿ, ಮತ ಬ್ಯಾಂಕ್ ಗಟ್ಟಿಗೊಳಿ ಸಲು ಈಗ ವಸತಿ ಜಿಹಾದ್ ಮಾಡಲು ಹೊರಟಿದೆ ಎಂದು ಆರೋಪಿಸಿದರು.

ಈ ಹಿಂದೆ ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಿ, ಇನ್ನುಳಿದ ಧರ್ಮೀಯರಿಗೆ ಅನ್ಯಾ ಯಮಾಡಿದ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ವಸತಿ ಯೋಜ ನೆಯಡಿ ಮುಸ್ಲಿಂರಿಗೆ ಶೇ.೧೫ರಷ್ಟು ಮೀಸಲಾತಿ ನೀಡಲು ತೀರ್ಮಾನಿ ಸಿದೆ. ಬುದ್ಧ, ಬಸವ, ಅಂಬೇಡ್ಕರ್ ಎಂದು ಬೊಗಳೆಬಿಡುವ ಸಿದ್ದರಾಮಯ್ಯ ಅವರು ಇದೀಗ ಅಂಬೇಡ್ಕರ್ ರವರು ವಿರೋಧಿಸಿದ್ದ ಧರ್ಮಾ ಧಾರಿತ ಮೀಸಲಾತಿಯನ್ನು ಅವರ ತತ್ವಕ್ಕೆ ತಿಲಾಂಜಲಿ ಇಟ್ಟು ಅಲ್ಪ ಸಂಖ್ಯಾತರಿಗೆ ಮೀಸಲಾತಿ ಜಾರಿಗೆ ತರುವ ಮೂಲಕ ಅಂಬೇಡ್ಕರ್ ರವರಿಗೆ ಅವಮಾನಿಸಿದ್ದಾರೆ ಎಂದು ದೂರಿದರು.

ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ರಾಯಭಾರಿಯನ್ನಾಗಿಸಿದ ಸರ್ಕಾರ ಈಗ ಅಣ್ಣನ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿ ಗೂ ಸಮಬಾಳು ಎಂಬ ಮಾತನ್ನು ಈಗ ಸರ್ವರೂ ಒಂದು ಕೋಮಿನ ಪಾಲು ಎಂದು ನಿರೂಪಿಸಲು ಹೊರ ಟಿದೆ ಎಂದು ಆರೋಪಿಸಿದರು.

ರಾಜ್ಯದ ಬಜೆಟ್‌ನಲ್ಲಿ ಅಲ್ಪಸಂ ಖ್ಯಾತರ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂ. ಮೀಸಲಿಡ ಲಾಗಿದೆ. ಆದರೂ ಈಗ ಬಡವರಿ ಗಾಗಿ ಮೀಸಲಿರುವ ಮನೆಗಳನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡಲು ಹೊರಟಿರುವುದು ಖಂಡನೀಯ. ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ರಾಷ್ಟ್ರಭಕ್ತ ಬಳಗದ ಕೆ.ಎಸ್. ಈಶ್ವರಪ್ಪರ ನೇತೃತ್ವದಲ್ಲಿ ಜೂನ್ 25ರ ಬೆಳಿಗ್ಗೆ 10ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಶಿವಪ್ಪನಾ ಯಕ ವೃತ್ತದವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್,ಪ್ರಮುಖರಾದ ಇ. ವಿಶ್ವಾಸ್, ಶಿವಾಜಿ, ಜಾದವ್, ಚನ್ನಬಸಪ್ಪ, ಕುಬೇರಪ್ಪ, ಗೋವಿಂದಪ್ಪ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *