
ಶಿವಮೊಗ್ಗ :- ವಿನೋಬನಗರ ಸ್ನೇಹಜೀವಿ ಗೆಳೆಯರ ಬಳಗದಿಂದ ವಿನೋಬನಗರ ಸರ್ಕಾರಿ ಪ್ರೌಢಶಾಲೆ ವತಿಯಿಂದ ಸಂಚಾರಿ ಹಾಗೂ ವಿನೋಬನಗರ ಪೊಲೀಸ್ ಠಾಣೆ ಸಹಯೋಗದಲ್ಲಿ ರಸ್ತೆ ಸುರಕ್ಷತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
ವಿನೋಬನಗರ ಸರ್ಕಾರಿ ಪ್ರೌಢಶಾಲೆಯಿಂದ ಪೋಲಿಸ್ ಚೌಕಿ ವೃತ್ತದವರೆಗೂ ಬ್ಯಾಂಡ್ ಸೆಟ್ ಮುಖಾಂತರ ಜನರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲಾಯಿತು.
ಸರ್ಕಲ್ ಇನ್ಸ್‌ಪೆಕ್ಟರ್ ಸಂತೋಷ್ ಕುಮಾರ್, ವಿನೋಬನಗರ ಠಾಣೆ ಪಿಎಸ್‌ಐ ಭಾರತಿ, ಮಂಜುನಾಥ್, ಯೋಗೇಶ್ ಹಾಗೂ ಪೊಲೀಸ್ ಇಲಾಖೆಯವರಿದ್ದರು. ವಿನೋಬನಗರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ್, ಬಳಗದ ಅಧ್ಯಕ್ಷ ಗಿರೀಶ್ ಜಿ. ಶೆಟ್ಟಿ ಕಾರ್ಯದರ್ಶಿ ಸಂತೋಷ್, ಗೌರವಾಧ್ಯಕ್ಷ ಶರತ್‌ಚಂದ್ರ, ಕಂಟ್ರಾಕ್ಟರ್ ರವೀಶ್, ಶಿವಶರಣ ಸೇರಿದಂತೆ ಹಲವರಿದ್ದರು.