
ಶಿವಮೊಗ್ಗ :- ವಿಶಿಷ್ಟ ಹಾಗೂ ವಿಭಿನ್ನ ರೀತಿಯ ಕಥಾಹಂದರವುಳ್ಳ ಎಕ್ಸ್ ಅಂಡ್ ವೈ ಚಲನಚಿತ್ರ ಜೂನ್ 26 ರಂದು ತೆರೆಗೆ ಬರಲಿದೆ ಎಂದು ನಿರ್ದೇಶಕ ಡಿ. ಸತ್ಯಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ನಾನು ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಗಳನ್ನು ನಿರ್ದೇಶಿಸಿ ದ್ದೇನೆ. ಎಕ್ಸ್ ಅಂಡ್ ವೈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುವುದರ ಜೊತೆ ಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇ ನೆ. ಈ ಚಿತ್ರ ಆರಂಭದಿಂದಲೂ ಜನರಲ್ಲಿ ಆಸಕ್ತಿ ಮೂಡಿಸಿದೆ. ಇತ್ತೀ ಚೆಗೆ ಬಿಡುಗಡೆಯಾದ ಟ್ರೇಲರ್ ಕೂಡ ಸಾಕಷ್ಟು ಜನಪ್ರಿಯಗೊಂ ಡಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆ ಯಾಗಿ ಮೆಚ್ಚುಗೆ ಪಡೆದಿದೆ ಎಂದರು.
ರಾಜ್ಯಾದ್ಯಂತ ಈ ಚಿತ್ರ ಬಿಡುಗಡೆ ಯಾಗುತ್ತಿದ್ದು, ಚಿತ್ರಕ್ಕೆ ಲವಿತ್ ಛಾಯಾಗ್ರಹಣ, ಡಿ.ಎಸ್. ಕೆಂಪ ರಾಜು ಸಂಕಲನ, ಕೌಶಿಕ್ ಹರ್ಷ ಸಂಗೀತ ನಿರ್ದೇಶನ, ವರದರಾಜ್ ಕಲಾ ನಿರ್ದೇಶನ ಮಾಡಿದ್ದು, ಈ ಚಿತ್ರವನ್ನು ಸತ್ಯ ಪಿಕ್ಚರ್ಸ್ ನಿರ್ಮಿ ಸಿದೆ. ಬೃಂದಾ ಆಚಾರ್ಯ, ಡಿ. ಸತ್ಯಪ್ರಕಾಶ್, ಅಯಾನಾ, ಅಥರ್ವ ಪ್ರಕಾಶ್, ದೊಡ್ಡಣ್ಣ, ವೀಣಾ ಸುಂದರ್, ಸುಂದರ್, ಹರಿಣಿ, ಧರ್ಮಣ್ಣ ಕಡೂರು, ತೇನಪ್ಪನ್ ಮುಂತಾದವರು ನಟಿಸಿದ್ದು, ಚಿತ್ರದ ೫ ಹಾಡುಗಳು ಇಂದು ಬಿಡುಗಡೆಗೊ ಳ್ಳಲಿದೆ ಎಂದರು.
ನಟಿ ಬೃಂದಾ ಆಚಾರ್ಯ, ನಟಿ ಅಯಾನಾ ಮಾತನಾಡಿದರು. ಹಿರಿಯ ಪತ್ರಕರ್ತ ವೈದ್ಯನಾಥ್, ಕೈಗಾರಿ ಕೋದ್ಯಮಿ ಹರ್ಷ ಕಾಮ ತ್, ಶಶಿಕುಮಾರ್, ರಘು ಮತ್ತಿ ತರರು ಇದ್ದರು.