
ಶಿವಮೊಗ್ಗ :- ನ್ಯಾಯ, ಧರ್ಮ ಹಾಗೂ ತ್ಯಾಗದ ಮಾರ್ಗದಲ್ಲಿ ನಡೆದ ಮೇರು ವ್ಯಕ್ತಿತ್ವದವರಾಗಿದ್ದ ಹಿರಿಯೂರು ಕೃಷ್ಣಮೂರ್ತಿಯವರ ಕೆಲಸವನ್ನು ಇಂದಿನ ಪೀಳಿಗೆ ಮುಂದುವರಿಸಿಕೊಂಡು ಹೋಗಬೇಕಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಕರೆ ನೀಡಿದರು.

ಹಿರಿಯೂರು ಕೃಷ್ಣಮೂರ್ತಿ ಸಂಸ್ಮರಣಾ ಸಮಿತಿ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷ್ಣಸ್ಮೃತಿ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ತ್ಯಾಗ ಮಾಡಿದ ವ್ಯಕ್ತಿ ಅಮೃತತ್ವ ಪಡೆಯುತ್ತಾನೆ. ಹೀಗಾಗಿ ಈ ದೇಶದಲ್ಲಿ ತ್ಯಾಗಕ್ಕೆ ಹೆಚ್ಚು ಬೆಲೆ ಇದೆ. ತ್ಯಾಗ ಮಾಡಿದ ವ್ಯಕ್ತಿಗಳನ್ನು ಸದಾಸ್ಮರಿಸುತ್ತಾರೆ. ಆ ಸಾಲಿನಲ್ಲಿ ಎಚ್‌ಕೆ ಸೇರುತ್ತಾರೆ. ಅವರು ಗತಿಸಿದ ಎರಡು ದಶಕಗಳ ಬಳಿಕ ಅವರ ಸ್ಮರಣೆ ಮಾಡಲಾಗುತ್ತದೆ. ಅವರ ಬಗ್ಗೆ ೭೦ಕ್ಕೂ ಹೆಚ್ಚು ಲೇಖನಗಳನ್ನು ಬರೆದು ಪುಸ್ತಕ ಪ್ರಕಟಿಸಲಾಗುತ್ತದೆ ಎಂದರೆ ಅವರ ವ್ಯಕ್ತಿತ್ವ ಹೇಗಿತ್ತು ಎಂಬುದು ಗೊತ್ತಾಗುತ್ತದೆ ಎಂದರು.
ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿದರು:
ಅವರು ಗತಿಸಿದಾಗಲೇ ಪುಸ್ತಕ ಪ್ರಕಟಿಸಿ ಅವರ ಸ್ಮರಣೆ ಮಾಡಿದ್ದರೆ ಅದು ದೊಡ್ಡ ವಿಷಯವಾಗುತ್ತಿರಲಿಲ್ಲ. ಎರಡು ದಶಕದ ಬಳಿಕ ಪುಸ್ತಕ ಬಂದಿರುವುದು ಅನುಕೂಲವೇ ಆಗಿದೆ. ಬಯಲು ಸೀಮೆಯಿಂದ ಮಲೆನಾಡಿಗೆ ಬಂದ ಹಿರಿಯೂರು ಕೃಷ್ಣಮೂರ್ತಿ ಮತ್ತು ಬೂಕನಕೆರೆ ಯಿಂದ ಬಂದ ಯಡಿಯೂರಪ್ಪ ನವರು ತಮ್ಮ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸ ಮಾಡಿzರೆ ಎಂದು ಶ್ಲಾಸಿದರು.

ನೂರಾರು ಕಾರ್ಯಕರ್ತರನ್ನು ತಯಾರು ಮಾಡುವ ಶಿಲ್ಪಿಯ ಕೆಲಸ ಮಾಡಿದರು. ಅವರೆಂದೂ ವೇದಿಕೆಗೆ ಬಂದಿಲ್ಲ. ಪ್ರಚಾರ ಬೇಕೆಂದು ಬಯಸಿಲ್ಲ. ಆಸೆ ಆಕಾಂಕ್ಷೆಯಿಲ್ಲದೆ ಕೆಲಸ ಮಾಡಿದವರು. ಸಂಘಟನೆ ಹಾಗೂ ರಾಷ್ಟ್ರ ಧರ್ಮದ ಕೆಲಸ ಮಾಡಿzರೆ. ಉಮಾ ಅತ್ತಿಗೆ ಕೂಡ ಅವರಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡಿzರೆ. ಸಂಘದ ವಿಚಾರದಲ್ಲಿ ಸಹಧರ್ಮಿಣಿಯ ಕೆಲಸ ಮುಂದುವರಿಸಿzರೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ವಿಸ್ತಾರವಾಗಿ ಹೋಗು ವುದೇ ಜೀವನ, ಸಂಕುಚಿತವಾಗುತ್ತಾ ಹೋಗುವುದೇ ಮರಣವೆಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆ ರೀತಿ ಜೀವನದಲ್ಲಿ ವಿಸ್ತಾರತೆ ಕಂಡುಕೊಂಡವರು ಹಿರಿಯೂರು ಕೃಷ್ಣಮೂರ್ತಿ ಎಂದು ಹೇಳಿದರು.
ನನಗೆ ಹಿರಿಯಣ್ಣನ ಕಳೆದುಕೊಂಡ ನೋವಿದೆ:
ಅವರು ಆದರ್ಶ ವ್ಯಕ್ತಿತ್ವದ ಸಂಘಟಕರಾಗಿ, ನನಗೆ ಹಿರಿಯಣ್ಣನವರಾಗಿದ್ದರು. ಸಮಸ್ಯೆ ಬಂದಾಗ ಅವರನ್ನು ಸಂಪರ್ಕ ಮಾಡುತ್ತಿz. ಅದಕ್ಕೆ ಅವರು ಪರಿಹಾರ ಹುಡುಕುತ್ತಿದ್ದರು. ಹಿರಿಯಣ್ಣನ ಕಳೆದುಕೊಂಡ ನೋವು ನನ್ನಲ್ಲಿದೆ. ಈ ಸಂದರ್ಭದಲ್ಲಿ ಅವರ ಬಗ್ಗೆ ಪುಸ್ತಕ ತಂದಿರುವುದು ಸಂತೋಷದ ಸಂಗತಿ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಶತಮಾನೋತ್ಸವ ಸಂಭ್ರಮ. ಹೀಗಾಗಿ ಈ ಸಂದರ್ಭದಲ್ಲಿ ಹಿರಿಯೂರು ಕೃಷ್ಣಮೂರ್ತಿಗಳ ಸ್ಮರಣೆ ಸಂದರ್ಭೋಚಿತವಾಗಿದೆ. ಅವರ ಸಂಘಟನಾ ಕೌಶಲ್ಯವನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಂಡು ಮುಂದುವರಿಯಬೇಕೆಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಜ್ಯೇಷ್ಠ ಪರಚಾರಕರಾದ ಸು. ರಾಮಣ್ಣ, ಜ್ಯೇಷ್ಠ ಕಾರ್ಯಕರ್ತ ಭ.ಮ.ಶ್ರೀಕಂಠ, ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಕೇಂದ್ರೀಯ ವಿವಿ ಕುಲಾಧಿಪತಿ ಪಿ.ವಿ. ಕೃಷ್ಣ ಭಟ್, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಆರ್‌ಎಸ್‌ಎಸ್ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ ಇದ್ದರು. ಈ ಸಂದರ್ಭದಲ್ಲಿ ಉಮಾ ಹಿರಿಯೂರು ಕೃಷ್ಣಮೂರ್ತಿಯವರನ್ನು ಸನ್ಮಾನಿಸಲಾಯಿತು.
