google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಸಮಸ್ತ ಲೋಕದ ಹಿತ ಬಯಸುವ ಭಾರತ ಲೋಕಕ್ಷೇಮ ಉಂಟಾಗಲಿ ಎಂಬ ದೀರ್ಘ ಮತ್ತು ದೂರದೃಷ್ಟಿಯನ್ನು ಹೊಂದಿ ಜಗತ್ತಿಗೇ ಯೋಗವನ್ನು ನೀಡಿದೆ ಎಂದು ಕೂಡಲಿ ಶೃಂಗೇರಿ ಮಹಾ ಸಂಸ್ಥಾನ ಶಾರದಾ ಪೀಠದ ಶ್ರೀ ಅಭಿನವ ಶಂಕರ ಭಾರತೀ ಮಹಾ ಸ್ವಾಮಿಗಳು ಹೇಳಿದ್ದಾರೆ.

ಅವರು ಇಂದು ನಗರದ ಆದಿ ಚುಂಚನಗಿರಿ ಶಾಲಾ ಆವರಣದಲ್ಲಿ ಯೋಗ ಶಿಕ್ಷಣ ಸಮಿತಿ ಶಿವಮೊಗ್ಗ ವತಿಯಿಂದ ಹಮ್ಮಿಕೊಂಡಿದ್ದ ೧೧ನೇ ಅಂತರರಾಷ್ಟ್ರೀಯ ಯೋಗ ದಿನಾ ಚರಣೆ ಕಾರ್‍ಯಕ್ರಮದ ಸಾನಿಧ್ಯ ವಹಿಸಿ ಉಪನ್ಯಾಸ ನೀಡಿದರು.

ಜಗತ್ತಿಗೆ ಯೋಗದಿಂದ ಉಂಟಾಗುವ ವೈಜ್ಞಾನಿಕತೆಯ ಅರಿವು ಬಂದಿದೆ. ವಸುದೈವ ಕುಟುಂಬಕಂ ಎಂಬ ಭಾರತದ ಆದರ್ಶವನ್ನು ವಿಶ್ವವೇ ಬೆರಗುಗಣ್ಣುಗಳಿಂದ ನೋಡುತ್ತಿದೆ. ಹಿಂದೂ ಧರ್ಮ ವಿರೋಧಿಸುವ ಪರಂಪರೆಯ ದೇಶಗಳು ಕೂಡ ಯೋಗದಿನದಂದು ಭಾಗವಹಿಸಿ ಓಂ ಎಂದು ಹೇಳು ತ್ತಾರೆ. ಅಲ್ಲಿನ ಮಾತೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಓಂಕಾರದಿಂದ ಯೋಗ ಪ್ರಾರಂಭಿಸು ತ್ತಿರುವುದು ವಿಶೇಷವಾಗಿದೆ ಎಂದರು.

ಸರ್ಕಾರಗಳು ಎಲ್ಲವನ್ನು ಮಾಡಲು ಆಗುವುದಿಲ್ಲ. ಸಮಾಜದ ಸಹಭಾಗಿತ್ವ ಹೆಚ್ಚಾಗಬೇಕು ಎನ್ನು ವುದು ಭಾರತೀಯರ ವಿಚಾರಧಾರೆ. ನಾವು ಬಯಸುತ್ತಿರುವ ಬದಲಾವಣೆ ಈ ಸಂಕ್ರಮಣ ಘಟ್ಟದಲ್ಲಿ ಆಗುತ್ತಾ ಇದೆ. ಇನ್ನಷ್ಟು ಪಕ್ವವಾಗಿ ವಿಶಾಲ ವಾಗಿ ಯೋಗದ ಮಹತ್ವ ಹರಡಿ ದಾಗ ಭಾರತ ವಿಶ್ವ ಗುರುವಾಗುವು ದರಲ್ಲಿ ಯಾವುದೇ ಸಂಶಯವಿಲ್ಲ. ಅದಕ್ಕೆ ನಿಮ್ಮೆಲ್ಲರ ಯೋಗದಾನವಾಗ ಬೇಕು ಎಂದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಮಾತ ನಾಡಿ, ಮನುಷ್ಯನಿಗೆ ಕಷ್ಟ ಬಂದಾಗ ಕಷ್ಟ ಕಳೆಯಬೇಕಾದರೆ ಯೋಗ ಬರಬೇಕು ಎನ್ನುತ್ತಾರೆ. ಅದೇ ರೀತಿ ಭೌತಿಕ ಶರೀರಕ್ಕೆ ಬಲ, ತೇಜ ಮತ್ತು ಆರೋಗ್ಯ ಬರಲು ಯೋಗಾಭ್ಯಾಸದ ಅವಶ್ಯಕತೆ ಇದೆ. ದೃಶ್ಯ ಮತ್ತು ಅದೃಶ್ಯದ ಸಮ ಭಾವವೇ ಯೋಗ. ಆರಂಭದಿಂದಲೂ ಯೋಗಭ್ಯಾಸ ಅನುಸರಿಸಿದರೆ ಕಾಯಿಲೆಗಳು ದೂರವಾಗುತ್ತವೆ ಎಂದರು.

ಸಂಸದ ಬಿ. ವೈ. ರಾಘವೇಂದ್ರ ಅವರು ಮಾತನಾಡಿ, ಮೋದೀಜಿ ಯವರು ಯೋಗದ ಮೂಲಕ ಇಡೀ ವಿಶ್ವವನ್ನೇ ಒಂದುಗೂಡಿಸಿದರು ಎಂದರು, ಹಾಗೆಯೇ ೫೬ ಕೇಂದ್ರಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಯೋಗ ಶಿಕ್ಷಣ ಸಮಿತಿಯ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಹಿರಿಯ ಯೋಗ ಶಿಕ್ಷಕರು ಮತ್ತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಭ.ಮ ಶ್ರೀಕಂಠ ರವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸರಸಂಘಚಾಲಕ ಬಿ.ಎ. ರಂಗನಾಥ್ ಉಪಸ್ಥಿತರಿದ್ದರು. ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಹೆಚ್.ವೈ.ಸಂಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಸಂಘದ ಪ್ರಮುಖರಾದ ಗಿರೀಶ್ ಪಟೇಲ್, ಗಿರೀಶ್ ಕಾರಂತ್ ಇನ್ನಿತರರಿದ್ದರು. ಕಾಂಚನ ನಿರೂಪಿಸಿದರು. ದೀಪಿಕಾ ಮತ್ತು ರಾಧಿಕಾ ಪ್ರಾರ್ಥಿಸಿದರು. ಡಾ. ತ್ರಿವೇಣಿ ಸ್ವಾಗತಿಸಿದರು. ಡಾ| ಹೆಚ್.ವೈ. ಸಂಜಯ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *