ಶಿವಮೊಗ್ಗ :- ವಿಶ್ವ ಆನೆ ದಿನಾಚರಣೆ ಹಿನ್ನೆಲೆಯಲ್ಲಿ ಸಕ್ರೆಬೈಲಿನಲ್ಲಿ ಅದ್ಧೂರಿಯಾಗಿ ಎರಡು ಆನೆ ಮರಿಗಳಿಗೆ ಇಂದು ನಾಮಕರಣ ಮಾಡಲಾಯಿತು.

ತುಂಗಾ ಮತ್ತು ಚಾಮುಂಡಿ ಎಂದು ಎರಡು ಆನೆ ಮರಿಗಳಿಗೆ ಅಧಿಕಾರಿಗಳು ಸಂಪ್ರದಾಯದಂತೆ ಪೂಜೆ ಸಲ್ಲಿಸಿ, ಮರಿಗಳ ಕಿವಿಯಲ್ಲಿ ಹೆಸರನ್ನು ಹೇಳುವ ಮೂಲಕ ಅರಣ್ಯ ಇಲಾಖೆಯ ಸಿಸಿಎಫ್ ಹನುಮಂತಪ್ಪ ಹಾಗೂ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ನಾಮಕರಣ ಮಾಡಿದರು.
ಭಾನುಮತಿಯ ಮರಿಗೆ ಚಾಮುಂಡಿ, ನೇತ್ರಾವತಿ ಮರಿಗೆ ತುಂಗಾ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಯಿತು. ಆನೆಯ ಕಿವಿಗೆ ಮೂರುಬಾರಿ ಚಾಮುಂಡಿ ಹಾಗೂ ತುಂಗಾ ಎಂದು ಹೇಳುವ ಮೂಲಕ ನಾಮಕರಣ ಮಾಡಲಾಯಿತು.

ಈ ವೇಳೆ 23 ಆನೆಗಳಿಗೆ ಬಣ್ಣಗಳಿಂದ ಅಲಂಕಾರ ಮಾಡಲಾಗಿತ್ತು. ದಸರಾ ಆನೆಗಳಂತೆ ಸಕ್ರೆಬೈಲಿನ ಆನೆಗಳು ಕಂಗೊಳಿಸುತ್ತಿವೆ. ಅರ್ಜುನ, ಸಾಗರ, ಬಹದ್ದೂರ್, ಆನೆಗಳ ಸಾಲಿನಲ್ಲಿ ನಿಲ್ಲಿಸಿ ಕಾಡಾನೆ ತುಂಗಾ ಮತ್ತು ಚಾಮುಂಡಿಗೆ ಪುರೋಹಿತ ಮಧು ಭಟ್ಟರ ನೇತೃತ್ವದಲ್ಲಿ ನಾಮಕರಣ ಮಾಡಲಾಯಿತು.