google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ವಿಶ್ವವಿಖ್ಯಾತ ಜೋಗ ಜಲಪಾತದಲ್ಲಿ ಜಿಪ್‌ಲೈನ್ ಕಾಮಗಾರಿ ಶೀಘ್ರದಲ್ಲಿಯೇ ಶುರುವಾಗಲಿದೆ. ಈ ಹಿಂದಿನ ಯೋಜನೆಗೆ ಈಗ ಮರುಜೀವ ಸಿಕ್ಕಿದ್ದು ಮೂರು ತಿಂಗಳಿನಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.

ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗ ನಿರ್ವಹಣಾ ಪ್ರಾಧಿಕಾರ ಜಿಪ್‌ಲೈನ್ ಯೋಜನೆಗೆ ಮತ್ತೆ ಜೀವ ತುಂಬಿದೆ. ಮೊದಲ ಬಾರಿಗೆ ೨೦೨೦ ರಲ್ಲಿ ಪ್ರಸ್ತಾಪಿಸಲಾಗಿದ್ದ ಜಿಪ್‌ಲೈನ್ ಯೋಜನೆಯು ಕೋವಿಡ್ ಸಾಂಕ್ರಾಮಿಕ ಮತ್ತು ಜೋಗ ಜಲಪಾತದ ಸಮಗ್ರ ನಿರ್ವಹಣಾ ಯೋಜನೆಯಡಿಯಲ್ಲಿ ಕೈಗೊಂಡ ೧೩೦ ಕೋಟಿ ವೆಚ್ಚದ ಸುಧಾರಣಾ ಕಾರ್ಯಗಳಿಂದಾಗಿ ಸ್ಥಗಿತಗೊಂಡಿತ್ತು.

ಈಗ ಈ ಸಂಬಂಧ ಪ್ರಾಧಿಕಾರ ಟೆಂಡರ್ ಆಹ್ವಾನಿಸಿದೆ.ಜಿಪ್‌ಲೈನ್ ಸುಮಾರು ೪೬೦ ಮೀಟರ್ ಉದ್ದವಿರಲಿದ್ದು, ಯಾತ್ರಿ ನಿವಾಸದ ಪ್ರವೇಶ ದ್ವಾರದ ಬಳಿ ಪ್ರಾರಂಭವಾಗಿ ವೀಕ್ಷಣಾ ಡೆಕ್ ೨ ರಲ್ಲಿ ಕೊನೆಗೊಳ್ಳಲಿದೆ. ಸದ್ಯ ಇಲ್ಲಿ ನಡೆಯುತ್ತಿರುವ ಕಾಮಗಾರಿ ಮುಗಿದ ಬೆನ್ನಲ್ಲೆ ಜಿಪ್‌ಲೈನ್ ಕಾಮಗಾರಿ ಆರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಜಿಪ್ ಲೈನ್ ನಿರ್ವಹಣಾ ಸಂಸ್ಥೆಗಳ ಪೈಕಿ ೪೫ ಲಕ್ಷಕ್ಕಿಂತ ಹೆಚ್ಚು ಬಿಡ್ ಮಾಡುವವರಿಗೆ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದ್ದು, ಮೂರು ವರ್ಷಗಳ ಕಾಲ ಜಿಪ್‌ಲೈನ್ ಅನ್ನು ನಿರ್ವಹಿಸುವ ಮತ್ತು ನಿರ್ವಹಣೆ ಮಾಡುವ ಅವಕಾಶ ನೀಡಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *