
ಶಿವಮೊಗ್ಗ :- ಒಂದು ಸಿದ್ಧಾಂತ ಮತ್ತು ಧ್ಯೇಯವನ್ನೇ ಗುರಿಯನ್ನಾಗಿಸಿಟ್ಟುಕೊಂಡು ಇಡೀ ಜೀವನವನ್ನೇ ಕಾರ್ಮಿಕರಿಗೆ ಮೀಸಲಿಟ್ಟವರು ಡಿ.ಕೆ. ಸದಾಶಿವ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದಿಂದ ನಗರದ ರೋಟರಿ ಬ್ಲಡ್‌ಬ್ಯಾಂಕ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಎಂಎಸ್ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಕೆ. ಸದಾಶಿವ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವಿವಾಹಿತರಾಗಿದ್ದ ಅವರು, ಇಡೀ ಜೀವನವನ್ನೇ ಕಾರ್ಮಿಕರಿಗಾಗಿ ಅರ್ಪಣೆ ಮಾಡಿದ್ದರು ಎಂದರು.

ವಿಧಾನ ಪರಿಷತ್ ಮಾಜಿ ಶಾಸಕ ಆರ್.ಕೆ. ಸಿದ್ದರಾಮಣ್ಣ ನುಡಿನಮನ ಸಲ್ಲಿಸಿ, ವಿಚಾರಕ್ಕಾಗಿ ಕೆಲಸ ಮಾಡಿದವರು ಸದಾಶಿವ. ರಾಷ್ಟ್ರೀಯ ವಿಚಾರಗಳಿಗೆ ಬದ್ಧರಾಗಿ ಲಾರ್ಮಿಕ ಸಂಘಟನೆ ಗಟ್ಟಿಗೊಳ್ಳಲು ಸಹಕಾರಿ ಯಾಗಿದ್ದರು. ನಿವೃತ್ತಿಯಾಗಿದ್ದರೂ ಕೂಡ ವಿಚಾರದಿಂದ ನಿವೃತ್ತಿಯಾ ಗಿರಲಿಲ್ಲ. ಲಪನೆಯ ಕ್ಷಣದವರೆಗೂ ಕಾರ್ಮಿಕರಿಗೆ ಸಿಕ್ಕಬೇಕಾದ ಸೌಲಭ್ಯಗಳ ಬಗ್ಗೆಯೇ ಚಿಂತನೆ ಮಾಡುತ್ತಿದ್ದ ವ್ಯಕ್ತಿತ್ವ ಅವರದ್ದಾಗಿತ್ತು ಎಂದರು.
ಮಾಜಿ ಶಾಸಕ ಆಯನೂರು ಮಂಜುನಾಥ ನುಡಿನಮನ ಸಲ್ಲಿಸಿ, ಸದಾಶಿವ ಅವರ ಪರಿಚಯವಾಗಿದ್ದು ಬಳ್ಳಾರಿ ಜೈಲಿನಲ್ಲಿ. ಬಹುಭಾಷಾ ಪಾಂಡಿತ್ಯ ಅವರಲ್ಲಿತ್ತು. ಯಾವ ಭಾಷೆಯ ಕಾರ್ಮಿಕರು ಬರು ತ್ತಾರೋ ಅದೇ ಭಾಷೆ ಸಂವಹನ ನಡೆಸುತ್ತಿದ್ದರು. ಹೀಗಾಗಿ ಅವರು ಬಹುಬೇಗ ಕಾರ್ಮಿಕರಿಗೆ ಆಪ್ತರಾಗುತ್ತಿದ್ದರು ಎಂದರು.
ಯಾವುದೇ ಕಾರ್ಖಾನೆಗಳಲ್ಲಿ ಕಾರ್ಮಿಕರಿಗೆ ತೊಂದರೆಯಾದರೆ ಸಹಿಸುತ್ತಿರಲಿಲ್ಲ. ಅದನ್ನು ಪ್ರತಿಭಟಿಸುವ ಹಾಗೂ ಸಿಕ್ಕಬೇಕಾದ ಸೌಲಭ್ಯ ಕೊಡಿಸುವವರೆಗೂ ಬಿಡುತ್ತಿರಲಿಲ್ಲ. ಹೀಗಾಗಿ ಅವರು ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು.

ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರಿ ನುಡಿನಮನ ಸಲ್ಲಿಸಿ, ಭಾರತೀಯ ದೃಷ್ಟಿ ಕೋನ ಇಟ್ಟುಕೊಂಡು ಹುಟ್ಟಿದ ಸಂಘ ಬಿಎಂಎಸ್ ಅಂತಹ ಸಂಘದಲ್ಲಿ ತೊಡಗಿಸಿಕೊಂಡು ಕಾರ್ಮಿಕರಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ. ರಾಜಕೀಯ ಸಂಘಟನೆಯಲ್ಲಿ ಕೆಲಸ ಮಾಡುವುದು ಸುಲಭ. ಆದರೆ ಕಾರ್ಮಿಕ ಸಂಘಟನೆಯಲ್ಲಿ ಕೆಲಸ ಮಾಡುವುದು ಕಷ್ಟ. ಕಾರ್ಮಿಕ ನಾಯಕನಿಗೆ ಹತ್ತುಹಲವಾರು ಮುಖ ಇರಬೇಕಾಗುತ್ತದೆ. ಅಂತಹ ವ್ಯಕ್ತಿತ್ವ ಅವರಲ್ಲಿತ್ತು ಎಂದರು.
ನಿವೃತ್ತ ಅಧ್ಯಾಪಕ ಎ.ಜೆ. ರಾಮಚಂದ್ರ ಮಾತನಾಡಿ, ತುಂಬಾ ಓದುವ ಹವ್ಯಾಸ ಅವರಲ್ಲಿತ್ತು. ಎಲ್ಲ ರೊಂದಿಗೆ ಬೆರೆಯುತ್ತಿದ್ದರು. ಸಾಹಿತ್ಯ, ನಾಟಕ, ಕಾದಂಬರಿಗಳಲ್ಲಿ ಆಸಕ್ತಿ ಹೊಂದಿದ್ದರು. ಹಾಸ್ಯಭರಿತ ಜೀವನ ಅವರzಗಿತ್ತು. ಮನೆಯಲ್ಲಿ ಅನುಕೂ ಲದ ಸ್ಥಿತಿ ಇಲ್ಲದಿದ್ದರೂ ಎಂದಿಗೂ ಅದನ್ನು ತೋರ್ಪಡಿಸಿ ದವರಲ್ಲ. ಅವ ಧೂತರ ಜೀವನ ಶೈಲಿ ಅವರಲ್ಲಿತ್ತು. ಯಾವುದಕ್ಕೂ ಅಂಟಿಕೊಂಡಿರಲಿಲ್ಲ. ಸರಳವಾದ ಜೀವನ ನಡೆಸಿದವರು. ಮಡಿವಂತ ರಾಗಿ ಎಂದೂ ಬದುಕಿದವರಲ್ಲ ಎಂದರು.

ಬಿಎಂಎಸ್ ರಾಜ್ಯ ಕಾರ್ಯದರ್ಶಿ ವಿಶ್ವನಾಥ್ ಮಾತನಾಡಿ, ಸದಾಶಿವ ಅವರ ಸೇವೆ ರಾಜ್ಯದ ಎಲ್ಲ ಕಾರ್ಮಿಕರಿಗೂ ಸಿಕ್ಕಿದೆ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕಾರ ಮಾಡುತ್ತಿದ್ದ ನಾಯಕ. ಸೈದ್ಧಾಂತಿಕ ವಾಗಿ ಬದ್ಧರಾಗಿದ್ದರು. ಕಾರ್ಮಿಕರ ಹಿತಕಾಪಾಡುವಲ್ಲಿಯೂ ಇವರ ಪಾತ್ರ ಮುಖ್ಯವಾಗಿತ್ತು ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಪ್ರಮುಖರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಉದ್ಯಮಿ ಹರ್ಷ ಕಾಮತ್, ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಕುಪ್ಪೆಂದ್ರ ರಾಜ್ಯ ಅಧ್ಯಕ್ಷ ಪ್ರದೀಪ್ ಹೊನ್ನಪ್ಪ, ಪೆರುಮಾಳ್, ಪದ್ಮನಾಭ ಭಟ್ ಮತ್ತಿತರರಿದ್ದರು.
