google.com, pub-9939191130407836, DIRECT, f08c47fec0942fa0

ಶಿವಮೊಗ್ಗ :- ಶ್ರೀ ಕನಕ ದಾಸರ 537ನೇ ಜಯಂತ್ಯೋತ್ಸವ ಮತ್ತು ಪತಂಜಲಿ ಸಂಸ್ಥೆಯ 27ನೇ ವರ್ಷದ ಅಂಗವಾಗಿ ಇಂದು ಕುವೆಂಪು ರಂಗಮಂದಿರದಲ್ಲಿ ರಾಜ್ಯಮಟ್ಟದ ಶ್ರೀ ಕನಕದಾಸರ ಕೀರ್ತನೋತ್ಸವ ಗೀತಾಗಾಯನ ಸ್ಪರ್ಧೆ ನಡೆಯಿತು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪತಂಜಲಿ ಸಂಸ್ಥೆಯ ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವುಲೆ, ಪ್ರಮುಖರಾದ ಡಾ. ಪಿ. ಬಾಲಪ್ಪ, ಎಂ. ಪೂವಯ್ಯ, ಪರಿಸರ ಸಿ. ರಮೇಶ್, ನಿರ್ದೇಶಕರಾದ ಸುಶೀಲ ಭವಾನಿಶಂಕರ್‌ರಾವ್, ಭವಾನಿಶಂಕರ್‌ರಾವ್, ನರಸಿಂಹಮೂರ್ತಿ, ಸರಳಾವಾಸನ್, ಶೋಭಾ ಅನಂದ್, ಸೌಭಾಗ್ಯ ಇನ್ನಿತರರು ಉಪಸ್ಥಿತರಿದ್ದರು.

ಜನಮನ ಸೆಳೆದ ಶಿವಮೊಗ್ಗ ನಾಗರಾಜ್ ಅವರ ವನ್ಯಜೀವಿ ಛಾಯಾಚಿತ್ರ ಪ್ರದರ್ಶನ

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ ಹಮ್ಮಿಕೊಂಡಿದ್ದ ಕನಕ ಜಯಂತಿ ಕಾರ್ಯಕ್ರಮದ ಅಂಗವಾಗಿ ಅಂತರ ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ವಿಜೇತ ಪತ್ರಿಕೆ ಮತ್ತು ವನ್ಯಜೀವಿ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ಸೆರೆಹಿಡಿದ ವನ್ಯಜೀವಿ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಜನಮನ ಸೆಳೆಯಿತು.

Leave a Reply

Your email address will not be published. Required fields are marked *