
ಶಿವಮೊಗ್ಗ :- ನನ್ನ ಒಲುಮೆಯ ಗೂಡು ಎಂಬ ರಾಷ್ಟ್ರಕವಿ ಕುವೆಂಪು ಅವರ ವಿರಚಿತ ಹಾಡು ವಿಶೇಷ ಗೀತಾ ಗಾಯನ ಸ್ಪರ್ಧೆಯನ್ನು ಡಿ. 22ರ ಭಾನುವಾರ ಮಧ್ಯಾಹ್ನ 3.30ಕ್ಕೆ ಮಥುರಾ ಪ್ಯಾರಡೇಸ್ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕರ್ನಾಟಕ ಸುಗಮ ಸಂಗೀತ ಪರಿಷತ್ತು ಶಿವಮೊಗ್ಗ ಜಿಲ್ಲಾ ಘಟಕದಿಂದ ಆಯೋಜಿಸಿರುವ ಈ ಸ್ಪರ್ಧಾ ಕಾರ್ಯಕ್ರಮದಲ್ಲಿ ಹಾಡುವ ಆಸಕ್ತರು 9945150204ರಲ್ಲಿ ಸಂಪರ್ಕಿಸಲು ಅಧ್ಯಕ್ಷೆ ಶಾಂತಾ ಎಸ್. ಶೆಟ್ಟಿ ಕೋರಿದ್ದಾರೆ.