google.com, pub-9939191130407836, DIRECT, f08c47fec0942fa0

Category: ಫ್ಲಾಶ್‌ ನ್ಯೂಸ್

ಇ-ಆಸ್ತಿ ಅಭಿಯಾನದ ಸದುಪಯೋಗ ಪಡೆಯಲು ಜಿಲ್ಲಾಧಿಕಾರಿ ಕರೆ

ಶಿವಮೊಗ್ಗ :- ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತ ಹಾಗೂ ರೆವಿನ್ಯೂ ಜಗದಲ್ಲಿ ನಿರ್ಮಿಸಿರುವ ಕಟ್ಟಡ, ನಿವೇಶನಗಳ ಸ್ವತ್ತುಗಳಿಗೆ ಇ-ಆಸ್ತಿ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.…

ಶಿವಮೊಗ್ಗ ಪ್ರಯಾಣಿಕರಿಗೆ ಗುಡ್ ನ್ಯೂಸ್… ಪ್ರಯಾಗ್‌ರಾಜ್ ಕುಂಬಮೇಳಕ್ಕೆ ಶಿವಮೊಗ್ಗದಿಂದ ವಿಶೇಷ ರೈಲು

ಶಿವಮೊಗ್ಗ :- ಪ್ರಯಾಗ್‌ರಾಜ್‌ನ ಕುಂಬಮೇಳದಲ್ಲಿ ಪಾಲ್ಗೊಳ್ಳಲು ಶಿವಮೊಗ್ಗ ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪೆ. 22ರಂದು ಶಿವಮೊಗ್ಗದಿಂದ ವಿಶೇಷ ರೈಲ್ ನ್ನು ಬಿಡಲಾಗುತ್ತಿದೆ. ಸಾರ್ವಜನಿಕರ ಕೋರಿಕೆ ಮೇರೆಗೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ರೈಲ್ವೆ ಸಚಿವರಲ್ಲಿ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದಿಂದ…

ವೀರ ಮರಣ ಹೊಂದಿದ ಮಂಜುನಾಥ್ ರಿಗೆ ಶಿವಮೊಗ್ಗದಲ್ಲಿ ಅಂತಿಮ ನಮನ…

ಶಿವಮೊಗ್ಗ :- ವೀರ ಮರಣವನ್ನಪ್ಪಿದ ಯೋಧ ಹೊಸನಗರದ ಮಂಜುನಾಥ್ ಗೆ ಶಿವಮೊಗ್ಗ ನಗರದ ನಾಗರಿಕರಿಂದ ಬೆಕ್ಕಿನ ಕಲ್ಮಟ್ಟದ ಬಳಿಯಿಂದ ಬಸ್ ನಿಲ್ದಾಣದವರೆಗೆ ಯೋಧನ ಮೃತ ದೇಹಕ್ಕೆ ಪುಷ್ಪ ನಮನ ಸಲ್ಲಿಸಿ ಅಂತಿಮ ವಿದಾಯ ಹೇಳಲಾಯಿತು. ಶಾಸಕ ಚನ್ನಬಸಪ್ಪ, ಸಂಸದ ಬಿ.ವೈ. ರಾಘವೇಂದ್ರ…

ಶಿವಮೊಗ್ಗ ಹೌಸಿಂಗ್ ಸೊಸೈಟಿ ಅಧ್ಯಕ್ಷರಾಗಿ ಮರಿಯಪ್ಪ, ಉಪಾಧ್ಯಕ್ಷರಾಗಿ ಹೊನ್ನಪ್ಪ ಹಾಗೂ ಖಜಾಂಚಿಯಾಗಿ ರಂಗನಾಥ್

ಶಿವಮೊಗ್ಗ :- ನಗರದ ಪ್ರತಿಷ್ಠಿತ ಶಿವಮೊಗ್ಗ ಹೌಸಿಂಗ್-ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಎಸ್.ಕೆ. ಮರಿಯಪ್ಪ, ಉಪಾಧ್ಯಕ್ಷರಾಗಿ ಸಿ. ಹೊನ್ನಪ್ಪ ಮತ್ತು ಖಜಾಂಚಿಯಾಗಿ ಕೆ. ರಂಗನಾಥ್ ಗೆಲುವು ಸಾಧಿಸಿದ್ದಾರೆ. ಅಧ್ಯಕ್ಷ , ಉಪಾಧ್ಯಕ್ಷ ಮತ್ತು ಖಜಂಚಿ ಸ್ಥಾನಗಳ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ…

ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಜನಜಾತ್ರೆ, ದೂಳೋ ದೂಳು, ಕಾರಣವೇನು ಗೊತ್ತಾ…?

ಶಿವಮೊಗ್ಗ :- ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ನಿನ್ನೆಯಿಂದ (ಶುಕ್ರವಾರ) ಶುರುವಾಗಿರುವ ಕರಕುಶಲ ಪ್ರದರ್ಶನ ಮತ್ತು ಫಲ-ಪುಷ್ಪ ಪ್ರದರ್ಶನಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಜನರು ಭಾಗವಹಿಸಿ ವೀಕ್ಷಿಸುತ್ತಿದ್ದಾರೆ. ಒಂದು ಕಡೆ ಅತ್ಯಂತ ಆಕರ್ಷಿತವಾಗಿ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದ್ದರೆ ಇನ್ನೊಂದು ಕಡೆ…

ತ್ಯಾವರೆಕೊಪ್ಪ ಹುಲಿ-ಸಿಂಹದಾಮದ ಅಂಜನಿ ಹುಲಿ ಸಾವು…

ಶಿವಮೊಗ್ಗ :- ಇಲ್ಲಿನ ತ್ಯಾವರೆ ಕೊಪ್ಪದ ಹುಲಿ ಮತ್ತು ಸಿಂಹ ಧಾಮದ ಹುಲಿ ಅಂಜನಿ, ಬಹು ಅಂಗಾಗ ವೈಫಲ್ಯದಿಂದ ನಿನ್ನೆ ರಾತ್ರಿ ಮೃತಪಟ್ಟಿದೆ ಎಂದು ಮೃಗಾಲಯದ ಕಾರ್ಯನಿರ್ವಾ ಹಕ ನಿರ್ದೇಶಕ ಅಮರಾಕ್ಷರ ತಿಳಿಸಿದ್ದಾರೆ. ಅಂಜನಿ ವಯೋ ಸಹಜ ಬಹು ಅಂಗಾಂಗ ವೈಫಲ್ಯದಿಂದ…

ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಆಹ್ವಾನ

ಶಿವಮೊಗ್ಗ :- ಕೊಡಗು ಸೈನಿಕ ಶಾಲೆಯಲ್ಲಿ 6ನೇ ತರಗತಿ (ಹುಡುಗ ಮತ್ತು ಹುಡುಗಿಯರು) ಹಾಗೂ 9 ನೇ ತರಗತಿ (ಹುಡುಗರು ಮಾತ್ರ)ಯ ಪ್ರವೇಶಕ್ಕಾಗಿ ಅರ್ಜಿ ಕರೆಯಲಾಗಿದೆ. ಜ. 13 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ. ಜಾಲತಾಣದಲ್ಲಿ ಮಾತ್ರ ಸಲ್ಲಿಸಬಹುದು. ಹಾಗೂ ಲಿಖಿತ…

ತುಪ್ಪೂರು ಬಳಿ ಆನೆ ದಾಳಿಗೆ ಬಾಳೆ, ಜೋಳ ನಾಶ ಆತಂಕದಲ್ಲಿ ಗ್ರಾಮಸ್ಥರು

ಶಿವಮೊಗ್ಗ :- ಇತ್ತೀಚೆಗಷ್ಟೆ ಶೆಟ್ಟಹಳ್ಳಿ ಅಭಯಾರಣ್ಯ ಸುತ್ತಮುತ್ತಲ ಗ್ರಾಮಗಳ ರೈತರ ತೋಟ ಗದ್ದೆಗಳಿಗೆ ದಾಳಿ ನಡೆಸಿದ ಆನೆಗಳು ಸಾಕಷ್ಟು ಬೆಳೆ ಹಾನಿ ಮಾಡಿರುವ ಬೆನ್ನಲ್ಲೇ ನಿನ್ನೆ ರಾತ್ರಿ ಚೋರಡಿ ಸಮೀಪದ ತುಪ್ಪೂರು ಗ್ರಾಮದ ತೋಟಗಳಿಗೆ ದಾಳಿ ಮಾಡಿವೆ. ತುಪ್ಪೂರು ಗ್ರಾಮದ ಲೋಕೇಶ್…

ತಿಂಗಳಿನಿಂದ ಚರಂಡಿ ಸೇರುತ್ತಿರುವ ನೀರುತಕ್ಷಣ ಕ್ರಮಕ್ಕೆ ಆಗ್ರಹ

ಶಿವಮೊಗ್ಗ :- ಕಳೆದೊಂದು ತಿಂಗಳಿನಿಂದ ಕುಡಿಯುವ ನೀರು ಚರಂಡಿ ಪಾಲಾಗುತ್ತಿದ್ದು, ಹೇಳುವವರು, ಕೇಳುವವರಿಲ್ಲದೆ ಲಕ್ಷಾಂತರ ಲೀಟರ್ ಕುಡಿಯುವ ನೀರು ಸೋರಿಕೆಯಾಗುತ್ತಿದೆ. ರಾಜೇಂದ್ರ ನಗರದ ರೈಲ್ವೆ ಟ್ರ್ಯಾಕ್ ಮತ್ತು ಪಾರ್ಕ್ ಮಧ್ಯದಲ್ಲಿ ಇರುವ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್‌ನಲ್ಲಿ ಅತೀ ಹೆಚ್ಚು ನೀರು…

ಚೂಯಿಂಗ್ ಗಮ್ ಗಂಟಲಲ್ಲಿ ಸಿಲುಕಿ ಉಸಿರು ಗಟ್ಟಿ ನಾಲ್ಕು ವರ್ಷದ ಮಗು ಸಾವು…!

ನವದೆಹಲಿ :- ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಒಂದು ದುರಂತ ಘಟನೆಯಲ್ಲಿ, ನಾಲ್ಕು ವರ್ಷದ ಮಗುವೊಂದು ಅಂಗಡಿಯಿಂದ ಖರೀದಿಸಿದ ಚೂಯಿಂಗ್ ಗಮ್ ಅನ್ನು ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ರಾಹುಲ್ ಕಶ್ಯಪ್ ಅವರ ಮಗ ಎಂದು ಗುರುತಿಸಲಾದ ಮಗು ಭಾನುವಾರ ಸಂಜೆ ಚೂಯಿಂಗ್…